ಚಿಕ್ಕಬಳ್ಳಾಪುರ :ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕ್ರೀಡೆಗಳಿಂದ ನಾಯಕತ್ವ ವೃದ್ದಿಯಾಗುವುದಲ್ಲದೆ,ಮನೋದೈಹಿಕ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಡಿಡಿಪಿಐ ವಿ.ರಮೇಶ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣದಂತೆ ಕ್ರೀಡೆಗಳನ್ನು ಕೂಡ ಸಮಾನವಾಗಿ ನೋಡಬೇಕು.ಕ್ರೀಡೆಗಳಲ್ಲಿ ಭಾಗಿಯಾದಾಗ ಸೋಲು ಗೆಲುವು ಸಾಮಾನ್ಯ.ಇದನ್ನು ಲೆಕ್ಕಿಸದೆ ಕ್ರೀಡಾ ಮನೋಭಾವದಿಂದ ಆಟೋಟಗಳಲ್ಲಿ ಭಾಗಿಯಾಗಬೇಕು.ಹೋಬಳಿ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದವರು ತಾಲೂಕು ಮಟ್ಟದ ಕ್ರೀಡೆಗಳಲ್ಲಿ ಭಾಗಿಯಾಗಿದ್ದೀರಿ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತೀರಿ, ಅಲ್ಲಿಯೂ ಉತ್ತಮ ಪ್ರದರ್ಶನ ತೋರಿದಲ್ಲಿ ರಾಜ್ಯಮಟ್ಟದಲ್ಲಿ ಅವಕಾಶ ದೊರೆಯಲಿದೆ.ಬಿಸಲನ್ನು ಲೆಕ್ಕಿಸದೆ ಕ್ರೀಡೆಯಲ್ಲಿ ಭಾಗವಹಿಸಿರುವ ಎಲ್ಲಾ ಶಾಲೆಗಳ ಕ್ರೀಡಾಪಟು ಗಳಿಗೆ ಧನ್ಯವಾದಗಳನ್ನು ಶುಭಾಶಯ ಕೋರುತ್ತೇನೆ ಎಂದರು.
ಇದನ್ನೂ ಓದಿ: Chikkanayakanahalli News: ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ
ಬಿಇಒ ಸುಕನ್ಯ ಮಾತನಾಡಿ ಬೆಳಗ್ಗೆ ನಡೆಸಬೇಕಾದ ಕ್ರೀಡಾಕೂಟವನ್ನು ಬಿಸಿಲೇರಿದಾಗ ಮಾಡು ತ್ತಿರುವುದಕ್ಕೆ ಮೊದಲಿಗೆ ಡಿಡಿಪಿಐ ಅವರಲ್ಲಿ ಕ್ಷಮೆಯಾಚಿಸುತ್ತೇನೆ.ಅದರಂತೆ ನೆತ್ತಿಯನ್ನು ಸುಡುವ ಬಿಸಿಲಿದ್ದರೂ ಕ್ರೀಡೆಗಳ ಮೇಲಿರುವ ಪ್ರೀತಿಯಿಂದ ಕುಳಿತಿರುವ ಮಕ್ಕಳಿಗೂ ಕ್ಷಮೆಕೋರುತ್ತೇನೆ ಎಂದು ಮಾತು ಆರಂಭಿಸಿದ ಅವರು ತಾಲೂಕು ಮಟ್ಟದ ಅಥ್ಲೆಟಿಕ್ಸ್, ವಾಲಿಬಾಲ್, ಕಬ್ಬಡ್ಡಿ, ಖೋಖೋ, ಫುಟ್‌ಬಾಲ್, ಗುಂಡು ಎಸೆತ, ಇತ್ಯಾದಿ ಆಟೋಟಗಳಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶುಭ ಕೋರುತ್ತೇನೆ. ಫಲಿತಾಂಶಕ್ಕಾಗಿ ಆಡದೆ ಪರಸ್ಪರ ಸ್ನೇಹಪರತೆಯಿಂದ ಆಟವಾಡಿ ಎಂದು ಕರೆ ನೀಡಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ಶಾಲಾ ಮಕ್ಕಳೆಂದರೆ ಹಾಗೆ ಚೈತನ್ಯದ ಚಿಲುಬೆಯಾಗಿರುತ್ತಾರೆ.ಬಿಸಿಲಲ್ಲಿ ದಣಿದಾಗ ಬರುವ ಬೆವರು ನಮ್ಮ ಆರೋಗ್ಯ ವನ್ನು ಕಾಪಾಡಲಿದೆ. ನಾವು ಪ್ರಾಥಮಿಕ ಪ್ರೌಢಶಿಕ್ಷಣ ಪಡೆಯುವಾಗ ಚಳಿಮಳೆಗಾಳಿ ಬಿಸಿಲಿಗೆ ಅಂಜಿದವರೇ ಅಲ್ಲ. ನೀವೂ ಸಹಜ ನಮ್ಮ ಹಾಗೆ ಬೆವರು ಹಸಿರಿ ಆಟವಾಡಿದಾಗ ಮಾತ್ರ ಉತ್ತಮ ಆರೋಗ್ಯದ ಜತೆಗೆ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಬಿಇಒ ಸುಕನ್ಯ,ಜಿಲ್ಲಾ ದೈಹಿಕ ಪರಿವೀಕ್ಷಕ ಅರುಣ್‌ಕುಮಾರ್,ಸರಕಾರಿ ನೌಕರರ ಸಂಘದ ಜಿಲ್ಲಾ ಧ್ಯಕ್ಷ ನಾರಾಯಣಸ್ವಾಮಿ,ರಾಜ್ಯ ಪರಿಷತ್ ಸದಸ್ಯ ಅಮರ್, ರಾಜ್ಯ ನಾಮನಿರ್ದೇಶಿತ ಕಾರ್ಯದರ್ಶಿ ಪಿ.ಆರ್.ಸುನೀಲ್, ಮರಿಯಪ್ಪ,ನಾರಾಯಣಸ್ವಾಮಿ, ನರೇಶ್, ಮಂಚನಬಲೆ ಶ್ರೀನಿವಾಸ್ ಇತರರು ಇದ್ದರು.