ಚಿಂತಾಮಣಿ : ತಾಲ್ಲೂಕು,ಕಸಬಾ ಹೋಬಳಿ ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ವಿಶ್ವನಾಥಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗುರುಮೂರ್ತಿ ಸ್ವಾಮಿ,ಎಲ್ಲಮ್ಮದೇವಿ ಸಹಿತ ಮತ್ತು ತ್ತು ವೆಂಕಟರಮಣಸ್ವಾಮಿ ದೇವಾಲಯವು ಪೂರ್ವಿಕರ ಕಾಲದಿಂದಲೂ ನೆಲೆಸಿದ್ದು, ಸದರೀ ದೇವಾಲಯವು ಗ್ರಾಮಸ್ಥರು ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲು ಹಮ್ಮಿಕೊಳ್ಳಲಾಗುತ್ತದೆ.
ಗುರುಮೂರ್ತಿಸ್ವಾಮಿ, ಎಲ್ಲಮ್ಮದೇವಿ ಸಹಿತ ವೆಂಕಟರಮಣಸ್ವಾಮಿ ದೇವಾಲಯವನ್ನು ಅಭಿವೃದ್ಧಿಪಡಿಸಿ, ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಕೊಳ್ಳಲು ತೀರ್ಮಾನಿಸಿಕೊಂಡು, ಸದರಿ ದೇವಾ ಲಯದ ನೂತನ ಟ್ರಸ್ಟ್ ರಚಿಸಿಕೊಂಡು ಇಂದು ದೇವಾಲಯದ ಆವರಣದಲ್ಲಿ ನೂತನ ಟ್ರಸ್ಟ್ ನ ಉದ್ಘಾಟನಾ ಸಮಾರಂಭವನ್ನು ದೇವರನ್ನು ವಿಶೇಷ ರೀತಿಯಲ್ಲಿ ಅಲಂಕಾರ ಮಾಡುವು ದರ ಮೂಲಕ ಮಾಡಲಾಯಿತು.
ದೇವಸ್ಥಾನದ ಅಧ್ಯಕ್ಷರಾಗಿ ಗಣೇಶ್ ಜಿ,ಉಪಾಧ್ಯಕ್ಷರಾಗಿ ಮಂಜುನಾಥ್, ಕಾರ್ಯದರ್ಶಿ ಮುರಳಿ, ಖಜಾಂಚಿ ಶ್ರೀನಿವಾಸಪ್ಪ, ಸದಸ್ಯರಾದ ವೆಂಕಟೇಶ್ ಜಿ, ಶ್ರೀರಾಮಯ್ಯ ಜಿ, ಶ್ರೀನಿವಾಸ್ ಕೆ ಎನ್, ಶ್ರೀನಿವಾಸಪ್ಪ ಎಂ, ತಿಮ್ಮಯ್ಯ, ಮುನಿಶಾಮಿ, ವಿ ಆನಂದ್, ಮಂಜುನಾಥ್ ವಿ, ಗುರುಮೂರ್ತಿ, ವೆಂಕಟೇಶಪ್ಪ, ದೇವರಾಜ್, ಆಂಜಿನಪ್ಪರವರ ಟ್ರಸ್ಟ್ ಅನ್ನು ರಚಿಸಲಾಯಿತು.