Chikkaballapur News: ಕ್ರಾಂತಿಕಾರಿ ನಿಲುವು ಮತ್ತು ಅಭಿವೃದ್ಧಿಗಾಗಿ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕ : ಸಿಇಒ ವೈ. ನವೀನ್ ಭಟ್
ದೇಶಕ್ಕೆ ಸ್ವಾತಂತ್ರ‍್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಹತ್ತು ಹಲವು ಗಂಭೀರ ಸಮಸ್ಯೆಗಳಿದ್ದವು ಅವುಗಳ ನಿವಾರಣೆಯಲ್ಲಿ ಬಾಬುಜಿ ಅವರ ಪಾತ್ರ ಬಹಳ ಮುಖ್ಯವಾಗಿದೆ.ಜಗಜೀವನ್ ರಾಮ್ ರವರ ಜೀವನ ಚರಿತ್ರೆಯನ್ನು ಅವಲೋಕಿಸಿದರೆ ಭಾರತ ದೇಶದ ಇತಿಹಾಸವೇ ಕಂಡುಬರುವುದು. ಸ್ವಾತಂತ್ರ‍್ಯ ಪೂರ್ವದಲ್ಲಿಯೇ ದಲಿತರಿಗೆ ಆಗುತ್ತಿರುವ ಅನ್ಯಾಯ,ದೌರ್ಜನ್ಯ, ಶತಮಾನಗಳ ಶೋಷಣೆಯನ್ನು ಖಂಡಿಸಿ ಧ್ವನಿ ಎತ್ತಿದವರು ಬಾಬುಜಿ ಮತ್ತು ಅಂಬೇಡ್ಕರ್ ಆಗಿದ್ದಾರೆ

ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾo ಅವರು ಜನರ ಒಳಿತಾಗಿ ಕ್ರಾಂತಿಕಾರಿ ನಿಲುವು ಮತ್ತು ಅಭಿವೃದ್ಧಿಗಾಗಿ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕರಾಗಿದ್ದರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್ ತಿಳಿಸಿದರು.

ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಬಾಬು ಜಗಜೀವನ ರಾಮ್ ಅವರ ೩೯ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಹೇಳಿಕೆ
ಚಿಕ್ಕಬಳ್ಳಾಪುರ: ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾo ಅವರು ಜನರ ಒಳಿತಾಗಿ ಕ್ರಾಂತಿಕಾರಿ ನಿಲುವು ಮತ್ತು ಅಭಿವೃದ್ಧಿಗಾಗಿ ಒಲವು ಎರಡನ್ನೂ ಮೈಗೂಡಿಸಿಕೊಂಡಿದ್ದ ಅಪ್ರತಿಮ ನಾಯಕರಾಗಿದ್ದರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾ ಶ್ರಯದಲ್ಲಿ ಭಾನುವಾರ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಅವರ ೩೯ ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಹತ್ತು ಹಲವು ಗಂಭೀರ ಸಮಸ್ಯೆಗಳಿದ್ದವು ಅವುಗಳ ನಿವಾರಣೆಯಲ್ಲಿ ಬಾಬುಜಿ ಅವರ ಪಾತ್ರ ಬಹಳ ಮುಖ್ಯವಾಗಿದೆ.ಜಗಜೀವನ್ ರಾಮ್ ರವರ ಜೀವನ ಚರಿತ್ರೆಯನ್ನು ಅವಲೋಕಿಸಿದರೆ ಭಾರತ ದೇಶದ ಇತಿಹಾಸವೇ ಕಂಡುಬರುವುದು. ಸ್ವಾತಂತ್ರ‍್ಯ ಪೂರ್ವದಲ್ಲಿಯೇ ದಲಿತರಿಗೆ ಆಗುತ್ತಿರುವ ಅನ್ಯಾಯ,ದೌರ್ಜನ್ಯ, ಶತಮಾನಗಳ ಶೋಷಣೆಯನ್ನು ಖಂಡಿಸಿ ಧ್ವನಿ ಎತ್ತಿದವರು ಬಾಬುಜಿ ಮತ್ತು ಅಂಬೇಡ್ಕರ್ ಆಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ನಗರಸಭೆ ವತಿಯಿಂದ ಸವಲತ್ತುಗಳ ವಿತರಣೆ ಮಾಡಿದ ಶಾಸಕ ಪುಟ್ಟಸ್ವಾಮಿಗೌಡ
ಸ್ವಾತಂತ್ರ‍್ಯ ಹೋರಾಟಕ್ಕೆ ತೇರಳುವಾಗ ನಮಗೆ ಯಾವುದೇ ಭೇದಭಾವವಿಲ್ಲದ ಸಮ ಸಮಾಜದ ಸ್ವಾತಂತ್ರ‍್ಯವು ಮುಂದೆ ಭಾರತಕ್ಕೆ ಸಿಗಬೇಕು ಎಂದು ದೃಢವಾದ ನಿರ್ಧಾರದೊಂದಿಗೆ ಸ್ವಾತಂತ್ರ‍್ಯ ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳಿವರು. ೧೯೧೭-೧೯೨೦ ವೇಳೆ ಆಲ್ ಇಂಡಿಯಾ ಡಿಪ್ರೆಸೆಡ್ ಕ್ಲಾಸೆಸ್ ಫೆಡರೇಶನ್ ಸಂಘವನ್ನು ಸ್ಥಾಪನೆ ಮಾಡಿ ಯಾವ ದಲಿತ ಕುಟುಂಬ ಶೋಷಣೆಗೆ ಹಾಗೂ ತುಳಿತಕ್ಕೆ ಒಳಗಾಗಿತ್ತೋ ಅವರಲ್ಲಿ ಧೈರ್ಯ ತುಂಬಿ ದಲಿತ ನಾಯಕನಾಗಿ ಬಾಬುಜಿ ಹೆಸರುವಾಸಿ ಯಾಗುತ್ತಾರೆ. ಅಂಬೇಡ್ಕರ್ ರವರ ಕಾರ್ಯಗಳಿಗೆ,ನಿಲುವುಗಳಿಗೆ ಬಾಬುಜೀರವರು ಸದಾ ಬೆಂಬಲ ವಾಗಿದ್ದರು ಎಂದರು.
ಭಾರತ ದೇಶವು ಸ್ವಾತಂತ್ರ‍್ಯ ಪಡೆದ ನಂತರ ೩೩ ವರ್ಷದ ಬಾಬುಜೀರವರು ಸಂಸತ್ತಿನ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾಗಿ ಕಾರ್ಮಿಕ ಸಚಿವರಾದರು ಆ ವೇಳೆ ಹಲವಾರು ಕಾಯ್ದೆಗಳನ್ನು ರಚನೆ ಮಾಡುವ ಮೂಲಕ ಕಾರ್ಮಿಕರ ನಾಯಕರಾಗಿ ಗುರುತಿಸಿಕೊಳ್ಳುತ್ತಾರೆ ೧೯೭೧ರ ಭಾರತ ಮತ್ತು ಪಾಕ್ ಯುದ್ಧದ ಸಮಯದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿ ಭಾರತಕ್ಕೆ ಜಯ ತಂದು ಕೊಡುತ್ತಾರೆ. ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಕಾರಣರಾಗುತ್ತಾರೆ. ಸುಮಾರು ೪೦ ವರ್ಷಗಳ ಕಾಲ ಒಂದೇ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ವಿಜೇತರಾಗುತ್ತಾರೆ ಬಾಬುಜೀ ಅವರು ನಿಧನರಾದ ನಂತರ ತನ್ನ ಮಗಳಾದ ಮೀರಾ ಕುಮಾರಿ ೨ ಬಾರಿ ಅದೇ ಕ್ಷೇತ್ರದಲ್ಲಿ ಸಂಸದರಾಗಿ ಕರ್ತವ್ಯ ನಿರ್ವಹಿಸುತ್ತಾರೆ ಅಂದರೆ ಬಾಬುಜಿ ಅವರು ಎಷ್ಟು ಪ್ರಭಾವಿ ರಾಜಕೀಯ ನಾಯಕರು ಎಂಬುದನ್ನು ತೋರಿಸುತ್ತದೆ. ಇಂದಿನ ನವ ಭಾರತ ದೇಶವನ್ನು ರೂಪಿಸುವಲ್ಲಿ ಬಾಬು ಜಗಜೀವನರಾo ರವರ ಪಾತ್ರ, ಕೊಡುಗೆ ,ಪರಿಶ್ರಮವಿದೆ ಇಂತಹ ಮೇರು ವ್ಯಕ್ತಿತ್ವದ ನಾಯಕರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮಂಚೇನಹಳ್ಳಿಯ ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕ ಯುವರಾಜ್ ಅವರು ಡಾ. ಬಾಬು ಜಗಜೀವನ್ ರಾಮ್ ಅವರ ಜೀವನ ಚರಿತ್ರೆಯ ಕುರಿತು ಮಾತನಾಡಿ ಸ್ವಾತಂತ್ರ‍್ಯ ಭಾರತದ ಉಪ ಪ್ರಧಾನ ಮಂತ್ರಿಯಾಗಿ ಹಾಗೂ ವಿವಿಧ ಖಾತೆಯ ಸಚಿವರಾಗಿ ಸಮಾಜದ ಅಭಿವೃದ್ಧಿಗೆ ಬಾಬುಜೀ ಹೆಚ್ಚು ಶ್ರಮಿಸಿದ್ದಾರೆ. ಬಿ.ಎಸ್.ಸಿ ಓದುವ ಸಂದರ್ಭದಲ್ಲಿ ಅಲ್ಲಿ ಕೆಲಸ ಮಾಡುವವರಿಂದ ಶೋಷಣೆಗೆ ಒಳಗಾದವರನ್ನು ಕಂಡು ಅಲ್ಲಿರುವ ಎಲ್ಲಾ ದಲಿತ ಕಾರ್ಮಿಕರನ್ನು ಒಗ್ಗೂಡಿಸಿ ಗಿರಣಿ ಮಾಲಿಕರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿ ಜಯ ಸಾಧಿಸಿದರು. ಸಮಾನತೆಗಾಗಿ ಹೋರಾಡಿದಂತಹ ಮಹಾನ್ ನಾಯಕರ ಆಶಯಗಳನ್ನು ತಮ್ಮ ಜೀವನದಲ್ಲಿ ರೂಪಿಸಿಕೊಳ್ಳ ಬೇಕು. ಸಮಾಜದ ನಿರ್ಮಾಣದಲ್ಲಿ ನಾವು ಕೂಡ ಪಾತ್ರವಾಗಬೇಕು ಎಂದರು.
ಕಾರ್ಯಕ್ರಮದಲ್ಲಿಬಾಬು ಜಗಜೀವನ ರಾಮ್ ರವರ ಪ್ರತಿಮೆಯನ್ನು"ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ನಿರ್ಮಾಣ ಮಾಡುವ ಬಗ್ಗೆ ಕೋರಿ ಮನವಿ ಪತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾರ್ಹಣಾಧಿಕಾರಿಗಳಿಗೆ ದಲಿತ ಸಮಾಜದ ಮುಖಂಡರು ನೀಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜಾನಂದ ರೆಡ್ಡಿ, ಸಹಾಯಕ ನಿರ್ದೇಶಕ ಶೇಷಾದ್ರಿ,ವೃತ್ತ ನಿರೀಕ್ಷಕ ಮಂಜುನಾಥ್, ವಿವಿಧ ಸಮುದಾಯದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿರಿದರು.