ಚಿಂತಾಮಣಿ: ಕನ್ನಡ ಸಾಹಿತ್ಯ ಪರಿಷತ್ತು ಚಿಂತಾಮಣಿ ಘಟಕದ ವತಿಯಿಂದ ನಗರದ ಎನ್ ಆರ್ ಬಡಾವಣೆಯ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ 2024 -25ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಎನ್ ವಿ ವೆಂಕಟ ಶಿವಾರೆಡ್ಡಿ ವಹಿಸಿದರು.
ಇದನ್ನೂ ಓದಿ: Chikkaballapur News: ಜು.18ಕ್ಕೆ "ಭೋವಿ ಜನೋತ್ಸವ" ಅಂಗವಾಗಿ ಪ್ರತಿಭಾ ಪುರಸ್ಕಾರ
ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಕ್ಷೇತ್ರ ಶಿಕ್ಷಣಾ ಧಿಕಾರಿಗಳಾದ ಉಮಾದೇವಿ,ಕಾಗತಿ ವೆಂಕಟರತ್ನಂ,ಟಿ ಸಿ ಲಕ್ಷ್ಮೀಪತಿ,ಆರೋಗ್ಯ ಇಲಾಖೆ ಸರಸ್ವತಮ್ಮ,ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಮು.ಪಾಪಣ್ಣ,ಚೈತ್ರ,ಭವಿತ,ಉಪನ್ಯಾಸಕರಾದ ಚಂದ್ರಶೇಖರ್,ಎನ್ ವಿ ಶ್ರೀನಿವಾಸನ್ ಸೇರಿದಂತೆ ಈಶ್ವರ್ ಸಿಂಗ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ 28 ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳನ್ನು ಮತ್ತು ಸಮಾಜ ಸೇವಕ ಶಬರಿ ಜನ ಸೇವಾ ಟ್ರಸ್ಟ್ ನ ಶಬರೀಶ್ ರವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರದ ಉಸ್ತುವಾರಿಯನ್ನು ರಂಗನಾಥ ಎಸ್ ಎನ್,ವೆಂಕಟೇಶ್ ಕೆ ಎಂ ಹಾಗೂ ಕಾಲೇಜಿನ ಉಪನ್ಯಾಸಕರು ವಹಿಸಿದ್ದರು.ಕಸಾಪ ಪದಾಧಿಕಾರಿಗಳು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.