ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಜು.18ಕ್ಕೆ "ಭೋವಿ ಜನೋತ್ಸವ" ಅಂಗವಾಗಿ ಪ್ರತಿಭಾ ಪುರಸ್ಕಾರ

ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಶಿಕ್ಷಣದ ಕಡೆಗೆ ಹೆಚ್ಚಿನ ಒಲವನ್ನು ಸೆಳೆಯುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಿಂದ ಹಿಡಿದು ಪದವಿ ಪಡೆದ ಸಂಶೋಧನೆ ಮಾಡಿದವ ರನ್ನು ಈ ಸಮಯದಲ್ಲಿ ಸನ್ಮಾನಿಸಲಾಗುವುದು. ಇದ್ದಲ್ಲದೆ ಭೋವಿ ಸಮುದಾಯದಲ್ಲಿ ಮದುವೆ ಯ ವಯಸ್ಸು ಮೀರುತ್ತಿದೆ ಇದನ್ನು ಮನಗಂಡು ಈ ಕಾರ್ಯಕ್ರಮದಲ್ಲಿ ಮಧು-ವರರ ಸಮಾವೇಶವನ್ನು ಹಮ್ಮಿ ಕೊಂಡಿದ್ದು, ಇಲ್ಲಿ ಭೋವಿ ಸಮುದಾಯದವರು ತಮ್ಮ ಮಕ್ಕಳಿಗೆ ಗಂಡು, ಹೆಣ್ಣನ್ನು ನೋಡಿಕೊಳ್ಳ ಬಹುದಾಗಿದೆ

ಜು.18ಕ್ಕೆ "ಭೋವಿ ಜನೋತ್ಸವ" ಅಂಗವಾಗಿ ಪ್ರತಿಭಾ ಪುರಸ್ಕಾರ

ಬಹೊವಿ ಸಮಾಜದ ವಿದ್ಯಾಥಿಗಳನ್ನು ಕರೆದೊಯ್ದ ಬಸ್ ಚಿತ್ರ.

Profile Ashok Nayak Jul 18, 2025 11:03 PM

ಬಾಗೇಪಲ್ಲಿ: ಚಿತ್ರದುರ್ಗದ ಸಿದ್ಧರಾಮೇಶ್ವರ ಸಂಸ್ಥಾನ ಭೋವಿ ಗುರುಪೀಠದಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ ಗುರುಪೀಠದ ಆವರಣದಲ್ಲಿ ನಡೆಯಲಿದೆ ಎಂದು ತಾಲೂಕು ಅಧ್ಯಕ್ಷ ವಿನಯ್‌ ಕುಮಾರ್ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯ ಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಜು.18ರಂದು ಚಿತ್ರದುರ್ಗ ಭೋವಿ ಜನಾಂಗ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಸನ್ನಿಧಿಯಲ್ಲಿ ನಡೆಯಲಿದೆ ಎಂದರು.

ಬಾಗೇಪಲ್ಲಿ ಪಟ್ಟಣದಿಂದ ಸುಮಾರು 45 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಚಿತ್ರದುರ್ಗ ಭೋವಿ ಗುರುಪೀಠಕ್ಕೆ ಶುಕ್ರವಾರ ಬಸ್ ಮೂಲಕ ಕರೆದುಕೊಂಡು ಹೋಗುವ ಮೊದಲು ಬಸ್‌ಗೆ ಚಾಲನೆ ನೀಡಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಇದನ್ನೂ ಓದಿ: Chikkaballapur News: ರೈತರ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು

ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಶಿಕ್ಷಣದ ಕಡೆಗೆ ಹೆಚ್ಚಿನ ಒಲವನ್ನು ಸೆಳೆಯುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಿಂದ ಹಿಡಿದು ಪದವಿ ಪಡೆದ ಸಂಶೋಧನೆ ಮಾಡಿದವ ರನ್ನು ಈ ಸಮಯದಲ್ಲಿ ಸನ್ಮಾನಿಸಲಾಗುವುದು. ಇದ್ದಲ್ಲದೆ ಭೋವಿ ಸಮುದಾಯದಲ್ಲಿ ಮದುವೆ ಯ ವಯಸ್ಸು ಮೀರುತ್ತಿದೆ ಇದನ್ನು ಮನಗಂಡು ಈ ಕಾರ್ಯಕ್ರಮದಲ್ಲಿ ಮಧು-ವರರ ಸಮಾವೇಶ ವನ್ನು ಹಮ್ಮಿಕೊಂಡಿದ್ದು, ಇಲ್ಲಿ ಭೋವಿ ಸಮುದಾಯದವರು ತಮ್ಮ ಮಕ್ಕಳಿಗೆ ಗಂಡು, ಹೆಣ್ಣನ್ನು ನೋಡಿಕೊಳ್ಳಬಹುದಾಗಿದೆ.

ಇದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಉಚಿತವಾದ ಆರೋಗ್ಯ ಶಿಬಿರವನ್ನು ಕೂಡ ಏರ್ಪಡಿಸಲಾಗಿದ್ದು ಇಲ್ಲಿಗೆ ಆಗಮಿಸಿದ ಭಕ್ತಾದಿಗಳು ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿ ತಪಾಸಣೆಯನ್ನು ಮಾಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರಾಮ್ ಮಾತನಾಡಿ, ಜು.18ರಂದು ಅಂದರೆ ನಾಳೆ ಬೆಳಿಗ್ಗೆಯಿಂದಲೇ ಮಠದಲ್ಲಿ ಸೇವಾಕಾರ್ಯಗಳು ಪ್ರಾರಂಭವಾಗಲಿವೆ. ಜತೆಗೆ ಸ್ವಾಮೀಜಿಯ 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವ ಹಾಗೂ ಪ್ರತಿಭಾ ಪುರಸ್ಕಾರ, ವಧು- ವರರ ಸಮಾವೇಶ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ' ಎಂದು ಹೇಳಿದರು.

ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಭೋವಿ ಸಮಾಜವನ್ನು ಕಟ್ಟುವ ಕೆಲಸ ಕಷ್ಟದ ಕಾರ್ಯ. ಇಮ್ಮಡಿ ಶ್ರೀಗಳ ಬದ್ಧತೆಯಿಂದಾಗಿ ಭೋವಿ ಸಮಾಜವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕ ವಾಗಿ ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ’ ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ನಡೆಯಲಿದ್ದು ಇಂದು ಪ್ರಯಾಣ ಬೆಳೆಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಭೋವಿ ಜನಾಂಗ ಸದಸ್ಯರಾದ ಶ್ರೀನಾಥ, ನರೇಂದ್ರ, ಗಗನ್, ಮುನಿರಾಜು, ಸುಧಾಕರ, ಆನಂದ, ಅಚ್ಚಪ್ಪ,, ಶೇಖರ, ಶಿವಪ್ಪ, ಗೋವಿಂದ, ವೆಂಕಟೇಶ, ಸೇರಿದಂತೆ ಭೋವಿ ಜನಾಂಗದ ಕುಲಭಾಂದವರು ಹಾಜರಿದ್ದರು.