ಗೌರಿಬಿದನೂರು: ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಿದ ಶ್ರೇಯಸ್ಸು ನಮ್ಮ ದಾಗಲಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ್ ಗುಗ್ಗರಿ ಹೇಳಿದರು.
ಅವರು ನಗರದ ಬೈಪಾಸ್ ಗಣೇಶೋತ್ಸವ ಸಮಿತಿ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗ ದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಉದ್ಘಾಟನೆ ನಡೆಸಿದ ನಂತರ ಮಾತನಾಡಿದರು.
ಇದನ್ನೂ ಓದಿ: Gauribidanur News: ಕ್ರೀಡಾಕೂಟದಿಂದ ಶಿಕ್ಷಕರಿಗೆ ಚೈತನ್ಯ ದೊರೆಯುತ್ತದೆ
ತುರ್ತು ಸಂದರ್ಭಗಳಲ್ಲಿ ಮಾಡುವ ರಕ್ತದಾನ, ರೋಗಿಗಳಿಗೆ ಜೀವದಾನ ನೀಡುತ್ತದೆ ಒಬ್ಬ ದಾನಿಯಿಂದ ಸಂಗ್ರಹಿಸುವ ರಕ್ತದಿಂದ ಮೂರು ಜೀವಗಳನ್ನು ಉಳಿಸಬಹುದು, ರಕ್ತದಾನ ಮಾಡುವುದರಿಂದ ದಾನಿಗಳಿಗೆ ಅನೇಕ ಆರೋಗ್ಯದ ಪ್ರಯೋಜನಗಳಿವೆ,ರಕ್ತದೊತ್ತಡ, ಮಧುಮೇಹ ರೋಗಗಳು ನಿಯಂತ್ರಣಕ್ಕೆ ಬರಲಿವೆ, ಹೃದಯ ರಕ್ತನಾಳದ ಆರೋಗ್ಯ ಸುಧಾರಣೆಯಾಗಲಿದೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ ಎಂದ ಅವರು ರಕ್ತದಾನದ ಕುರಿತು ಜನರಿಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು ಎಂದ ಅವರು ಬೈಪಾಸ್ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಗಣೇಶ ಉತ್ಸವದ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರು ವುದು ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು.
ಸಮಾಜ ಸೇವಕ ಖಾದರ್ ಸುಭಾನ್ ಖಾನ್ ಮಾತನಾಡಿ, ದೇಶದಲ್ಲಿ ಪ್ರತಿ ೨ ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ, ಜೀವವನ್ನು ಉಳಿಸಲು ನಾವು ವೈದ್ಯರಾಗಬೇಕಿಲ್ಲ. ರಕ್ತದಾನ ಮಾಡಿದರೆ ಸಾಕು. ರಕ್ತದಾನ ಮಾಡಿ ಜೀವ ಉಳಿಸಿದ ಸಂತೃಪ್ತಿ ಹೊಂದಬಹುದು, ಸ್ವಯಂಪ್ರೇರಿತ ರಕ್ತದಾನ ಆರೋಗ್ಯಕರ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ನಾವು ದಾನ ಮಾಡಿದ ರಕ್ತ ೪೮ ಗಂಟೆಗಳಲ್ಲಿ ಮರು ಉತ್ಪತ್ತಿಯಾಗಲಿದೆ ಎಂದರು.
ಮುಖAಡ ರವಿಕುಮಾರ್ ಮಾತನಾಡಿ, ಗಣೇಶೋತ್ಸವ ನಿಮಿತ್ತ ಯುವಕರು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿವಿಗೆ ಕಾರಣಕರ್ತರಾಗಿದ್ದಾರೆ. ಯುವಕರು ನಾನಾ ಹಬ್ಬಗಳ ನಿಮಿತ್ತ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ, ಪರಂಪರೆ ಉಳಿಸಿ, ಬೆಳೆಸಬೇಕು ಎಂದು ಕಿವಿಮಾತು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಒಟ್ಟು ೧೦೨ ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಎ. ಶಿವಕುಮಾರ್,ಸ್ವಾಗತ್, ದಸ್ತಗಿರಿ ಸಾಬ್, ಶಾಂತರಾಜು, ನಿಖಿಲ್, ಪುರುಷೋ ತ್ತಮ್, ಬಾಬುರೆಡ್ಡಿ,ಅನಿಲ್,ಪ್ರಭಾಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.