ಚಿಕ್ಕಬಳ್ಳಾಪುರ : ಮಂಚೇನಹಳ್ಳಿಯಿಂದ ಚಿಕ್ಕಬಳ್ಳಾಪುರ ಕಡೆ ರಸ್ತೆ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿದ್ದ ಸುಮಾರು ೩೫ ಮಹಿಳೆಯನ್ನು ಬೈಕ್‌ನಲ್ಲಿ ಡ್ರಾಫ್ ಕೊಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗೌರಿಬಿದನೂರು ತಿಪ್ಪೇನಹಳ್ಳಿ ಮಾರ್ಗದಲ್ಲಿರುವ ಕಣಿವೆಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳಾದ ಚಿಕ್ಕಬಳ್ಳಾಪುರದ ಸಿಕಂದರ್ ಮತ್ತು ಜನಾರ್ಧನ ಅವರ ಬಂಧನ ವಾಗಿದೆ.
ಇಬ್ಬರು ಆರೋಪಿಗಳು ಬಲವಂತವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಲ್ಲದೆ ಕೊಲೆ ಬೆದರಿಕೆಯೊಡ್ಡಿ ಆಕೆಯ ಕಿವಿಯೋಲೆಗಳನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದ್ದು ಅಂದೇ ರಾತ್ರಿ ತಿಪ್ಪೇಹನಹಳ್ಳಿಯ ಬಳಿಯ ಪೆಟ್ರೋಲ್ ಬಂಕ್ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Crime News: ಪ್ರೇಯಸಿಯನ್ನು ಮದುವೆಯಾಗಲು ಹೆಂಡ್ತಿಗೇ ಬೆಂಕಿ ಹಚ್ಚಿದ ಕಿಡಿಗೇಡಿ
ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾದ ಆಕೆ ರಾತ್ರಿಯನ್ನು ತಿಪ್ಪೇಹನಳ್ಳಿಯ ಸಿಮೆಂಟ್ ಅಂಗಡಿಯೊಂದರ ಬಳಿ ಕಳೆದಿದ್ದು ಶನಿವಾರ ಸಂತ್ರಸ್ಥೆಯು ನಗರದ ಬಿಬಿ ರಸ್ತೆಯ ಶನಿಮಹಾತ್ಮ ದೇವಾಲಯದ ಬಳಿ ಸಮಾಜಸೇವಕಿ ಶಿಲ್ಪಗೌಡ ಅವರ ಕಣ್ಣಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಆಕೆಯ ಸ್ಥಿತಿಯನ್ನು ನೋಡಿ ಮಾತನಾಡಿಸಿದ ಶಿಲ್ಪಾಗೌಡ ನಡೆದ ಘಟನೆಯನ್ನು ತಿಳಿದುಕೊಂಡು ಮರುಗಿದ್ದಾರೆ.ಆ ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.
ಈ ವೇಳೆ ಜಾಗೃತರಾದ ಪೊಲೀಸರು ಸಂತ್ರಸ್ಥೆಯ ಹೇಳಿಕೆ ಪಡೆದಿದ್ದು ನಂತರ ನಡೆದ ಕಾರ್ಯಾ ಚರಣೆಯಲ್ಲಿ ಆರೋಪಿಗಳಾದ ಸಿಕಂದರ್‌ಬಾಬಾ ಹಾಗೂ ಜನಾರ್ಧನ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಸಂತ್ರಸ್ತ ಮಹಿಳೆಗೆ ನಗರದ ಮಹಿಳಾ ಸ್ವಾದಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ ಶೀಘ್ರವೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಎಸ್ಪಿ ಕುಶಾಲ್ ಚೌಕ್ಸೆ, ಎಎಸ್ಪಿ,ಡಿವೈಎಸ್ಪಿ,ಯಶವಂತ್, ಶರಣಪ್ಪ ಇವರೆಲ್ಲರು ಕೂಡಿ ಸಂತ್ರಸ್ಥೆಗೆ ನ್ಯಾಯ ಒದಗಿಸಲು ಮುಂದಾಗಿದ್ದು ಇಡೀ ಪೊಲೀಸ್ ಇಲಾಖೆಗೆ ಶಿಲ್ಪಾ ಗೌಡ ಧನ್ಯವಾದಗಳನ್ನು ಅರ್ಪಿಸಿದ್ದಾರೆ.