ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkamagaluru: ತಂದೆಯ ಶವಕ್ಕೆ ಮಗಳಿಂದಲೇ ಅಗ್ನಿಸ್ಪರ್ಶ, ಕಡೂರಿನಲ್ಲಿ ಮಾದರಿ ಘಟನೆ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಹೆಣ್ಣುಮಕ್ಕಳು ತಂದೆಯ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಲಿಂಗ ಸಮಾನತೆಯ ಸಂದೇಶ ಸಾರಿದ್ದಾರೆ. ಮೃತದೇಹದ ಸುತ್ತ ಹೆಗಲ ಮೇಲೆ ಕುಡಿಕೆ ಹೊತ್ತು ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಹೆಣ್ಣುಮಗಳು ಎಲ್ಲರ ಗಮನ ಸೆಳೆದರು.

ಕಡೂರಿನಲ್ಲಿ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿಯರು

ಚಿಕ್ಕಮಗಳೂರು, ಮಾ.14 : ಹಿಂದೂ ಸಂಪ್ರದಾಯದಲ್ಲಿ ಮನೆಯಲ್ಲಿ ಹಿರಿಯರು ಮೃತಪಟ್ಟರೆ ಅಂತ್ಯ ಸಂಸ್ಕಾರ (funeral) ಹಾಗೂ ದೇಹಕ್ಕೆ ಅಗ್ನಿಸ್ಪರ್ಶ ಮಾಡುವ ವಿಧಿ-ವಿಧಾನಗಳನ್ನು ಸಾಮಾನ್ಯವಾಗಿ ಗಂಡು ಮಕ್ಕಳೇ ಮಾಡುವ ಸಂಪ್ರದಾಯ ವಾಡಿಕೆಯಾಗಿ ಬಂದಿದೆ. ಆದರೆ ಚಿಕ್ಕಮಗಳೂರು (Chikkamagaluru news) ಜಿಲ್ಲೆಯ ಕಡೂರಿನ (Kaduru) ಬೀರೂರಿನಲ್ಲಿ ಈ ಸಂಪ್ರದಾಯಕ್ಕೆ ಸೆಡ್ಡು ಹೊಡೆದ ಇಬ್ಬರು ಸಹೋದರಿಯರು ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಹೆಣ್ಣುಮಕ್ಕಳು ತಂದೆಯ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಲಿಂಗ ಸಮಾನತೆಯ ಸಂದೇಶ ಸಾರಿದ್ದಾರೆ. ಭಾವಸಾರ ಕ್ಷತ್ರಿಯ ಸಮಾಜದ ಬಿ.ಎಸ್.ವಿಶ್ವನಾಥ ಎಂಬವರು ನಿಧನರಾಗಿದ್ದರು. ಅವರಿಗೆ ಗಂಡು ಮಕ್ಕಳು ಇಲ್ಲ. ಹೀಗಾಗಿ, ಮಗಳು ಐಶ್ವರ್ಯ ಅವರೇ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ತಂಗಿ ಹಾಗೂ ಭಾವನ ಜೊತೆ ಸೇರಿ ತಂದೆಯ ಅಂತಿಮ ಧಾರ್ಮಿಕ ವಿಧಿ, ವಿಧಾನಗಳನ್ನು ಪೂರೈಸಿದ್ದಾರೆ.

ಮೃತದೇಹದ ಸುತ್ತ ಹೆಗಲ ಮೇಲೆ ಕುಡಿಕೆ ಹೊತ್ತು ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಹೆಣ್ಣುಮಗಳು ಎಲ್ಲರ ಗಮನ ಸೆಳೆದರು. ಬೀರೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸತ್ತಿದ್ದಾನೆಂದು ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ; ಮರುದಿನವೇ ಜೀವಂತವಾಗಿ ಮರಳಿ ಬಂದ ವ್ಯಕ್ತಿ

ಹರೀಶ್‌ ಕೇರ

View all posts by this author