ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka SSLC Results: ʼʼನನ್ನ ಅಂಕದ ಹಿಂದೆ ಪೋಷಕರ ತ್ಯಾಗ, ಶಿಕ್ಷಕರ ಪ್ರೋತ್ಸಾಹ ಇದೆʼʼ: 625 ಅಂಕ ಪಡೆದ ಬೃಂದಾ ಮನದಾಳ

SSLC Result 2026: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 7 ಮಂದಿ 625 ಅಂಕಕ್ಕೆ 625 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಪೈಕಿ ಚಿಕ್ಕಮಗಳೂರು ನಗರದ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ ಎಂ. ತಾಪ್ಸೆ ʼವಿಶ್ವವಾಣಿ ಟಿವಿʼ ಪ್ರತಿನಿಧಿ ಶಿವಪ್ರಸಾದ್‌ ಬೋಳಂತೂರು ಜತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾಳೆ.

ಪೋಷಕರೊಂದಿಗೆ ಎಸ್‌ಎಸ್‌ಎಲ್‌ಸಿ ಟಾಪರ್‌ ಬೃಂದಾ

ಚಿಕ್ಕಮಗಳೂರು, ಏ. 23: ''ನಾನು ಉತ್ತಮ ಅಂಕ ಗಳಿಸಲು ಕುಟುಂಬದವರ, ಶಿಕ್ಷಕರ ಉತ್ತೇಜನವೇ ಕಾರಣ. ಪೋಷಕರ ತ್ಯಾಗದಿಂದ ಈ ಸಾಧನೆ ಸಾಧ್ಯವಾಗಿದೆʼʼ-ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ, 625 ಅಂಕಕ್ಕೆ 625 ಅಂಕ ಗಳಿಸಿದ ಚಿಕ್ಕಮಗಳೂರಿನ ವಿದ್ಯಾರ್ಥಿನಿ ಬೃಂದಾ ಎಂ. ತಾಪ್ಸೆಯ ಮಾತು ಇದು (Karnataka SSLC Results). ʼವಿಶ್ವವಾಣಿ ಟಿವಿʼ ಯುಟ್ಯೂಬ್‌ ಚಾನಲ್‌ ಜತೆ ಮಾತನಾಡಿ ಸಂತಸ ಹಂಚಿಕೊಂಡಿದ್ದಾಳೆ. 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 7 ಮಂದಿ 625 ಅಂಕಕ್ಕೆ 625 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಪೈಕಿ ನಗರದ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ ಎಂ. ತಾಪ್ಸೆ ಕೂಡ ಸೇರಿದ್ದಾಳೆ.

ಬೃಂದಾ ಅವರ ತಂದೆ ಮಂಜುನಾಥ್ ಬಿ. ನಗರದಲ್ಲಿ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಹರ್ಷಿಣಿ ಡಿ. ಗೃಹಿಣಿ. ವಿಶೇಷ ಎಂದರೆ ಪರೀಕ್ಷೆ ಬರೆದ ಶಾಲೆಯ ಎಲ್ಲ 166 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇಕಡ 100ರಷ್ಟು ಫಲಿತಾಂಶ ಬಂದಿದೆ. ಈ ಸಂಸ್ಥೆಯು 21 ವರ್ಷಗಳಿಂದ ಸತತವಾಗಿ ಶೇಕಡ 100 ಫಲಿತಾಂಶ ದಾಖಲಿಸುತ್ತಿದೆ.

ವಿಡಿಯೊ ಇಲ್ಲಿದೆ:



ಬೃಂದಾ ಹೇಳಿದ್ದೇನು?

ʼʼಶಿಕ್ಷಕರು, ಪೋಷಕರ ಉತ್ತೇಜನದಿಂದಲೇ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ. ತುಂಬಾ ಖುಷಿಯಾಗುತ್ತಿದೆ. ಫಲಿತಾಂಶ ನೋಡಿದ ತಕ್ಷಣ ಮನೆಯವರೆಲ್ಲ ಕಣ್ಣಿನಲ್ಲಿ ಆನಂದಭಾಷ್ಪ ಕಂಡುಬಂತುʼʼ ಎಂದು ಬೃಂದಾ ಭಾವುಕಳಾಗಿದ್ದಾಳೆ. ʼʼಇಷ್ಟು ಅಂಕ ಬರುವ ಬಗ್ಗೆ ನಿರೀಕ್ಷೆ ಇತ್ತು. ಪ್ರತಿದಿನ ಅಧ್ಯಯನ ಮಾಡುತ್ತಿದ್ದೆ. ಶಾಲೆಯವರು ಕೋಚಿಂಗ್‌ ಕೊಡುತ್ತಿದ್ದರು. ಅವರ ಬೆಂಬಲ ಉತ್ತಮವಾಗಿತ್ತು. ಮನೆಗೆ ಬಂದ ಮೇಲೂ ನಾನು ಓದುತ್ತಿದ್ದೆʼʼ ಎಂದು ಹೇಳಿದ್ದಾಳೆ.

ಎಂಜಿನಿಯರ್‌ ಆಗುವ ಕನಸು

ʼʼಕಾನ್ಸೆಪ್ಟ್‌ ಅರ್ಥ ಮಾಡಿಕೊಂಡು ಓದುತ್ತಿದ್ದೆ. ಚಿಕ್ಕಂದಿನಿಂದಲೇ ಮನೆಯವರು ನನ್ನ ಓದಿಗೆ ಸಪೋರ್ಟ್‌ ಮಾಡುತ್ತ ಬಂದಿದ್ದಾರೆ. ನನ್ನ ಓದಿಗಾಗಿ ಅವರ ರೂಮ್‌ ಕೂಡ ಬಿಟ್ಟು ಕೊಟ್ಟಿದ್ದಾರೆ. ಪೋಷಕರ, ಶಿಕ್ಷಕರ ಕನಸು ನನಸು ಮಾಡಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಮುಂದೆ ಸೈನ್ಸ್‌ ತಗೊಂಡು ಎಂಜಿನಿಯರ್‌ ಆಗುವ ಗುರಿ ಇದೆʼʼ ಎಂದು ವಿವರಿಸಿದ್ದಾಳೆ.

ಹಲವು ದಾಖಲೆ ಬರೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ, 7 ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್

ಔಟ್‌ ಆಫ್‌ ಔಟ್ ಪಡೆದ ವಿದ್ಯಾರ್ಥಿಗಳು

ದಾವಣಗೆರೆಯ ಭರತ್‌, ರಾಯಚೂರಿನ ಸುಖದೇವ್, ಚಿಕ್ಕೋಡಿಯ ಪ್ರಾರ್ಥನಾ, ಚಿಕ್ಕಮಗಳೂರಿನ ಬೃಂದಾ, ಉಡುಪಿಯ ಪ್ರೀತಂ, ವಿಜಯಪುರದ ಸೌಜನ್ಯಾ, ಬೆಂಗಳೂರು ಉತ್ತರ ಧನುಷ್‌ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇನ್ನು ಜಿಲ್ಲೆಗಲ ಪೈಕಿ ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇಕಡ 98.40ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದೆ. ಉಡುಪಿ ಶೇ 98.18ರ ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ 3ನೇ ಸ್ಥಾನ (ಶೇ. 98.09), ಹಾಸನ 4ನೇ ಸ್ಥಾನ (ಶೇ. 97.51) ಗಳಿಸಿದೆ. ಕಲಬುರಗಿ ಕೊನೆಯಲ್ಲಿದ್ದು, ಇಲ್ಲಿ ತೇರ್ಗಡೆಯಾವರ ಶೇಕಡವಾರು 85.06.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author