ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Entrepreneur T N Rajgopalredy died: ಖ್ಯಾತ ಉದ್ಯಮಿ ಟಿ.ಎನ್.ರಾಜಗೋಪಾಲರೆಡ್ಡಿ ನಿಧನ

ತಾಲ್ಲೂಕು ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಮದ ಉದ್ಯಮಿ ಹಾಗೂ ಪಿ.ಎಲ್.ಡಿ ಬ್ಯಾಂಕ್ ನಿವೃತ್ತ ಅಧಿಕಾರಿಗಳಾದ ಟಿ.ಎನ್.ರಾಜಗೋಪಾಲ ರೆಡ್ಡಿ (70) ಗುರುವಾರ ರಾತ್ರಿ 1:15ಗಂಟೆಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ರಾಜಗೋಪಾಲರೆಡ್ಡಿ ಅವರ ಪೋಟೋ..

ಬಾಗೇಪಲ್ಲಿ: ತಾಲ್ಲೂಕು ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾಮದ ಉದ್ಯಮಿ ಹಾಗೂ ಪಿ.ಎಲ್.ಡಿ ಬ್ಯಾಂಕ್ ನಿವೃತ್ತ ಅಧಿಕಾರಿಗಳಾದ ಟಿ.ಎನ್.ರಾಜಗೋಪಾಲ ರೆಡ್ಡಿ (70) ಗುರುವಾರ ರಾತ್ರಿ 1:15ಗಂಟೆಗೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: Chikkaballapur News: ಅದ್ಧೂರಿಯಾಗಿ ನಡೆದ ಶ್ರೀಶರಭಯೋಗೀಂದ್ರರ 307ನೇ ಆರಾಧನಾ ಮಹೋತ್ಸವ

ಗುರುವಾರ ರಾತ್ರಿ ೧:೦೦ ಗಂಟೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಬಾಗೇಪಲ್ಲಿ ದಾರಿ ಮಧ್ಯ ದಲ್ಲಿ ಕೊನೆಯುಸರು ಎಳೆದಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಅವರಿಗೆ ಪತ್ನಿ, ಮೂವರು ಪುತ್ರಿಯರು ಇದ್ದಾರೆ.

ಅವರ ನಿಧನಕ್ಕೆ  ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಗಂಗುಲಪ್ಪ, ಪಿ.ಎಸ್.ಸುಬ್ಬಾರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಹರಿನಾಥರೆಡ್ಡಿ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಕಲ್ಲಿಪಲ್ಲಿ ವೆಂಕಟೇಶ್, ಸುಧಾಕರ್ ರೆಡ್ಡಿ,ಗೂಳೂರು ಎಸ್. ಎಸ್.ರಮೇಶ್ ಬಾಬು ಎಂ.ಎನ್. ರಾಜಾರೆಡ್ಡಿ, ಟಿ.ಶ್ರೀನಿವಾಸ್, ವೆಂಕಟರಾಮರೆಡ್ಡಿ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.