ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂಚೆ ಮತ ಮರು ಎಣಿಕೆಯಲ್ಲಿ ಗೆಲುವು; ಚುನಾವಣಾಧಿಕಾರಿಯಿಂದ ಶೃಂಗೇರಿ ಬಿಜೆಪಿ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ಗೆ ಪ್ರಮಾಣಪತ್ರ

Sringeri Election Recounting: ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯ ನಡೆದಿತ್ತು. ಇದರಲ್ಲಿ ಗೆಲುವು ಕಂಡ ಹಿನ್ನೆಲೆಯಲ್ಲಿ ನೂತನ ಬಿಜೆಪಿ ಶಾಸಕ ಡಿ.ಎನ್‌.ಜೀವರಾಜ್‌ ಅವರಿಗೆ ಚುನಾವಣಾಧಿಕಾರಿ ಪ್ರಮಾಣ ಪತ್ರವನ್ನು ವಿತರಣೆ ಮಾಡಿದ್ದಾರೆ.

ಶೃಂಗೇರಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್‌ಗೆ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ.

ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಬಿಜೆಪಿಯ ನೂತನ ಶಾಸಕ ಡಿ.ಎನ್. ಜೀವರಾಜ್ ಅವರಿಗೆ ಶಾಸಕ ಪ್ರಮಾಣ ಪತ್ರವನ್ನು ವಿತರಣೆ ಮಾಡಿದ್ದಾರೆ. ಉಚ್ಚ ನ್ಯಾಯಾಲಯದ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯ ಮುಕ್ತಾಯಗೊಂಡ ಬಳಿಕ ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡಿದ್ದರು. ಇದೀಗ ನೂತನ ಶಾಸಕರಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಿದ್ದಾರೆ.

ಇನ್ನು ಮತ ಮರು ಎಣಿಕೆಯಲ್ಲಿ ಡಿ.ಎನ್. ಜೀವರಾಜ್ ಅವರು ಗೆಲುವು ಪಡೆದ ಹಿನ್ನೆಲೆಯಲ್ಲಿ ಶೃಂಗೇರಿಯ ಶಾರದಾ ಮಠಕ್ಕೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಜೀವರಾಜ್ ಅವರಿಗೆ ಅಭಿನಂದನೆ ಸಲ್ಲಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.

ಈ ಕುರಿತು ನೂತನ ಶಾಸಕ ಡಿ.ಎನ್. ಜೀವರಾಜ್ ಪ್ರತಿಕ್ರಿಯಿಸಿ, 2023 ಮೇ 13 ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿತ್ತು. ಕೌಂಟಿಂಗ್​​ನಲ್ಲಿ ಅಸಿಂಧು ಮತಗಳನ್ನು ಶಾಸಕರಾಗಿದ್ದ ಟಿ.ಡಿ. ರಾಜೇಗೌಡರಿಗೆ ಹಾಕಿದ್ದಾರೆ ಎಂದು ಚುನಾವಣಾ ಏಜೆಂಟರ ಮೂಲಕ ಆರ್​ಒಗೆ ದೂರು ಸಲ್ಲಿಕೆ ಮಾಡಿದ್ದೆ. ನಾನು ಆ ದಿನವೇ ಗೆದ್ದಿದ್ದೆ, ಆದರೆ ನನಗೆ ಮೋಸ ಮಾಡಿ ಇವರು ಗೆಲುವನ್ನು ಪಡೆದುಕೊಂಡಿದ್ದರು. ಈಗ ನ್ಯಾಯ ಸಿಕ್ಕಿದೆ ಹಾಗೂ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಟಿ.ಡಿ. ರಾಜೇಗೌಡ ಅವರು ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅಂಚೆ ಮತಗಳ ಬಂಡಲ್ ತೆಗೆದರೆ 25ಕ್ಕೆ 25 ಅಸಿಂಧು ಆಗಿತ್ತು ಎಂದು ನಾನು ಈ ದೂರನ್ನು 2023 ಮೇ 13ಕ್ಕೆ ಸಲ್ಲಿಕೆ ಮಾಡಿದ್ದೆ. ಅಸಿಂಧು ಮತಗಳನ್ನು ಅವರಿಗೆ ಹಾಕಿ ನೀವು ಗೆಲ್ಲಿಸಿದ್ದೀರಿ. ಇದು ಅವರ ಅರ್ಹ ಗೆಲುವು ಆಗಿರಲಿಲ್ಲ. ನೀವು ಮತಗಳ ಬಂಡಲ್ ತೆಗೆದಾಗ ಏನು ಇರಬೇಕು, ಅದೇ ಇರಬೇಕು. ಬೇರೆ ಇರಲು ಸಾಧ್ಯವೇ ಇಲ್ಲ. ನಾನು ಕೋರ್ಟ್​ನಲ್ಲಿ ಕೇಸ್ ಹಾಕಿರುವುದು ಕಾನೂನಿನ ಚೌಕಟ್ಟಿನಲ್ಲಿ, ಅದು 45 ದಿನದ ಒಳಗೆ ದೂರು ದಾಖಲು ಮಾಡಿದ್ದೆ. ಈಗ ನನಗೆ ಗೆಲುವಾಗಿದೆ ಎಂದು ತಿಳಿಸಿದರು.

Election results 2026: ಮೋದಿ ಅವರ ನಾಯಕತ್ವಕ್ಕೆ ಶಕ್ತಿ ತುಂಬುವ ಫಲಿತಾಂಶ: ಬಿ.ವೈ.ವಿಜಯೇಂದ್ರ ವಿಶ್ಲೇಷಣೆ

ನ್ಯಾಯಾಲಯ ನಿಖರವಾಗಿ ಮತ ಎಣಿಕೆ ದಿನದಂದೇ ಫಲಿತಾಂಶವನ್ನು ಘೋಷಣೆ ಮಾಡಿ ಎಂದು ಹೇಳಿದ್ದರೂ, ಆರ್‌ಒ ಕೋರ್ಟ್ ಆದೇಶವನ್ನು ಪಾಲನೆ ಮಾಡಿರಲಿಲ್ಲ. ಈಗ ನಾನು ಅಧಿಕಾರಿಗಳ ಮೇಲೆ ಯಾವುದೇ ಆರೋಪವನ್ನು ಮಾಡಲು ಇಷ್ಟ ಪಡಲ್ಲ. ಸರ್ಕಾರದ ಒತ್ತಡ ಈ ರೀತಿ ಇದ್ದಾಗ ಯಾವ ಅಧಿಕಾರಿಯಯಾದರು ಏನು ಮಾಡಲು ಸಾಧ್ಯ. ಈಗ ನಾನು ಪ್ರಮಾಣ ಪತ್ರವನ್ನು ಸ್ವೀಕಾರ ಮಾಡಿದ್ದೇನೆ ಎಂದರು.