ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkamagaluru Eid Milad controversy: ಚಿಕ್ಕಮಗಳೂರಿನಲ್ಲಿ ಪಾಕ್‌ ಪರ ಹಾಡು ಬಳಸಿ ವಿಡಿಯೊ ಪೋಸ್ಟ್;‌ ಎಫ್‌ಐಆರ್‌ ದಾಖಲು

Chikkamagaluru News: ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮುಸ್ಲಿಂ ಯುವಕರು ವಿಡಿಯೋ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಟಿಪ್ಪು ಸುಲ್ತಾನ್​ ಕಟೌಟ್​ ರೀಲ್ಸ್​​ಗೆ ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ಹಾಡನ್ನು ಹಾಕಿರೋದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರಿನಲ್ಲಿ ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್‌ ಕಟೌಟ್‌ ಅಳವಡಿಸಿರುವುದು.

ಚಿಕ್ಕಮಗಳೂರು: ಈದ್ ಮಿಲಾದ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ (Chikkamagaluru) 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ (Tipu Sultan cutout) ಹಾಕಲಾಗಿದೆ. ಆದರೆ, ಕಟೌಟ್ ವಿಡಿಯೊನಲ್ಲಿ ಪಾಕ್‌ ಸೇನೆಯ ಮುಜಾಹಿದ್‌ ಹಾಡು ಬಳಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿ ಎಫ್‌ಐಆರ್‌ ದಾಖಲಾಗಿದೆ.

ಈ ವಿಡಿಯೊ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮುಸ್ಲಿಂ ಯುವಕರು ಈ ವಿಡಿಯೋ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಟಿಪ್ಪು ಸುಲ್ತಾನ್​ ಕಟೌಟ್​ ರೀಲ್ಸ್​​ಗೆ ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ಹಾಡನ್ನು ಹಾಕಿರೋದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

MLA Abhay Patil Car Accident: ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಕಾರು ಭೀಕರ ಅಪಘಾತ

ವಿಡಿಯೊದಲ್ಲಿ ಪಾಕಿಸ್ತಾನ ಪರ ಹಾಡು ಬಳಕೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಪಿಎಸ್‌ಐ ಧನರಾಜ್ ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.

ರಾಷ್ಟ್ರೀಯ ಭಾವೈಕ್ಯತೆಗೆ ಘಾತಕವಾಗವ ರೀತಿಯಲ್ಲಿ ಮತ್ತು ಕೋಮುಗಳ ನಡುವೆ ಸೌಹಾರ್ದತೆಗೆ ಬಾಧಕವಾಗುವ ರೀತಿಯಲ್ಲಿ, ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡುವ ಉದ್ದೇಶ ಪೂರ್ವಕವಾಗಿ ದ್ವೇಷ ಭಾವವನ್ನುಂಟು ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ದೂರಿನಲ್ಲಿ ಕೋರಲಾಗಿದೆ. ಹೀಗಾಗಿ ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಇನ್ಸ್ಟಾ ಪೇಜ್ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸದ್ಯ ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ‌ತಂಡವನ್ನು ರಚಿಸಲಾಗಿದೆ.