ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ನನಗೆ ಯಾವತ್ತೂ ರಾಜಕೀಯ ನಿಶ್ಶಕ್ತಿ ಇಲ್ಲ, 5 ವರ್ಷ ನಾನೇ ಸಿಎಂ: ಕಾಲೆಳೆದ ವಿಪಕ್ಷಗಳಿಗೆ ಸಿದ್ದರಾಮಯ್ಯ ಖಡಕ್‌ ಉತ್ತರ

ವಿಪಕ್ಷ ನಾಯಕ ಆರ್.ಅಶೋಕ್, CLP ಸಭೆಯಲ್ಲಿ ನಿಮ್ಮನ್ನು ಆಯ್ಕೆ ಮಾಡಿರುವುದು 5 ವರ್ಷಕ್ಕಾ ಅಥವಾ ಎರಡೂವರೆ ವರ್ಷಕ್ಕೊ ಸರಿಯಾಗಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಒತ್ತಾಯ ಮಾಡಿದರು. ಈ ವೇಳೆ ಎರಡೂವರೆ ವರ್ಷವೆಂದು ಹೇಳಿಯೇ ಇಲ್ಲ ಎಂದು ಸಿಎಂ ಹೇಳಿದರು. ನನಗೆ ರಾಜಕೀಯ ನಿಶ್ಶಕ್ತಿ ಯಾವಾಗಲೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸದನದಲ್ಲಿ ಸಿಎಂ ಸಿದ್ದರಾಮಯ್ಯ

ಬೆಳಗಾವಿ, ಡಿ.19 : ನನಗೆ ರಾಜಕೀಯ ನಿಶ್ಶಕ್ತಿ ಯಾವಾಗಲೂ ಇಲ್ಲ, ಐದು ವರ್ಷ ನಾನೇ ಸಿಎಂ ಆಗಿರೋದು ಪಕ್ಕಾ ಎಂದು ವಿಧಾನಸಭೆ ಚಳಿಗಾಲದ ಅಧಿವೇಶನದ (Belagavi session) ಕೊನೆಯ ದಿನದ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಗುಡುಗಿದ್ದಾರೆ. ತಮ್ಮ ಕಾಲೆಳೆಯಲು ಯತ್ನಿಸಿದ ಆರ್‌. ಅಶೋಕ್‌, ಸುನೀಲ್‌ ಕುಮಾರ್‌, ಯತ್ನಾಳ್‌ ಮೊದಲಾದ ವಿಪಕ್ಷ ನಾಯಕರ ಬಾಯಿ ಮುಚ್ಚಿಸಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್, CLP ಸಭೆಯಲ್ಲಿ ನಿಮ್ಮನ್ನು ಆಯ್ಕೆ ಮಾಡಿರುವುದು 5 ವರ್ಷಕ್ಕಾ ಅಥವಾ ಎರಡೂವರೆ ವರ್ಷಕ್ಕೊ ಸರಿಯಾಗಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿದರು. ಈ ವೇಳೆ ಎರಡೂವರೆ ವರ್ಷವೆಂದು ಹೇಳಿಯೇ ಇಲ್ಲ ಎಂದು ಸಿಎಂ ಹೇಳಿದರು. ನಾಯಕತ್ವ ಬದಲಾವಣೆ ನಮ್ಮ ಪಕ್ಷದ ವಿಚಾರ. ಏನೇ ಇದ್ದರು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈಗ ನಾನು ಸಿಎಂ ಆಗಿದ್ದೇನೆ ಮುಂದೆಯೂ ನಾನೇ ಇರುತ್ತೇನೆ ಎಂದರು. ಈ ವೇಳೆ, ಈಗ ಉತ್ತರ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡುತ್ತಿರಲ್ವಾ ಅದನ್ನು ಜಾರಿ ಮಾಡಲು ನೀವೇ ಇರಬೇಕು ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು. ಸುನಿಲ್ ಕುಮಾರ್ ಮಾತಿಗೆ ನಾನೇ ಇರುತ್ತೇನೆ ಎಂದು ಸಿಎಂ ಪ್ರತ್ಯುತ್ತರ ನೀಡಿದರು.

ಸಿಎಂ- ಯತ್ನಾಳ್‌ ಜುಗಲ್‌ಬಂದಿ

ಇದೇ ವೇಳೆ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡಪಾಟೀಲ ಯತ್ನಾಳ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಜುಗಲ್ ಬಂದಿ ಕೂಡ ನಡೆದಿದೆ. ನಿಮ್ಮ ಮುಖದಲ್ಲಿ ನಿನ್ನೆ ನಿಶ್ಶಕ್ತಿ ಎದ್ದು ಕಾಣ್ತಿತ್ತು ಎಂದು ಬಿಜೆಪಿ ನಾಯಕರು ಸಿಎಂಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನನಗೆ ರಾಜಕೀಯ ನಿಶ್ಶಕ್ತಿ ಯಾವಾಗಲೂ ಇಲ್ಲ. ಮುಂದೆಯೂ ಇಲ್ಲ, ಈಗಲೂ ಇಲ್ಲ. ನೀವು ಏನಾದರೂ ಹಾಗೆ ಅಂದುಕೊಂಡರೆ ಅದು ತಪ್ಪು ಮಾಹಿತಿ ಎಂದರು. ರಾಜಕೀಯದಲ್ಲಿ ಅಷ್ಟೊಂದು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಜನರು ಆಶೀರ್ವಾದ ಮಾಡಿದರೆ ಮಾತ್ರ ಅಧಿಕಾರಕ್ಕೆ ಬರೋದು. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಮತದಾರ ಪ್ರಭುಗಳು ತಾನೇ ರಾಜಕೀಯ ಶಕ್ತಿ ನಿರ್ಧಾರ ಮಾಡೋದು ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಆಪ್ತರ ಜೊತೆಗೆ ಸತೀಶ್‌ ಜಾರಕಿಹೊಳಿ ಡಿನ್ನರ್‌ ಮೀಟಿಂಗ್

ಈ ವೇಳೆ ಸಿಎಂ ಕಾಲೆಳೆದ ಯತ್ನಾಳ್, ನೀವೇ ಐದು ವರ್ಷ ಪೂರ್ತಿ ಮಾಡ್ತೀರೋ? ಅಥವಾ ಇವತ್ತೇ ಧನ್ಯವಾದ, ವಿದಾಯ ಹೇಳ್ತೀರೋ..? ಎಲ್ಲರಿಗೂ ಧನ್ಯವಾದ ಹೇಳ್ತಿರೋದು ನೋಡ್ತಿದ್ರೆ ನಮಗೆ ಸಂಶಯ ಬರುತ್ತಿದೆ ಎಂದರು. ಅದಕ್ಕೆ ಸಿಎಂ, ಯತ್ನಾಳ್‌ಗೆ ಏನೇನೋ ಸಂಶಯಗಳಿವೆ. ಅವರಿಗೆ ಅವರ ಪಕ್ಷದಿಂದ ಅದಕ್ಕೇ ತೆಗೆದುಹಾಕಿಬಿಟ್ಟರು ಎಂದಿದ್ದಾರೆ.

ʼನನಗೂ ಹೊರ ಹಾಕಿದ್ದಾರೆ, ನಿಮಗೂ ಹೊರ ಹಾಕಿದ್ದಾರೆ. ಹೊರ ಹಾಕಿದವರಿಗೆ ಅನ್ಯಾಯ ಆಗಲ್ಲ, ನಿಮ್ಮನ್ನು ಕುತಂತ್ರದಿಂದ ಹೊರ ಹಾಕಿದ್ರು, ಈಗ ಸಿಎಂ ಆಗಲಿಲ್ವಾ? ರಾಜಕೀಯದಲ್ಲಿ ಅದು ಸಾಮಾನ್ಯʼ ಎಂದು ಯತ್ನಾಳ್‌ ನುಡಿದರು. ʼನಾನು ಅನ್ಯಾಯ ಆಯ್ತು ಅಂತ ಹೇಳಲ್ಲ. ಪಕ್ಷದಿಂದ ಹೊರ ಹಾಕಿದ್ದು ಸತ್ಯ ಅಲ್ಲ. ರಾಜಕೀಯದಲ್ಲಿ ಅವೆಲ್ಲಾ ಇರ್ತಾವೆ, ಆದರೆ ಸಂಶಯ ಇಟ್ಕೋಬೇಡಿʼ ಎಂದು ಸಿಎಂ ಹೇಳಿದರು. ಆಗ ಯತ್ನಾಳ್, ಈಗ ಕ್ಲಿಯರ್ ಆಯ್ತು, ಸಿಎಂ ಸಿದ್ದರಾಮಯ್ಯ ಐದು ವರ್ಷ ಪೂರ್ತಿ ಮುಗಿಸ್ತಾರೆ ಅಂತ ಸಂದೇಶ ಕೊಟ್ಟಂತಾಯ್ತು ಎಂದರು. ʼನಿಮ್ಮ ಕಳೆ ನೋಡಿದ್ರೆ ಅನಿಸುತ್ತಿದೆ, ಮೊನ್ನೆಯೆಲ್ಲ ಸಪ್ಪಗೆ ಇದ್ರಿ. ಇವಾಗ ರಾಜಕೀಯ ಕಳೆ ಬಂದು ಶಕ್ತಿ ಬಂದಿದೆʼ ಎಂದ ಅಶೋಕ್ ಮತ್ತೆ ಕಾಲೆಳೆದರು.

ಬೆಳಗಾವಿಯಲ್ಲಿ ಇ-ಖಾತಾ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಹರೀಶ್‌ ಕೇರ

View all posts by this author