ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haveri News: ವಿವಾಹಿತ ಯುವತಿಗೆ ಮೆಸೇಜ್; ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನ ಹತ್ಯೆ

Congress leader murdered: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಕೊಲೆ ನಡೆದಿದೆ. ಹೆಣ್ಣಿನ ವಿಚಾರಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಡಾಬಾದಿಂದ ಕಿಡ್ನ್ಯಾಪ್‌ ಮಾಡಿ, ಕೊಲೆಗೈದ ಬಳಿಕ ಶವವನ್ನು ವರದಾ ನದಿಗೆ ಶವ ಎಸೆಯಲಾಗಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನ ಹತ್ಯೆ

Prabhakara R Prabhakara R Aug 1, 2025 9:52 PM

ಹಾವೇರಿ: ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನನ್ನು ಹತ್ಯೆ ಮಾಡಿರುವ ಘಟನೆ (Haveri News) ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನೋಜ್ ಪ್ರಕಾಶ್ ಉಡಗಣ (28) ಹತ್ಯೆಯಾದ ಯುವಕ. ಈತ ಯೂತ್ ಕಾಂಗ್ರೆಸ್ ಜಿಲ್ಲಾ ಸೆಕ್ರೆಟರಿಯಾಗಿದ್ದು, ಡಾಬಾದಿಂದ ಕಿಡ್ನ್ಯಾಪ್‌ ಮಾಡಿ, ಕೊಲೆಗೈದ ಬಳಿಕ ಶವವನ್ನು ವರದಾ ನದಿಗೆ ಶವ ಎಸೆಯಲಾಗಿದೆ.

ಹೆಣ್ಣಿನ ವಿಚಾರಕ್ಕೆ ಶಿವರಾಜ್ ಮತ್ತು ಸಹಚರಿಂದ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮದುವೆಗೂ ಮುಂಚೆ ಆರೋಪಿ ಶಿವರಾಜ್ ಹೆಂಡತಿ ಹಾಗೂ ಮನೋಜ್‌ ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಆರೋಪಿ ಶಿವರಾಜ್ ಮತ್ತು ಮನೋಜ್ ಮಧ್ಯೆ ದ್ವೇಷ ಉಂಟಾಗಿತ್ತು.

ಇತ್ತೀಚೆಗೆ ಶಿವರಾಜ್ ಹೆಂಡತಿಗೆ ಮನೋಜ್ ಮೆಸೇಜ್ ಮಾಡಿದ್ದರಿಂದ ಕಿರಿಕ್ ನಡೆದಿದೆ. ಹೀಗಾಗಿ ನಾಲ್ಕೈದು ಬಾರಿ ಮನೋಜ್ ಮೇಲೆ ಶಿವರಾಜ್ ಅಟ್ಯಾಕ್ ಮಾಡಿದ್ದ. ಕೊನೆಗೆ ನಿನ್ನ ಹುಟ್ಟುಹಬ್ಬದ ದಿನವೇ ಕೊಲೆ ಮಾಡುತ್ತೀನಿ ಎಂದು ಶಿವರಾಜ್ ಬೆದರಿಕೆ ಹಾಕಿದ್ದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Murder Case: ತ್ರಿಕೋನ ಪ್ರೇಮಕಥೆ; ಕಾರು ಹರಿಸಿ ಯುವಕನ ಹತ್ಯೆ- ಖ್ಯಾತ ರಾಜಕಾರಣಿಯ ಮೊಮ್ಮಗ ಅರೆಸ್ಟ್‌

ಜು.25 ರಂದು ಲಕ್ಕಿಕೊಪ್ಪ ಕ್ರಾಸ್ ಬಳಿಯ ಡಾಬಾದಿಂದ ಮನೋಜ್‌ನ ಕಿಡ್ನ್ಯಾಪ್‌ ಮಾಡಿ, ಹತ್ಯೆಗೈದು‌ ಶವವನ್ನು ಸೇತುವೆ ಮೇಲಿಂದ ವರದಾ ನದಿಗೆ ಎಸೆಯಲಾಗಿದೆ. ಮೃತದೇಹ ಎಸೆದಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಹೊರತೆಗೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.