Election: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನನ್ನನು ಬೆಂಬಲಿಸಿ: ಪದವೀಧರರ ಕಣ್ಣಾಗಿ ಕೆಲಸ ಮಾಡುವೆ : ಜೆಡಿಯು ಪಕ್ಷದ ಅಭ್ಯರ್ಥಿ ಡಾ. ನಾಗರಾಜ್ ಭರವಸೆ
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಜೆಡಿಯು ಪಕ್ಷದ ಪದಾಧಿಕಾರಿಗಳೇ ಮೊಟ್ಟ ಮೊದಲ ಬಾರಿಗೆ ಈ ಕ್ಷೇತ್ರದ ಉದ್ದಕ್ಕೂ ಸಂಚರಿಸಿ ಪದವೀಧರ ಚುನಾವಣೆಗೆ ನೋಂದಣಿ ಮಾಡಿಕೊಳ್ಳ ಬೇಕಾದ ಫಾರಂ 18ನ್ನು ವಿತರಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.

-

ಚಿಕ್ಕಬಳ್ಳಾಪುರ : ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ, ಜಯಶೀಲರನ್ನಾಗಿ ಮಾಡಿದರೆ ಪದವೀಧರ ಸಮುದಾಯದ ಗಟ್ಟಿದನಿಯಾಗಿ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ನಾಗರಾಜ್ (JDS party candidate Dr. Nagaraj) ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಪದವಿ ಕಾಲೇಜುಗಳಿಗೆ ಬುಧವಾರ ಭೇಟಿ ನೀಡಿ ಆಗ್ನೇಯ ಪದವೀಧರ ಚುನಾವಣೆ ಪ್ರಬಂಧ ನೋಂದಣಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಜೆಡಿಯು ಪಕ್ಷದ ಪದಾಧಿಕಾರಿಗಳೇ ಮೊಟ್ಟಮೊದಲ ಬಾರಿಗೆ ಈ ಕ್ಷೇತ್ರದ ಉದ್ದಕ್ಕೂ ಸಂಚರಿಸಿ ಪದವೀಧರ ಚುನಾವಣೆಗೆ ನೋಂದಣಿ ಮಾಡಿಕೊಳ್ಳಬೇಕಾದ ಫಾರಂ 18ನ್ನು ವಿತರಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ದಾವಣಗೆರೆ ಚಿತ್ರದುರ್ಗ ತುಮಕೂರು ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳಲ್ಲಿ ಈ ತಂಡ ಪ್ರವಾಸ ಮಾಡಿ ನಮ್ಮನೆ 18 ಎಲ್ಲರಿಗೂ ವಿತರಿಸುವ ಕೆಲಸ ಮಾಡಿದೆ ಎಂದ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಜಿಲ್ಲಾ ಉಪ ವಿಭಾಗ ಅಧಿಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳು ಉಪನ್ಯಾಸಕರು ,ಸಂಘ ಸಂಸ್ಥೆಗಳ ಮುಖಂಡರನ್ನು ಭೇಟಿ ಮಾಡಿ ಆಗ್ನೇಯ ಪದವೀಧರ ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಇದನ್ನೂ ಓದಿ: Chikkanayakanahalli News: ದೇಗುಲ ಜೀರ್ಣೋದ್ಧಾರಕ್ಕೆ ಅಕ್ರಮ ಮದ್ಯ ಮಾರಾಟದ ಹಕ್ಕು ಹರಾಜು; ಸಮಿತಿ ವಿರುದ್ಧ ಭಕ್ತರ ಆಕ್ರೋಶ
ಪದವೀಧರ ಮತದಾರರು ಈ ಬಾರಿ ಜೆಡಿಯು ಪಕ್ಷದ ಅಭ್ಯರ್ಥಿಯ ಬದ್ಧತೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಭಾಗದ ಜನತೆ ನನ್ನನ್ನು ಬೆಂಬಲಿಸುವ ಬಗ್ಗೆ ಮಾತನಾಡಿದ್ದಾರೆ. ವಿಧಾನಸೌಧದಲ್ಲಿ ಪದವೀಧರ ಸಮುದಾಯ ಎದುರಿಸುತ್ತಿರುವ ಕಷ್ಟಗಳಿಗೆ ಪರಿಹಾರ ಕಲ್ಪಿಸಲು ಈವರೆಗೆ ಸಮರ್ಥ ನಾಯಕತ್ವದ ಕೊರತೆ ಇದೆ .
ಇದು ದೂರ ಆಗಬೇಕಾದರೆ ನನಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
2014 ರಿಂದ ಪದವೀಧರರಿಗಾಗಿ ಅನೇಕ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ಭಾಗವಹಿಸಿ ನೈತಿಕ ಬೆಂಬಲ ಸೂಚಿಸಿದ್ದೇನೆ. ಅಲ್ಲದೆ ರಾಜ್ಯದಲ್ಲಿ 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಪದವೀಧರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲದಂತಾಗಿದೆ. ಇದನ್ನು ಹೋಗಲಾಡಿಸಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಹೆಚ್ಚಿನ ಮತಗಳಿಂದ ಜಯಶೀಲನನ್ನಾಗಿ ಮಾಡಿದರೆ ಖಂಡಿತವಾಗಿ ನಿಮ್ಮ ಋಣವನ್ನು ತೀರಿಸುತ್ತೇನೆ ಎಂದರು.
ಪದವೀಧರ ಚುನಾವಣೆಯಲ್ಲಿ ಮತ ಚಲಾಯಿಸಬೇಕಾದರೆ ಪದವಿ ಪೂರ್ಣಗೊಳಿಸಿರುವ ಬಿಎ ಬಿಕಾಂ ಬಿ ಬಿ ಎಂ ಡಿಪ್ಲೋಮೋ ಎಂಜಿನಿಯರಿಂಗ್ ಮೆಡಿಕಲ್ ಇತ್ಯಾದಿ ಪದವೀಧರರು ತಾಲೂಕ ಕಚೇರಿ ಚುನಾವಣೆ ಶಾಖೆಗೆ ಹೋಗಿ ಅರ್ಜಿ ನಮೂನೆ ಪಡೆದು ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಬಗ್ಗೆ ಬಹುತೇಕರಿಗೆ ಅರಿವು ಇಲ್ಲದ ಕಾರಣ ನಮ್ಮ ತಂಡ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಎಲ್ಲಾ ತಾಲೂಕುಗಳಿಗೆ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಲು ನಮೂನೆ ಪತ್ರಗಳನ್ನು ವಿತರಿಸುತಿದ್ದೇವೆ.1/11/2025ರ ಒಳಗೆ ಮೂರು ವರ್ಷದ ಪದವಿ ಪೂರೈಸಿರುವ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಎರಡು ಫೋಟೋ ಜೊತೆಗೆ ಗೆಜಿಟೆಡ್ ಅಧಿಕಾರಿಯ ಅಟೆಸ್ಟೆಡ್ ಪ್ರತಿಗಳೊಂದಿಗೆ 6 ನವೆಂಬರ್ 2025ರ ಒಳಗೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
ಈ ವೇಳೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ವಸುಂದರ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಜಿಡಿ ಚಂದ್ರಯ್ಯ, ಡಾ. ನರಸಿಂಹಮೂರ್ತಿ, ರಘು, ವಸುಂದರ ಪ್ರೊಫೆಸರ್ ವೆಂಕಟೇಶ್ ವಿನಯ್ ಸೇರಿದಂತೆ ನೂರಾರು ಇದ್ದರು.