ಮಂಗಳೂರು: ಧರ್ಮಸ್ಥಳ (Dharmasthala Case) ಬುರುಡೆ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ಎದುರು ಶಾಕಿಂಗ್ ಸತ್ಯ ಬಯಲಾಗಿದೆ. ಹೆಣಗಳನ್ನು ಹೂತಿದ್ದೇನೆ ಎಂದು ಬಂದಿದ್ದ ಚಿನ್ನಯ್ಯನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತನಗೆ ಬುರುಡೆ ಕೊಟ್ಟವರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಬುರುಡೆ ಹಿಡಿದುಕೊಂಡು ಕೋರ್ಟ್‌ಗೆ ಬಂದಿದ್ದ ಚಿನ್ನಯ್ಯ ಎರಡು ತಿಂಗಳು ಬುರುಡೆ ಬಿಟ್ಟಿದ್ದ. ಚಿನ್ನಯ್ಯನಿಗೆ ಬುರುಡೆ ಕೊಟ್ಟಿದ್ಯಾರು? ಬುರುಡೆ ಎಲ್ಲಿಂದ ಬಂತು ಅಂತಾ ಎಸ್ಐಟಿ ಅಧಿಕಾರಿಗಳು ಬಿಸಿನೀರು ಕಾಯಿಸಿದಾಗ ಬುರುಡೆ ರಹಸ್ಯ ಬಯಲಾಗಿದೆ. ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲ್ ಗೌಡ ಎನ್ನಲಾಗುತ್ತಿದ್ದು, ಯಾವುದೇ ಕ್ಷಣದಲ್ಲಿ ಎಸ್‌ಐಟಿಯಿಂದ ವಿಠಲ್ ಗೌಡ ಅರೆಸ್ಟ್ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯ ವೇಳೆ ನೇತ್ರಾವತಿ ಸ್ನಾನಘಟ್ಟದಲ್ಲಿ ವಿಠಲಗೌಡ ಅವರೊಂದಿಗೆ ಆಗಮಿಸಿದ ಎಸ್.ಐ.ಟಿ ತಂಡ ಸ್ಥಳಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟದಲ್ಲಿರುವ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆ ಯನ್ನು ತಂದು ನೀಡಿದ್ದು, ಅದನ್ನು ಚಿನ್ನಯ್ಯನಿಗೆ ಒಪ್ಪಿಸಿರುವುದು ಎಸ್.ಐ.ಟಿ ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಎಸ್‌ಐಟಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದೆ. ಸೌಜನ್ಯ ಪ್ರಕರಣದ ಆರೋಪ ಹೊತ್ತಿದ್ದ ಮೂವರಿಗೆ ಎಸ್ ಐಟಿ ಅಧಿಕಾರಿಗಳು ಕರೆ ನೀಡಿದ್ದಾರೆ. ವಿಚಾರಣೆಗೆ ಬರುವಂತೆ ಸೂಚನೆ ನೀಡಲಾಗಿದ್ದು, ಉದಯ್ ಜೈನ್ ಕೂಡ ತೆರಳಿದ್ದರು. ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಕೆಲ್ಲಾ ಅವರಿಗೆ ವಿಚಾರಣೆಗೆ ಕರೆ ಮಾಡಲಾಗಿದೆ. ಸೌಜನ್ಯ ಪ್ರಕರಣದ ಸಿಬಿಐ ತನಿಖೆಯಲ್ಲಿಯೂ ಈ ಮೂವರ ವಿರುದ್ಧ ಪ್ರಕರಣ ಸಾಬೀತಾಗಿಲ್ಲ. ಕೆಲ ದಿನಗಳ ಹಿಂದೆ ಸೌಜನ್ಯ ಪ್ರಕರಣದ ಪ್ರತ್ಯಕ್ಷದರ್ಶಿ ಒಬ್ಬರು ಎಸ್ ಐಟಿಗೆ ದೂರು ಸಲ್ಲಿಕೆ ಮಾಡಿದ್ದರು. ಆ ದೂರಿನ ಹಿನ್ನೆಲೆ ಕರೆ ನೀಡಿರುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Dharmasthala Case: ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದ ಮರು ತನಿಖೆ ಇಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಉದಯ್ ಜೈನ್ ಮಾತನಾಡಿ, ನಿನ್ನೆ ರಾತ್ರಿ ಕರೆ ಮಾಡಿದ್ದರು, ಹಾಗಾಗಿ ಬಂದಿದ್ದೆ. ಇವತ್ತು ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಇವತ್ತು ಬರಲು ಹೇಳಿದ್ದಾರೆ. ಮೂವರಿಗೂ ಹೇಳಿದ್ದಾರೆ ಎಂದರು. ಸಿಎಂ, ಗೃಹಸಚಿವರು ಹೇಳಿದ್ದ ಪ್ರಕಾರ ಸೌಜನ್ಯ ಪ್ರಕರಣ ಹೊರಗಿಟ್ಟು ಉಳಿದ ಪ್ರಕರಣ ಅಷ್ಟೆ ಎಸ್‌ಐಟಿ ತನಿಖೆ ಎಂದಿದ್ದರು.