Dharmasthala Case: ಮಾಸ್ಕ್ ಮ್ಯಾನ್ ಚಿನ್ನಯ್ಯ ತಂದ ಬುರುಡೆ ಪುರುಷನದ್ದು: ಎಫ್‌ಎಸ್‌ಎಲ್ ವರದಿ
Mask Man: ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಆರೆಸ್ಟ್ ಮಾಡಿ ತೀವ್ರ ತನಿಖೆ ನಡೆಸಿದ್ದಾರೆ. ಜೊತೆಗೆ ಇಂದು ಚಿನ್ನಯ್ಯನಿಗೆ ಆಶ್ರಯ ನೀಡಲಾಗಿದ್ದ ಧರ್ಮಸ್ಥಳ ವಿರೋಧಿ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಪರಿಶೀಲನೆ ನಡೆಸಿದೆ.


ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ (mask man chinnayya), ಅದಕ್ಕೆ ಸಾಕ್ಷಿಯಾಗಿ ತಂದಿದ್ದ ಬುರುಡೆ ಪುರುಷನದ್ದು ಎಂಬುದು ಬೆಳಕಿಗೆ ಬಂದಿದೆ. ಎಫ್‌ಎಸ್‌ಎಲ್ (FSL) ಪರೀಕ್ಷೆಯಲ್ಲಿ ಈ ಸ್ಪೋಟಕ ಮಾಹಿತಿ ಬಯಲಾಗಿದೆ. ಅತ್ಯಾಚಾರ ಮಾಡಿ ಕೊಲ್ಲಲಾದ ಶವವನ್ನು ಹೂತು ಹಾಕಿದ್ದು, ಇದು ಹೆಣ್ಣು ಮಗಳ ತಲೆಬುರುಡೆ ಎಂದು ಚಿನ್ನಯ್ಯ ಹೇಳಿದ್ದ. ಆದರೆ ಅದು 25ರಿಂದ 30 ವರ್ಷದ ಪುರುಷನ ತಲೆಬುರುಡೆ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಆರೆಸ್ಟ್ ಮಾಡಿ ತೀವ್ರ ತನಿಖೆ ನಡೆಸಿದ್ದಾರೆ. ಜೊತೆಗೆ ಇಂದು ಚಿನ್ನಯ್ಯನಿಗೆ ಆಶ್ರಯ ನೀಡಲಾಗಿದ್ದ ಧರ್ಮಸ್ಥಳ ವಿರೋಧಿ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಪರಿಶೀಲನೆ ನಡೆಸಿದೆ. ಇಂದು ಮುಂಜಾನೆ ಸರ್ಚ್ ವಾರಂಟ್ ಹಿಡಿದು ಬಂದ ಎಸ್‌ಐಟಿ ತಂಡ, ಮನೆಯನ್ನಿಡೀ ತಲಾಶೆಗೆ ಒಳಪಡಿಸಿದೆ. ಆಗ ಚಿನ್ನಯ್ಯನ ಮೊಬೈಲ್, ಆತ ಬಟ್ಟೆಗಳು ಮತ್ತಿತರ ವಸ್ತುಗಳು ದೊರೆತಿವೆ. ಸಂಶಯಾಸ್ಪದ ಹಾಗೂ ತನಿಖೆಗೆ ಪೂರಕವಾದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Dharmasthala: ಧರ್ಮಸ್ಥಳ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪ; ಎಸ್‌ಐಟಿಯಿಂದ ತಿಮರೋಡಿ ಮನೆಗೆ ದಾಳಿ