ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿದ್ದ ಮಾಸ್ಕ್ ಮ್ಯಾನ್ ಬುರುಡೆ ಚಿನ್ನಯ್ಯನನ್ನು (Mask man chinnayya) ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಯ ಒಳಪಡಿಸಿದ್ದು, ಎಸ್ಐಟಿ (SIT) ಮುಂದೆ ಇದೀಗ ಆತ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಸುಳ್ಳು ಹೇಳಲು ಸುಮಾರು 4 ಲಕ್ಷ ರೂ. ವರೆಗೂ ಹಣ ನೀಡಿ, ಸುಳ್ಳು ಹೇಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ.
ಚಿನ್ನಯ್ಯನಿಗೆ ಬುರುಡೆ ಗ್ಯಾಂಗ್ ಸೂತ್ರಧಾರಿಗಳು ಹಣ ನೀಡಿ ಹೀಗೆ ಹೇಳಬೇಕು ಅಂತ ಬೆದರಿಕೆ ಹಾಕಿದ್ದರು. ನನಗೆ ಹೀಗೆ ಹೀಗೆ ಹೇಳಿಕೆ ನೀಡಬೇಕು ಎಂದು ಹೇಳಿ ಕೊಟ್ಟರು. ಪ್ರಕರಣದ ಒಂದು ಹಂತದಲ್ಲಿ ನಾನು ದೂರವಾಗಲು ಬಯಸಿದಾಗ ನನಗೆ ಹೆದರಿಕೆ ಹಾಕಿದರು. ಸಹಾಯ ಮಾಡುವ ರೀತಿಯಲ್ಲಿ ಹಣ ಕೊಟ್ಟಿದ್ದಾರೆ. ಐದು ಹತ್ತು ಸಾವಿರ ಹೀಗೆ ಹಂತ ಹಂತವಾಗಿ ಮೂರುವರೆಯಿಂದ ನಾಲ್ಕು ಲಕ್ಷದ ತನಕ ಹಣ ನೀಡಿದರು ಎಂದು ಹೇಳಿಕೆ ನೀಡಿದ್ದಾನೆ.
ಕೊನೆಯ ಹಂತದಲ್ಲಿ ನಾನು ಇವರಿಂದ ದೂರವಾಗುವುದಕ್ಕೆ ಬಯಸಿದ್ದೆ. ನಿನ್ನ ಬಿಡುವುದಿಲ್ಲ ಹೊಡೆದು ಮುಗಿಸುತ್ತಾರೆ ಎಂದು ಈ ಗ್ಯಾಂಗ್ ಬೆದರಿಕೆ ಹಾಕಿತ್ತು. ನಿನಗೆ ಎಲ್ಲಾ ಗೊತ್ತಿದೆ ಎಂದು ಬೆದರಿಕೆ ಹಾಕಿದರು. ನಾವು ಹೇಳಿದ ಹಾಗೆ ಕೇಳಿಲ್ಲ ಅಂದರೆ ನಿನ್ನ ವಿರುದ್ಧವೇ ಕೇಸ್ ಹಾಕುತ್ತೇವೆ. ನಿನಗೆ ಜೀವಾವಧಿ ಶಿಕ್ಷೆ ಆಗುತ್ತದೆ ಎಂದು ನನ್ನನ್ನು ಹೆದರಿಸಿದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ: Dharmasthala Case: ಚಿನ್ನಯ್ಯನ 25 ವಿಡಿಯೋ ಮಾಡಿದ ಬುರುಡೆ ಗ್ಯಾಂಗ್, ಧರ್ಮಸ್ಥಳದ ವಿರುದ್ಧ ಭಾರಿ ಷಡ್ಯಂತ್ರ ಬಯಲು