ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಸ್ಲಿಮರೇ ಬೋಗಸ್​ ವೋಟು ಹಾಕುವುದು ಜಾಸ್ತಿ, ಹಿಂದೂಗಳು ಕಾನೂನು ಮೀರುವುದಿಲ್ಲ: ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ

Basangouda Patil Yatnal: ʼʼಮುಸ್ಲಿಮರೇ ಬೋಗಸ್​ ವೋಟು ಹಾಕುವುದು ಜಾಸ್ತಿ, ಹಿಂದೂಗಳಿಗೆ ಆ ಧೈರ್ಯವಿಲ್ಲ ಮತ್ತು ಕಾನೂನು ಮೀರುವುದಿಲ್ಲ. ಬುರ್ಖಾ ಹಾಕೊಂಡು ಒಂದೇ ಹೆಸರಲ್ಲಿ 10 ಜನರ ವೋಟ್ ಇದೆ. ಕಾಂಗ್ರೆಸ್​​ ಕೂಡ ಅವರಿಗೆ ಬೆಂಬಲ ನೀಡುತ್ತಿದೆʼʼ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದರು. ‌ದಾವಣಗೆರೆಯಲ್ಲಿ ಅವರು ಮಾತನಾಡಿದರು.

ಬಸನಗೌಡ ಪಾಟೀಲ ಯತ್ನಾಳ್ (ಸಂಗ್ರಹ ಚಿತ್ರ)

ದಾವಣಗೆರೆ, ಅ. 4: ʼʼಎಸ್‌ಐಆರ್ (SIR) ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಆ ಪಕ್ಷದ ಹತಾಶೆ ಪ್ರತೀಕ. ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ಕಾಂಗ್ರೆಸ್ ನಾಯಕರು ಅಸಾಂವಿಧಾನಿಕವಾಗಿ ಮಾತನಾಡುತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ವಿರುದ್ಧವೂ ಅಪಪ್ರಚಾರ ಮಾಡಲಾಗುತ್ತಿದೆʼʼ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ʼʼಮುಸ್ಲಿಮರೇ ಬೋಗಸ್​ ವೋಟು ಹಾಕುವುದು ಜಾಸ್ತಿ, ಹಿಂದೂಗಳಿಗೆ ಆ ಧೈರ್ಯವಿಲ್ಲ ಮತ್ತು ಕಾನೂನು ಮೀರುವುದಿಲ್ಲ. ಬುರ್ಖಾ ಹಾಕೊಂಡು ಒಂದೇ ಹೆಸರಲ್ಲಿ 10 ಜನರ ವೋಟ್ ಇದೆ. ಕಾಂಗ್ರೆಸ್​​ ಕೂಡ ಅವರಿಗೆ ಬೆಂಬಲ ನೀಡುತ್ತಿದೆʼʼ ಎಂದು ಆರೋಪಿಸಿದರು.

ʼʼಬೋಗಸ್​ ವೋಟಿಂಗ್​ ಮಾಡುವ ಮೂಲಕ ಈ ದೇಶವನ್ನು ಪಾಕಿಸ್ತಾನ ಮಾಡಬೇಕು ಎನ್ನುವ ಷಡ್ಯಂತರ ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಜಾರಿಯಾಗದೆ ಇದ್ದಿದ್ದರೆ ಪರಿಸ್ಥಿತಿ ಮತ್ತಷ್ಟು ಭಿನ್ನವಾಗಿರುತ್ತಿತ್ತುʼʼ ಎಂದರು.

ಶಾಲೆಯಲ್ಲಿ ಹಾಜರಾತಿ ವೇಳೆ ‘yes sir’ ಬದಲು ʼಜೈ ಶ್ರೀರಾಮ್ʼ ಅಂತ ಹೇಳಿ: ವಿದ್ಯಾರ್ಥಿಗಳಿಗೆ ಶಾಸಕ ಯತ್ನಾಳ್ ಕರೆ

ʼʼಮತದಾನದ ವೇಳೆ ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇವಿಎಂ ಬದಲು ಬ್ಯಾಲೆಟ್ ಪೇಪ‌ರ್ ಬಳಕೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಇದೇ ಇವಿಎಂ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲವೇ? ಅಧಿಕಾರಕ್ಕೆ ಮರಳುವ ಭರವಸೆ ಕಳೆದುಕೊಂಡಿರುವ ಕಾರಣ ಕಾಂಗ್ರೆಸ್ ನಾಯಕರು ಎಸ್‌ಐಆ‌ರ್ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆʼʼ ಎಂದು ಕಿಡಿಕಾರಿದರು.

ಬಿಜೆಪಿ ವಿರುದ್ಧವೂ ಟೀಕೆ

‘ʼರಾಜ್ಯ ಬಿಜೆಪಿಯದ್ದು ಹೊಂದಾಣಿಕೆ ರಾಜಕೀಯ. ಬಿಜೆಪಿಯಲ್ಲಿ ಈಗ ಯಾರು ಮತಗಳನ್ನ ಸೆಳೆಯುವ ನಾಯಕರಿದ್ದಾರೆ? ತಮಿಳುನಾಡಿನ ಟಿಎಂಕೆ, ವಿಜಯ್ ರೀತಿ ನನ್ನದೂ ಚಮತ್ಕಾರ ಆಗಲಿದೆ. ಈಗಾಗಲೇ ನಾನು ಪ್ರಚಾರ ಆರಂಭಿಸಿದ್ದೇನೆ. ಚುನಾವಣೆ ಬಳಿಕ‌ ನನ್ನ ಶಕ್ತಿ ರಾಜ್ಯದ ಜನರಿಗೆ ಗೊತ್ತಾಗಲಿದೆ. ನಾನೂ ಕೂಡ ಮುಖ್ಯಮಂತ್ರಿಯಾಗಿತ್ತೇನೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚೋದನಕಾರಿ ಭಾಷಣ; ಶಾಸಕ ಬಸನಗೌಡ ಯತ್ನಾಳ್‌ ವಿರುದ್ಧ ಕೇಸ್ ದಾಖಲು

ಬಿಜೆಪಿಯಿಂದ ಉಚ್ಚಾಟನೆಯಾಗಿರುವ, ಹಿಂದೂ ಹುಲಿ ಖ್ಯಾತಿಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ. ʼʼಯಾರ ಕಾಲಿಗೂ ಬಿದ್ದು ಪಕ್ಷಕ್ಕೆ ಸೇರಿಸಿಕೊಳ್ಳಿ ಅಂತ ಹೇಳಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುತ್ತೇನೆ. ನಾನೇ ಸಿಎಂ ಆಗುತ್ತೇನೆ. 2028ಕ್ಕೆ ನಾನೇ ಸಿಎಂ ಆಗ್ತೀನಿ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆʼʼ ಎಂದು ಯತ್ನಾಳ್ ಇತ್ತೀಚೆಗೆ ಸ್ಫೋಟಕ ಭವಿಷ್ಯ ನುಡಿದಿದ್ದರು.‌

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author