ಬೆಂಗಳೂರು, ಮಾ. 26: ಕೃಷ್ಣಾ ಮೇಲ್ದಂಡೆ ವಿಚಾರವಾಗಿ ರೈತರಿಗೆ ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನೀರನ್ನು ಒದಗಿಸಿಕೊಡಲು ಬದ್ಧವಾಗಿದ್ದೇವೆ. ಹಣಕಾಸಿನ ವಿಚಾರವಾಗಿ ಸವಾಲುಗಳಿದ್ದು ಇದರ ಬಗ್ಗೆ ನಮ್ಮ ಸರ್ಕಾರ ಏನಾದರೂ ಮಾಡಿಯೇ ಮಾಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಆಲಮಟ್ಟಿ ವಿಚಾರವಾಗಿ ಎಚ್.ಕೆ. ಪಾಟೀಲ್, ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ನಿರ್ಣಯದ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ಮಾತನಾಡಿದರು.
ಈ ವಿಚಾರವಾಗಿ ದೆಹಲಿಗೆ ತೆರಳಿ ಸಭೆ ನಡೆಸಿ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಅಡ್ಡಿ ಮಾಡುತ್ತಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಕಾನೂನಾತ್ಮಕ ವಿಚಾರಗಳನ್ನು ಚರ್ಚೆ ನಡೆಸಲಾಗಿದೆ. ಬೋಸರಾಜು, ಎಂ.ಬಿ. ಪಾಟೀಲ್, ನಾನು ಎಚ್.ಕೆ. ಪಾಟೀಲ್ ಹಾಗೂ ರಾಜ್ಯದ ಅಡ್ವೊಕೇಟ್ ಜನರಲ್ ನಾಗಮೋಹನ್ ದಾಸ್ ಸೇರಿಕಾನೂನು ತಜ್ಞರು ಚರ್ಚೆ ನಡೆಸಿ ರಾಜ್ಯದ ಹಿತ ಕಾಪಾಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
ಜಿಬಿಎ ಪಾಲಿಕೆಗಳ ಬಜೆಟ್; ಹಣಕಾಸು ಕೊರತೆ ಇರುವ ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ನೆರವು: ಡಿ.ಕೆ. ಶಿವಕುಮಾರ್
ಎಲ್ಲ ಸದಸ್ಯರು ಬಜೆಟ್ ಪಾಸ್ ಮಾಡಿಕೊಟ್ಟಿದ್ದೀರಿ. ಪರಿಷತ್ತಿನಲ್ಲಿ ಉತ್ತಮವಾದ ಚರ್ಚೆಗಳು ನಡೆದಿವೆ. ನಮ್ಮ ರಾಜ್ಯದ ಹಿತಕ್ಕಾಗಿ ಆಲಮಟ್ಟಿ ವಿಚಾರದಲ್ಲಿ ಎಚ್.ಕೆ. ಪಾಟೀಲ್ ನಿರ್ಣಯ ಮಂಡಿಸಿದ್ದಾರೆ. ಈ ನಿರ್ಣಯಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಕ್ಕೆ ಅಭಿನಂದನೆ ತಿಳಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.