ಬೆಂಗಳೂರು, ಏ.17: ಡಾ ಎಸ್ ಎಲ್ ಭೈರಪ್ಪ ಅವರ ʼಧರ್ಮಶ್ರೀʼ ಕಾದಂಬರಿಗೆ 65 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ಏ.18ರಂದು ಶನಿವಾರ ಸಂಜೆ 5 ಗಂಟೆಗೆ ಎಸ್ ಎಲ್ ಭೈರಪ್ಪ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎಸ್ ಎಲ್ ಭೈರಪ್ಪ ಪ್ರತಿಷ್ಠಾನವು ಈ ವಿಶೇಷ ಮತ್ತು ವಿಭಿನ್ನ ಕಾರ್ಯಕ್ರಮ ರೂಪಿಸಿದೆ.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಸ್ವಾಗತ ಮತ್ತು ಪ್ರಸ್ತಾವನೆ ಮಾಡಲಿದ್ದಾರೆ. ʼಧರ್ಮಶ್ರೀʼ ಕಾದಂಬರಿ ಕುರಿತು ಜಿ ಬಿ ಹರೀಶ್ ಅವರು ಮಾತನಾಡಲಿದ್ದಾರೆ.
ಭೈರಪ್ಪನವರ ಕೃತಿಗಳ ಮರಾಠಿ ಅನುವಾದಕರಾದ ಉಮಾ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್ ಎಲ್ ಭೈರಪ್ಪ ಪ್ರತಿಷ್ಠಾನದ ಟ್ರಸ್ಟಿಗಳಾದ ತೇಜಸ್ವಿನಿ ಅನಂತ್‌ಕುಮಾರ್, ಕೃಷ್ಣ ಪ್ರಸಾದ್, ಅರುಣ ಮತ್ತು ಸಹನಾ ವಿಜಯ್ ಕುಮಾರ್ ಅವರು ಉಪಸ್ಥಿತರಿರಲಿದ್ದಾರೆ. ಲಘು ಉಪಾಹಾರದ ಬಳಿಕ ಕಾರ್ಯಕ್ರಮ ಆರಂಭವಾಗಲಿದೆ.
ಕಾರ್ಯಕ್ರಮ ನಡೆಯುವ ದಿನ: ಏಪ್ರಿಲ್ 18 ಶನಿವಾರ.
ಸಮಯ: ಸಂಜೆ 5 ಗಂಟೆ
ಸ್ಥಳ: ನ್ಯಾಷನಲ್ ಕಾಲೇಜು, ಬಸವನಗುಡಿ
SL Bhyrappa Will Exclusive: ಕುಟುಂಬ ವ್ಯಾಮೋಹ ಮೀರಿದ ಭೈರಪ್ಪ-ಅಂತಿಮ ಉಯಿಲು ಬಹಿರಂಗ