ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಆ.28ರಂದು ʼನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆʼ ಜಾಥಾ

Dharmasthala: ಆಗಸ್ಟ್‌ 28ರಂದು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಕಾರುಗಳಲ್ಲಿ ಜಾಥಾ ನಡೆಸಲಿದ್ದಾರೆ. ಈ ಕುರಿತು ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷರು ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷರಾಗಿರುವ ನಾರಾಯಣಸ್ವಾಮಿ ಜಿ. ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆದಿರುವ ವ್ಯಾಪಕವಾದ ಅಪಪ್ರಚಾರ, ಅವಹೇಳನವನ್ನು (Dharmasthala Case) ವಿರೋಧಿಸಿ, ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ನ್ಯಾಯವಾದಿಗಳು (Advocates) ಆಗಸ್ಟ್‌ 28ರಂದು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಕಾರುಗಳಲ್ಲಿ ಜಾಥಾ ನಡೆಸಲಿದ್ದಾರೆ.

ಈ ಕುರಿತು ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷರು ಹಾಗೂ ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷರಾಗಿರುವ ನಾರಾಯಣಸ್ವಾಮಿ ಜಿ. ಪತ್ರಿಕಾ ಹೇಳಿಕೆ ನೀಡಿದ್ದಾರೆ. ಅವರ ಪತ್ರಿಕಾ ಹೇಳಿಕೆಯ ಪೂರ್ಣ ಪಾಠ ಈ ಕೆಳಗಿನಂತಿದೆ:

ʼಧರ್ಮದ ಉಳಿವಿಗಾಗಿ ಸಂಸ್ಕೃತಿಯ ರಕ್ಷಣೆಗಾಗಿ ನ್ಯಾಯವಾದಿಗಳ ನಡೆ ಧರ್ಮಸ್ಥಳದ ಕಡೆ. ಮಂಜುನಾಥನ ಹಾಗೂ ಅಣ್ಣಪ್ಪ ಸ್ವಾಮಿಯ ಪಾದಗಳಿಗೆ ನಮಸ್ಕರಿಸುತ್ತಾ, ಪ್ರೀತಿಯ ನಲ್ಮೆಯ ಸಹೋದರ ಸಹೋದರಿ ವಕೀಲ ಮಿತ್ರರೇ, ಇತ್ತೀಚಿನ ದಿನದ ಬೆಳವಣಿಗೆಯಲ್ಲಿ ಹಿಂದೂ ಧರ್ಮದ ಅವನತಿ ಮಾಡುವ ಪ್ರಯತ್ನದಲ್ಲಿ ಧರ್ಮದ ಅವಹೇಳನೆ ಮಾಡುತ್ತಿರುವುದು ಧರ್ಮಸ್ಥಳದ ಬಗ್ಗೆ ಹಾಗೂ ಧಾರ್ಮಿಕ ನಂಬಿಕೆಗೆ ಅವಹೇಳನಕಾರಿ ಹೇಳಿಕೆಗಳನ್ನು ಕೊಡುತ್ತಿರುವುದು ಮತ್ತು ಧರ್ಮಸ್ಥಳವನ್ನು ಮಂಜುನಾಥ ಸ್ವಾಮಿಯನ್ನು ಮತ್ತು ಅಣ್ಣಪ್ಪ ಸ್ವಾಮಿಯನ್ನು ದೂಷಿಸುತ್ತಿರುವುದು ನಡೆಯುತ್ತಿದೆ. ಅನ್ಯಧರ್ಮೀಯರು ಹಾಗೂ ಕೆಲವು ಎಡಪಂಥೀಯರು ನಮ್ಮ ಧರ್ಮವನ್ನು ಅಲುಗಾಡಿಸಲು ಹಾಗೂ ನಮ್ಮೆಲ್ಲರ ಭಾವನೆ ಭಕ್ತಿಯನ್ನು ಶ್ರದ್ಧೆಯನ್ನು ಅವಮಾನಿಸುತ್ತಿದ್ದಾರೆ. ಈ ಕುತಂತ್ರಿಗಳ ವಿರುದ್ಧ ಹಲವಾರು ಜನ ವಕೀಲ ಮಿತ್ರರು ಸ್ನೇಹಿತರು ಬಹಳ ದಿನಗಳಿಂದ ತಾಳ್ಮೆಯಿಂದ ನೋಡುತ್ತಲೇ ಬಂದಿದ್ದೇವೆ. ಆದರೂ ಕೂಡ ತಮ್ಮೆಲ್ಲರಿಗೂ ತಿಳಿದಿದೆ, ಧರ್ಮದ ರಕ್ಷಣೆ ಧರ್ಮದ ಉಳಿವಿಗಾಗಿ ನ್ಯಾಯವಾದಿಗಳ ನಡೆ ಬಹಳ ಮುಖ್ಯವಾಗಿದೆ. ಇಲ್ಲವಾದರೆ ಇತಿಹಾಸದುದ್ದಕ್ಕೂ ನಮ್ಮ ಧರ್ಮದ ಮೇಲೆ ದಾಳಿ ಮಾಡುತ್ತಲೇ ಬಂದಿರುವವರಿಗೆ ನಮ್ಮ ಶಾಂತಿ ನಮ್ಮ ತಾಳ್ಮೆ ಅರ್ಥವಾಗದೆ ಅವರ ದುರಹಂಕಾರ ಅಹಂಕಾರಗಳು ಹಾಗೂ ನಮ್ಮ ಮೇಲಿನ ದಾಳಿ ಅತಿ ಹೆಚ್ಚಾಗುತ್ತಿರುವುದರಿಂದ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಭಕ್ತಾದಿಗಳಾದ ನಾವುಗಳು ಪಕ್ಷಾತೀತವಾಗಿ ನ್ಯಾಯವಾದಿಗಳ ನಡೆ, ಧರ್ಮಸ್ಥಳದ ಕಡೆಗೆ ಎಂಬ ಧಾರ್ಮಿಕ ಭಾವನೆಯೊಂದಿಗೆ ನಮ್ಮ ಧರ್ಮದ ಉಳಿವಿಗಾಗಿ ನಮ್ಮ ಧರ್ಮದ ವಿಚಾರಕ್ಕೆ ಬಂದರೆ ನಾವು ಸಹಿಸಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ನೀಡುವ ಸಲುವಾಗಿ ಬರುವ ಶನಿವಾರ ಅಂದರೆ 23.08.2025 ರಂದು ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಧರ್ಮಸ್ಥಳಕ್ಕೆ ಕಾರಿನ ಮುಖಾಂತರ ಜಾಥಾ ಹೋಗುವ ಹಾಗೂ ಜಾಥಾವನ್ನು ಧರ್ಮಸ್ಥಳದ ಭಕ್ತಾದಿಗಳು ಮತ್ತು ಧರ್ಮರಕ್ಷಕರುಗಳಾದ ನ್ಯಾಯವಾದಿಗಳಾದ ನಾವು ತೀರ್ಮಾನಿಸಿದ್ದು ದಯವಿಟ್ಟು ತಾವೆಲ್ಲರೂ ಇದಕ್ಕೆ ಕೈಜೋಡಿಸಬೇಕಾಗಿ ಶಕ್ತಿ ತುಂಬಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇವೆ.

ಸ್ಥಳ ಪ್ರಾರಂಭ ಮಾಡುವ ಸಮಯ ಪ್ರತಿಯೊಂದನ್ನೂ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ನಮ್ಮ ನ್ಯಾಯವಾದಿಗಳಲ್ಲಿ ವಿನಂತಿ- ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ನಮ್ಮ ಜೊತೆ ಬರಲು ಬಯಸುವವರು ಹಾಗೂ ಮುಂದಾಳತ್ವ ತೆಗೆದುಕೊಳ್ಳಲು ಬಯಸುವಂತಹವರು, ನಿಸ್ವಾರ್ಥವಾಗಿ ಧರ್ಮದ ಉಳಿವಿಗಾಗಿ ಧರ್ಮಸ್ಥಳದ ಗೌರವಕ್ಕಾಗಿ ಭಕ್ತಿಯಿಂದ ಬೆಂಬಲ ನೀಡಿ ಬರಲು ಇಚ್ಚಿಸುವವರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 9620074661.

ಇದನ್ನೂ ಓದಿ: Dharmasthala Case: ಅನನ್ಯ ಭಟ್ ನಾಪತ್ತೆ ಕೇಸ್​​ಗೆ ಟ್ವಿಸ್ಟ್: ದೂರುದಾರೆ ಸುಜಾತಾ ಭಟ್​​​ಗೆ ಮಕ್ಕಳೇ ಇರಲಿಲ್ಲ

ಹರೀಶ್‌ ಕೇರ

View all posts by this author