ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dharwad News: ಧಾರವಾಡದಲ್ಲಿ ಹೃದಯಾಘಾತದಿಂದ 22 ವರ್ಷದ ಯುವಕ ಸಾವು!

ಧಾರವಾಡದ ಹಿರಿಯ ವಕೀಲರಾದ ಅನೂಪ್ ದೇಶಪಾಂಡೆ ಅವರ ಪುತ್ರ ಸಮರ್ಥ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಂದೆಯಂತೆಯೇ ಕಾನೂನು ಪದವಿ ಪಡೆದು ವಕೀಲ ವೃತ್ತಿಯಲ್ಲಿ ಮುಂದುವರಿಯುವ ಕನಸು ಕಂಡಿದ್ದರು. ಮಗನ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಧಾರವಾಡ: ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲೂ ಹೃದಯಾಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಧಾರವಾಡದಲ್ಲಿ (Dharwad) ಎಲ್‌ಎಲ್‌ಬಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಸಮರ್ಥ್ ದೇಶಪಾಂಡೆ (22) ಎಂದು ಗುರುತಿಸಲಾಗಿದೆ. ಧಾರವಾಡದ ಹಿರಿಯ ವಕೀಲರಾದ ಅನೂಪ್ ದೇಶಪಾಂಡೆ ಅವರ ಪುತ್ರ ಸಮರ್ಥ್, ತಂದೆಯಂತೆಯೇ ಕಾನೂನು ಪದವಿ ಪಡೆದು ವಕೀಲ ವೃತ್ತಿಯಲ್ಲಿ ಮುಂದುವರಿಯುವ ಕನಸು ಕಂಡಿದ್ದರು. ಆದರೆ, ಎಲ್‌ಎಲ್‌ಬಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗಲೇ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

ಮೃತ ಸಮರ್ಥ್ ಅವರ ತಂದೆ ಅನೂಪ್ ದೇಶಪಾಂಡೆ ಅವರು ಸಹಕಾರಿ ಸಂಘಗಳ ಪ್ರಕರಣಗಳನ್ನು ನಡೆಸುವ ಮೂಲಕ ನಗರದಲ್ಲಿ ಚಿರಪರಿಚಿತರಾಗಿದ್ದಾರೆ. ಮಗನ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮೃತ ಸಮರ್ಥ್ ಅವರ ಅಂತ್ಯಕ್ರಿಯೆ ಇಂದು ಧಾರವಾಡದ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.