ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಮೀರ್ ಮುಲ್ಲಾ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಚಿತ್ರಗಳು; ಗರ್ಭನಿರೋಧಕ ಮಾತ್ರೆ, ಸ್ಕ್ಯಾನಿಂಗ್‌ ರಿಪೋರ್ಟ್‌ ಫೋಟೊಸ್‌!

Hubballi love jihad Case: ಹುಬ್ಬಳ್ಳಿಯ ಯುವತಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಎದುರಿಸುತ್ತಿರುವ ಸಮೀರ್‌ ಮುಲ್ಲಾ ಬಗ್ಗೆ ಹಲವು ಸ್ಫೋಟಕ ಸಂಗತಿಗಳ ಬಯಲಾಗುತ್ತಿವೆ. ಈತ ಹಲವು ಹಡುಗಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಫೋನ್‌ನಲ್ಲಿ ಹಲವು ಯುವತಿಯರ ಫೋಟೊಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಸಮೀರ್‌ ಮುಲ್ಲಾ

ಹುಬ್ಬಳ್ಳಿ: ನಗರದ ಲವ್ ಜಿಹಾದ್ ಪ್ರಕರಣಕ್ಕೆ (Hubballi love jihad Case) ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಸಮೀರ್ ಮುಲ್ಲಾ (sameer mulla) ನೀಚ ಕೃತ್ಯಗಳು ಒಂದೊಂದಾಗೆ ಬಯಲಾಗುತ್ತಿವೆ. ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಮಾಡಿದ್ದ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಳು. ಇದರ ಬೆನ್ನಲ್ಲೇ ಸಮೀರ್ ಮುಲ್ಲಾ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಫೋಟೊಗಳು, ಗರ್ಭ ನಿರೋಧಕ ಮಾತ್ರೆಗಳ ಫೋಟೊ, ಸ್ಕ್ಯಾನಿಂಗ್ ರಿಪೋರ್ಟ್ ಕೂಡ ಪತ್ತೆಯಾಗಿದೆ.

ಹುಬ್ಬಳ್ಳಿ ನಗರದ ವಿಜಯನಗರ ನಿವಾಸಿ ಸಮೀರ್ ಮುಲ್ಲಾ ಮತ್ತು ಹಿಂದೂ ಯುವತಿಗೆ ಜಿಮ್‌ನಲ್ಲಿ ಪರಿಚಯವಾಗಿತ್ತು. ಬಳಿಕ ಸಮೀರ್ ಯುವತಿಯೊಂದಿಗೆ ಸಲುಗೆ ಬೆಳೆಸಿದ್ದಾನೆ. ನಂತರ ಆಕೆಯನ್ನು ಮನೆಗೆ ಕರೆಸಿಕೊಂಡು ಜ್ಯೂಸ್​​ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಯುವತಿ ವಿಡಿಯೊ ಮೂಲಕ ಹೇಳಿಕೆ ನೀಡಿದ್ದಾಳೆ.

ಅತ್ಯಾಚಾರ ನಡೆಸಿದ ಕೆಲ ದಿನ ನಂತರ ಯುವತಿ ಜತೆ ಖಾಸಗಿಯಾಗಿ ಕಳೆದ ಕ್ಷಣಗಳಿದ್ದ ವಿಡಿಯೊ ತೋರಿಸಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ನೆನ್ನೆ ಯುವತಿ ಮನೆಯವರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಗೊತ್ತಾಗಿದ್ದು, ಬಳಿಕ ದೊಡ್ಡ ಹೈಡ್ರಾಮಾ ನಡೆದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಕಾರ್ಯಕರ್ತರು, ಹೋಗಿ ಸಮೀರ್‌ನನ್ನು ಥಳಿಸಿ, ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಇದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ಮಾಡಿದ್ದಾನೆ: ಸಮೀರ್‌ ಮುಲ್ಲಾ ವಿರುದ್ಧ ಸಂತ್ರಸ್ತ ಯುವತಿ ಆರೋಪ!

ಮತ್ತೊಂದೆಡೆ ಸಮೀರ್ ಮುಲ್ಲಾನನ್ನು ಯುವತಿ ಮನೆಯವರೇ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಆತನ ಕಡೆಯವರು, ಯುವತಿ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದಾರೆ. ಇನ್ನು ಇದಾದ ನಂತರ ಹಳೆ ಹುಬ್ಬಳ್ಳಿ ಠಾಣೆ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದವರು, ಪ್ರತಿಭಟನೆ ನಡೆಸಿದ್ದು, ಸಮೀರ್‌ ಮುಲ್ಲಾ ಬಂಧನಕ್ಕೆ ಒತ್ತಾಯಿಸಿದ್ದಾರೆ.