ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prathap Simha: ಬಾನು ಮೇಡಂ ಸೀರೆಯುಟ್ಟು, ಹಣೆಗೆ ಕುಂಕುಮ, ಮಲ್ಲಿಗೆ ಹೂವು ಮುಡಿದು ದಸರಾಗೆ ಬರೋದಾದ್ರೆ ಬನ್ನಿ: ಪ್ರತಾಪ್‌ ಸಿಂಹ

Mysuru Dasara: ಹುಬ್ಬಳ್ಳಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರಿಗೆ ಆಹ್ವಾನ ನೀಡಲಾಗಿದೆ. ಅವರ ಮೇಲೆ ನಮಗೆಲ್ಲ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆಯ ಮುಕುಟವಾಗಿರುವ ದಸರಾ ಉದ್ಘಾಟನೆಯನ್ನು ಅವರ ಕೈಯ್ಯಲ್ಲಿ ಮಾಡಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.

ಸೀರೆಯುಟ್ಟು, ಹಣೆಗೆ ಕುಂಕುಮ, ಮಲ್ಲಿಗೆ ಹೂವು ಮುಡಿದು ದಸರಾಗೆ ಬನ್ನಿ

-

Prabhakara R Prabhakara R Aug 30, 2025 8:48 PM

ಹುಬ್ಬಳ್ಳಿ: ಬಾನು ಮುಷ್ತಾಕ್ ಅವರೇ, ನಿಮ್ಮನ್ನು ಅಲ್ಲಾನೇ ಮಸೀದಿ ಒಳಗೆ ಬಿಟ್ಟಿಲ್ಲ. ಇನ್ನು ಅರಿಶಿಣ ಕುಂಕುಮ ಇಟ್ಟ ತಾಯಿ ಚಾಮುಂಡೇಶ್ವರಿ ನಿಮ್ಮನ್ನು ಕರೆಸಿಕೊಳ್ತಾಳಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ಮಾತನಾಡಿರುವ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರಿಗೆ ಆಹ್ವಾನ ನೀಡಲಾಗಿದೆ. ಅವರ ಮೇಲೆ ನಮಗೆಲ್ಲ ಗೌರವ ಇದೆ. ಆದರೆ ಹಿಂದೂ ಧಾರ್ಮಿಕ ಶ್ರೇಷ್ಠ ಭಾವನೆಯ ಮುಕುಟವಾಗಿರುವ ದಸರಾ ಉದ್ಘಾಟನೆಯನ್ನು ಅವರ ಕೈಯ್ಯಲ್ಲಿ ಮಾಡಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.

ಬಾನು ಮುಷ್ತಾಕ್ ಮೇಡಂ, ನಿಮ್ಮ ಮುಸಲ್ಮಾನ ಬಾಂಧವರು ಇಫ್ತಾರ್ ಕೂಟಕ್ಕೆ ಬಂದ ಹಿಂದೂಗಳಿಗೆಲ್ಲ ಜಗಿಯಲು ಮೂಳೆ ಕೊಡುವ ಮೊದಲು ತಲೆಗೆ ಟೋಪಿ ಹಾಕುತ್ತೀರಲ್ಲವೇ? ಕೈಗಳನ್ನು ಬೊಗಸೆ ಮಾಡಿ ಮಂಡಿಯೂರಿಸುತ್ತೀರಲ್ಲವೇ? ನಮ್ಮ ಚಾಮುಂಡಿ ಬೆಟ್ಟಕ್ಕೆ ಬರೋದಾದ್ರೆ, ನೀವೂ ಸೀರೆಯುಟ್ಟು, ಹಣೆಗೆ ಕುಂಕುಮವಿಟ್ಟು, ಮಲ್ಲಿಗೆ ಹೂವು ಮುಡಿದು ಬನ್ನಿ ಮೇಡಂ ಎಂದು ಆಗ್ರಹಿಸಿದ್ದಾರೆ.



ಬಾನು ಮೇಡಂ, ಕೊಡಗಿನ ಬ್ರಹ್ಮಗಿರಿಯಲ್ಲಿ ಹುಟ್ಟುವ ನದಿಯನ್ನು ನಾವು ಕಾವೇರಿಯಾಗಿಸಿದ್ದೇವೆ! ಕಾವೇರಿಯಲ್ಲದೆ ನೇತ್ರಾವತಿ, ಶರಾವತಿ, ಹೇಮಾವತಿ, ಕಾಳಿ, ತುಂಗ, ಭದ್ರೆ ಎಲ್ಲ ನದಿಗಳೂ ದೇವಿ ಸ್ವರೂಪದಲ್ಲೇ ಇವೆ. ಅವುಗಳು ಹರಿಸುವ ನೀರು ನಿಮ್ಮ ಗಂಟಲೊಳಗೆ ಇಳಿಯುವುದಿಲ್ಲವೇ ಮೇಡಂ? ಎಂದು ಪ್ರಶ್ನಿಸಿದ್ದಾರೆ.



ನನ್ನನ್ನು ಮತಾಂತರ ಮಾಡದೇ ಮೆಕ್ಕಾಗೆ ಕಳುಹಿಸುತ್ತೀರಾ?

ನಾವು ನೆಲ, ಜಲ, ಪರಿಸರದಲ್ಲಿ ದೇವರನ್ನು ಕಾಣುತ್ತೇವೆ. ಇದು ನಮ್ಮ ಧರ್ಮ. ಮರುಭೂಮಿಯ ಮರಳಿನಲ್ಲಿ ಹುಟ್ಟಿದ ಧರ್ಮ ನಮ್ಮದಲ್ಲ. ಬಾನು ಮುಷ್ತಾಕ್ ಅವರೇ ನಿಮಗೆ ನಮ್ಮ ಧರ್ಮದ ಹಬ್ಬವನ್ನು ಉದ್ಘಾಟನೆ ಮಾಡಲು ಮನಸ್ಸಾದ್ರೂ ಹೇಗೆ ಒಪ್ಪುತ್ತೆ? ವಿವಿಧತೆಯಲ್ಲಿ ಏಕತೆ ಬರೀ ಹಿಂದೂಗಳಲ್ಲಿ ಮಾತ್ರ. ಆದರೆ ಮುಸ್ಲಿಂ, ಕ್ರಿಶ್ಚಿಯನ್ನರಲ್ಲಿ ಇದು ಇಲ್ಲ. ನಾವು ಹೆಣ್ಣು ಮಕ್ಕಳಲ್ಲಿ ದೇವಿಯಲ್ಲಿ ಕಾಣುತ್ತೇವೆ. ನಿಮ್ಮ ಧರ್ಮದಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತೀರಾ. ನನ್ನನ್ನು ಮತಾಂತರ ಮಾಡದೇ, ಸುನ್ನತ್ ಮಾಡಿಕೊಳ್ಳದೆ ಬರೀ ಪ್ರವಾಸಿಗನಾಗಿ ಮೆಕ್ಕಾಗೆ ಕಳುಹಿಸಿಕೊಡ್ತೀರಾ? ಇಲ್ಲ ಎಂದಾದರೆ ನೀವು ಹೇಗೆ ನಮ್ಮ ಸಂಸ್ಕೃತಿಯನ್ನು ಪಾಲಿಸದೆ ದಸರಾ ಉದ್ಘಾಟನೆಗೆ ಬರ್ತಿರಾ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Banu Mushtaq: ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಟೀಕೆಗಳು ನಗಣ್ಯ: ಬಾನು ಮುಷ್ತಾಕ್‌