ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kodi Mutt Swamiji: ಮಲೆನಾಡು ಬಯಲುಸೀಮೆಯಾಗುತ್ತೆ, ಬಯಲುಸೀಮೆ ಮಲೆನಾಡಾಗುತ್ತೆ: ಕೋಡಿಮಠ ಶ್ರೀ ಭವಿಷ್ಯ

Kodi Mutt Swamiji: ಧಾರವಾಡದಲ್ಲಿ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ರಾಜ್ಯದ ಜಾತಿ ಸಮೀಕ್ಷೆ ಬಗ್ಗೆ ಮಾತನಾಡಿರುವ ಕೋಡಿಮಠ ಶ್ರೀಗಳು, ರಾಜ್ಯದ ಜನರು ದಡ್ಡರಲ್ಲ, ಬಹಳ ಬುದ್ಧಿವಂತರಿದ್ದಾರೆ, ಜ್ಞಾನಿಗಳಿದ್ದಾರೆ, ತಿಳಿವಳಿಕೆಯುಳ್ಳವರಿದ್ದಾರೆ. ಜನರಿಗೆ ಯಾವುದು ಬೇಕೋ ಅದನ್ನು ಅವರೇ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಮಲೆನಾಡು ಬಯಲುಸೀಮೆಯಾಗುತ್ತೆ, ಬಯಲುಸೀಮೆ ಮಲೆನಾಡಾಗುತ್ತೆ!

-

Prabhakara R Prabhakara R Oct 1, 2025 9:21 PM

ಧಾರವಾಡ: ರಾಜ್ಯ, ದೇಶದ ಬೆಳವಣಿಗೆಗಳ ಬಗ್ಗ ಆಗಾಗ್ಗೆ ಕುತೂಹಲಕಾರಿ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳು ಇದೀಗ ಮತ್ತೊಂದು ಶಾಕಿಂಗ್‌ ಭವಿಷ್ಯ ನುಡಿದಿದ್ದಾರೆ. ಧಾರವಾಡದಲ್ಲಿ ದಸರಾ ಹಬ್ಬದ (Kodi Mutt Swamiji) ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ಚಾಲನೆ ಬಳಿಕ ಮಾಧ್ಯಮಗಳೊಂದಿಗೆ ಸ್ವಾಮೀಜಿ ಮಾತನಾಡಿದ್ದು, ಮಲೆನಾಡು ಬಯಲುಸೀಮೆಯಂತಾಗುತ್ತದೆ, ಬಯಲುಸೀಮೆ ಮಲೆನಾಡಿನಂತಾಗಿದೆ ಎಂದು ಭವಿಷ್ಯ ಹೇಳಿದ್ದಾರೆ.

ದಸರಾ ಬಗ್ಗೆ ಮಾತನಾಡಿರುವ ಅವರು, ದೇಶಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದಸರಾದ ನಿಜವಾದ ಅರ್ಥವೆಂದರೆ ದುಷ್ಟ ಶಕ್ತಿಗಳನ್ನು ದೂರವಿಡುವುದು, ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವುದು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಈ ದೃಷ್ಟಿಯಿಂದ ದಸರಾವನ್ನು ಆಚರಿಸಲಾಗುತ್ತದೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತ ಎಂದು ತಿಳಿಸಿದರು.

ಇನ್ನು ರಾಜ್ಯದ ರಾಜಕೀಯದ ಬಗ್ಗೆಯೂ ಭವಿಷ್ಯ ನುಡಿದಿರುವ ಶ್ರೀಗಳು, ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಇಲ್ಲ. ಉಳಿದದ್ದನ್ನು ಸಂಕ್ರಾಂತಿಯ ನಂತರ ನೋಡಿ ಹೇಳಬೇಕು ಎಂದರು. ಈ ಹಿಂದೆ ತಾವು ಭವಿಷ್ಯ ನುಡಿದಂತೆ ಬಯಲುಸೀಮೆಯಲ್ಲಿ ಮಳೆಯಾಗಿದೆ. ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಬಯಲು ಸೀಮೆ ಮಲೆನಾಡು ಮಳೆ ಎಂದು ಹೇಳಿದ್ದೆ. ಮಲೆನಾಡು ಬಯಲು ಸೀಮೆ ಆಗುತ್ತೆ ಎಂದಿದ್ದೆ. ನಮ್ಮಲ್ಲೀಗ ಬಯಲು ಸೀಮೆ ಮಲೆನಾಡು ಆಗಿದೆ ಎಂದರು.

ಈ ಸುದ್ದಿಯನ್ನೂ ಓದಿ | Mysuru Dasara 2025: ನಾಳೆ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ; ಎಷ್ಟೊತ್ತಿಗೆ ಆರಂಭ?

ರಾಜ್ಯದ ಜಾತಿ ಸಮೀಕ್ಷೆ ಬಗ್ಗೆ ಮಾತನಾಡಿದ ಕೋಡಿಮಠ ಶ್ರೀಗಳು ರಾಜ್ಯದ ಜನರು ದಡ್ಡರಲ್ಲ, ಬಹಳ ಬುದ್ಧಿವಂತರಿದ್ದಾರೆ, ಜ್ಞಾನಿಗಳಿದ್ದಾರೆ, ತಿಳಿವಳಿಕೆಯುಳ್ಳವರಿದ್ದಾರೆ. ಜನರಿಗೆ ಯಾವುದು ಬೇಕೋ ಅದನ್ನು ಅವರೇ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗಿಲತೇ ಪರಾಕ್: ದೇವರಗುಡ್ಡದ ಕಾರ್ಣಿಕ

ಹಾವೇರಿ: ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗಿಲತೇ ಪರಾಕ್ ಎಂಬುದಾಗಿ ಸುಕ್ಷೇತ್ರ ದೇವರಗುಡ್ಡದಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಈ ವರ್ಷ ಮಳೆ, ಬೆಳೆ ಸಮೃದ್ಧಿಯಾಗಿ ಆಗಲಿದೆ ಎಂದು ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಲಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಭವಿಷ್ಯವಾಣಿ ನುಡಿಯಲಾಗಿದೆ. ಪ್ರಸ್ತುತ ವರ್ಷದ ದೈವವಾಣಿ ನುಡಿಯನ್ನು ನಾಗಪ್ಪ ಉರ್ಮಿ ಗೊರವಯ್ಯ ನುಡಿದಿದ್ದಾರೆ. 10 ಅಡಿ ಎತ್ತರದ ಬಿಲ್ಲನೇರಿ ಕಾರ್ಣಿಕ ನುಡಿಯನ್ನು ಗೊರವಯ್ಯ ಸ್ವಾಮಿ ನುಡಿದಿದ್ದಾರೆ.

ಗೊರವಯ್ಯನವರ ಈ ದೈವವಾಣಿಯನ್ನು ಕ್ಷೇತ್ರದ ವಿದ್ವಾಂಸರು ಮತ್ತು ಭಕ್ತರು ವಿಶ್ಲೇಷಿಸಿದ್ದು, ಇದು ನಾಡಿನಾದ್ಯಂತ ಸಮೃದ್ಧಿಯ ಸೂಚನೆಯಾಗಿದೆ ಎಂದು ತಿಳಿಸಿದ್ದಾರೆ.