ಧಾರವಾಡ: ನಗರದಲ್ಲಿ ಸಿಲಿಂಡರ್ ಸ್ಫೋಟದಿಂದ ಮನೆಯೊಂದು ಸಂಪೂರ್ಣವಾಗಿ ಛಿದ್ರ ಛಿದ್ರವಾಗಿದೆ. ಧಾರವಾಡದ ಜನ್ನತ್ ನಗರದಲ್ಲಿ ಮಂಗಳವಾರ ಈ ಘಟನೆ (Dharwad Cylinder Blast) ನಡೆದಿದ್ದು, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಾ ಸಾಬ್ ಎನ್ನುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಪೋಟದ ತೀವ್ರತೆಗೆ ರಾಜಾಸಾಬ್ ಮನೆ ಛಿದ್ರ ಛಿದ್ರವಾಗಿದೆ. ರಾಜಾ ಸಾಬ್‌ಗೆ ಗಂಭೀರವಾದ ಗಾಯಗಳಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಲ್‌ಪಿಜಿ ಸಿಲಿಂಡರ್‌ಗೆ ಅಳವಡಿಸಿದ್ದ ಪೈಪ್ ತುಂಡಾಗಿ ಮನೆಯೊಳಗೆ ಅನಿಲ ಸೋರಿಕೆಯಾಗಿದೆ. ರಾಜಸಾಬ್ ಅವರು ಟಿ.ವಿ ಆನ್ ಮಾಡಿದಾಗ ಬೆಂಕಿಹೊತ್ತಿಕೊಂಡಿದೆ. ಅವರ ದೇಹ ಶೇ 80ರಷ್ಟು ಸುಟ್ಟಿದೆ' ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆ ಮೇಲೆ ಟ್ರಕ್ ಹರಿದು ಕಟ್ಟಡ ಕಾರ್ಮಿಕ ಸಾವು
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ತಲೆಯ ಮೇಲೆ ಟ್ರಕ್ ಹರಿದು ಕಟ್ಟಡ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಬಿಹಾರದ ಮೂಲದ ಬಾಬುಜೀ ಮಿಯಾ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮೃತ ಬಾಬುಜೀ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇಂದು ಕೆಲಸಕ್ಕಾಗಿ ಉತ್ತರಳ್ಳಿಯಿಂದ ಸರ್ಜಾಪುರದ ಕಡೆಗೆ ಹೋಗುತ್ತಿದ್ದಾಗ ಎಲೆಕ್ಟ್ರಾನಿಕ್ ಸಿಟಿ ನೈಸ್ ಟೋಲ್ ಬಳಿ ಅಪಘಾತ ಸಂಭವಿಸಿದೆ. ಇನ್ನು ಘಟನೆ ನಂತರ ಅಪಘಾತ ಎಸಗಿದ ಚಾಲಕ ಟ್ರಕ್ ಸಮೇತ ಎಸ್ಕೇಪ್ ಆಗಿದ್ದಾನೆ.
ಗಾಳಿಪಟ ಹಾರಿಸುತ್ತಾ ಚರಂಡಿಗೆ ಬಿದ್ದ ಬಾಲಕ; 4 ದಿನಗಳ ಬಳಿಕ ಮೃತದೇಹ ಪತ್ತೆ!
ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತ ದೇಹವನ್ನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.