Digital Arrest: ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್; ದೈಹಿಕ ಪರೀಕ್ಷೆ ನೆಪದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿದ ನಕಲಿ ಪೊಲೀಸರು!
Digital Arrest: ಇತ್ತೀಚೆಗೆ ಬೆಂಗಳೂರಿನಲ್ಲಿ ವೃದ್ಧ ದಂಪತಿಯ ಡಿಜಿಟಲ್ ಅರೆಸ್ಟ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ಈ ಕುರಿತು ಈಸ್ಟ್ ಸಿಇಎನ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.


ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರ ಡಿಜಿಟಲ್ ಅರೆಸ್ಟ್ ನಡೆದಿದ್ದು, ದೈಹಿಕ ಪರೀಕ್ಷೆ ನೆಪದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳ್ಳುವಂತೆ ನಕಲಿ ಪೊಲೀಸರು ಒತ್ತಾಯಿಸಿದ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ವೃದ್ಧ ದಂಪತಿಯ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ಈ ಕುರಿತು ಈಸ್ಟ್ ಸಿಇಎನ್ ಕ್ರೈಮ್ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಬಾಲ್ಯದ ಸ್ನೇಹಿತರಾದ ಈ ಮಹಿಳೆಯರು, ಸೈಬರ್ ಅಪರಾಧಿಗಳಿಂದ ಸುಮಾರು 9 ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಲ್ಪಟ್ಟಿದ್ದು, ನಂತರ ಮತ್ತೊಬ್ಬ ಸ್ನೇಹಿತನನ್ನು ಸಂಪರ್ಕಿಸಿದಾಗ ತಾವು ಆನ್‌ಲೈನ್ ವಂಚನೆ ಮತ್ತು ಸುಲಿಗೆಗೆ ಬಲಿಯಾಗಿದ್ದೇವೆ ಎಂದು ಅರಿತುಕೊಂಡಿದ್ದಾರೆ. ಏನಿದು ಪ್ರಕರಣ?
ಥೈಲ್ಯಾಂಡ್‌ನಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿರುವ ಮಹಿಳೆ ತನ್ನ ಸ್ನೇಹಿತೆಯನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಇಬ್ಬರೂ ವಂಚನೆಯ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಜುಲೈ 17 ರಂದು ಬೆಳಗ್ಗೆ ರಿಚಾಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರೊಂದಿಗೆ ನೀವು ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿದ್ದಾನೆ. ನೀವು ಮಾನವ ಕಳ್ಳಸಾಗಣೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿಯೂ ಆರೋಪಿಸಿ ಹೆದರಿಸಿದ್ದಾನೆ.
ಇದರಿಂದ ಆಘಾತಕ್ಕೊಳಗಾದ ರಿಚಾ, ತಾನು ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಈ ಪ್ರಕರಣಕ್ಕೂ ತನಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಕರೆ ಮಾಡಿದ ವ್ಯಕ್ತಿ ತಾನು ಬಳಸುತ್ತಿದ್ದ ಡೆಬಿಟ್ ಕಾರ್ಡ್ ವಿವರಗಳನ್ನು ಹಂಚಿಕೊಂಡು ಆಕೆಯನ್ನು ಬಂಧಿಸುವುದಾಗಿ ಹೆದರಿಸಿದ್ದಾನೆ.
ಅಲ್ಲದೆ ನಕಲಿ ಬಂಧನ ವಾರಂಟ್ ಮತ್ತು ಕೇಂದ್ರ ತನಿಖಾ ದಳದ ಗುರುತಿನ ಚೀಟಿ ಸೇರಿ ಅಧಿಕೃತವಾಗಿ ಕಾಣುವ ದಾಖಲೆಗಳನ್ನು ತೋರಿಸಿದ್ದರಿಂದ, ಭಯಭೀತರಾದ ಮಹಿಳೆಯರು, ಪೊಲೀಸ್ ಠಾಣೆಯಿಂದ ಕರೆ ಬಂದಿದೆ ಎಂದು ನಂಬಿದ, ರಿಚಾ ತನ್ನ ಬ್ಯಾಂಕ್ ಖಾತೆಯಿಂದ 58,447 ರೂ.ಗಳನ್ನು ವಂಚಕರಿಗೆ ವರ್ಗಾಯಿಸಿದ್ದಾರೆ.
ಆನ್‌ಲೈನ್ ವೈದ್ಯಕೀಯ ಪರೀಕ್ಷೆ
ಹಣವನ್ನು ಪಡೆದ ನಂತರ, ವಂಚಕರು ಸಂತ್ರಸ್ತರಿಗೆ ಕ್ಲಿಯರೆನ್ಸ್ ಪಡೆಯಬೇಕು ಎಂದು ಹೇಳಿದರು. ಇದಕ್ಕಾಗಿ ಅವರು ಆನ್‌ಲೈನ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಮಹಿಳೆಯರನ್ನು ವಿವಸ್ತ್ರವಾಗುವಂತೆ ಸೂಚನೆ ನೀಡಿದ್ದು, ಅದರಂತೆ ಇಬ್ಬರೂ ಮಹಿಳೆಯರು ಕ್ಯಾಮರಾ ಮುಂದೆ ವಿವಸ್ತ್ರರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ಅನೈತಿಕ ಸಂಬಂಧದಿಂದ ಕೊಲೆ, ಕಾಂಗ್ರೆಸ್ ಶಾಸಕರ ಚಾಲಕನ ಬಂಧನ
ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ವಿಭಾಗಗಳು ಮತ್ತು ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318 (ವಂಚನೆ) ಅಡಿಯಲ್ಲಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತುದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.