ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಾ‌. ಪ್ರದೀಪ್‌ ಕೆಂಚನೂರುಗೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಮುಂಬೈನಲ್ಲಿ ನಡೆದ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಕಿರುಚಿತ್ರ 'ದಿ ಹಗ್ ಆಫ್ ಎಂಪಿನೆಸ್' (ಖಾಲಿತನದ ಅಪ್ಪುಗೆ) ರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಚಿತ್ರದ ನಿರ್ದೇಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಪ್ರೀ ಪ್ರೆಸ್ತಿ ಅಂತಾರಾಷ್ಟ್ರೀಯ ಕ್ರಿಟಿಕ್ ಅಸೋಸಿಯೇಷನ್ ನೀಡುವ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.

ಡಾ‌. ಪ್ರದೀಪ್‌ ಕೆಂಚನೂರುಗೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಡುಪಿ, ಜೂ.25: ಮುಂಬೈನಲ್ಲಿ ನಡೆದ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಕಿರುಚಿತ್ರ 'ದಿ ಹಗ್ ಆಫ್ ಎಂಪ್ಟಿನೆಸ್' (ಖಾಲಿತನದ ಅಪ್ಪುಗೆ) ರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಚಿತ್ರದ ನಿರ್ದೇಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಪ್ರೀ ಪ್ರೆಸ್ತಿ ಅಂತಾರಾಷ್ಟ್ರೀಯ ಕ್ರಿಟಿಕ್ ಅಸೋಸಿಯೇಷನ್ ನೀಡುವ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.

ಭಾರತೀಯ ಫಿಲ್ಮ್‌ ಸೊಸೈಟಿಗಳ ಒಕ್ಕೂಟದ ಉಪಾಧ್ಯಕ್ಷ ಪ್ರೇಮೇಂದ್ರ ಮಜುಂದಾ‌ರ್ ಅವರು ಕನ್ನಡದ ಕಿರುಚಿತ್ರ 'ದಿ ಹಗ್ ಆಫ್ ಎಂಪಿನೆಸ್' (ಖಾಲಿತನದ ಅಪ್ಪುಗೆ) ಚಿತ್ರದ ನಿರ್ದೇಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಇತಿಹಾಸ ಪ್ರಾಧ್ಯಾಪಕ ರಾಗಿರುವ ಡಾ. ಪ್ರದೀಪ್ ಕೆಂಚನೂರು ಅವರಿಗೆ ಇದು ಚೊಚ್ಚಲ ಚಿತ್ರವಾಗಿದ್ದು, ಮೊದಲ ಪ್ರಯತ್ನದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಎನ್‌ಜಿಒಗಳಿಗೆ ಬರೋಬ್ಬರಿ 24 ಕೋಟಿ ರೂ. ಅನುದಾನ; ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಎಚ್‌ಸಿಎಲ್ ಫೌಂಡೇಶನ್

ರಾಷ್ಟ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎನ್‌ಎಫ್‌ಡಿಸಿ ಸಂಯುಕ್ತವಾಗಿ ಆಯೋಜಿಸಿದ್ದ ಈ ಚಿತ್ರೋತ್ಸವದಲ್ಲಿ 48 ರಾಷ್ಟ್ರಗಳಿಂದ 903 ಚಿತ್ರಗಳು ಸ್ಪರ್ಧಿಸಿದ್ದವು. ಡಾ. ಪ್ರದೀಪ್ ಅವರು ಉಡುಪಿಯ ಕುಂದಾಪುರ ತಾಲೂಕಿನ ಕೆಂಚನೂರಿ‌ನ ಬಗ್ವಾಡಿಮನೆಯವರು.