ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Driving Licence: ವಾಹನ ಸವಾರರಿಗೆ ಗುಡ್‌ ನ್ಯೂಸ್‌, ಅವಧಿ ಮುಗಿದರೂ 30 ದಿನ ಡಿಎಲ್‌ ಮಾನ್ಯ

ಈ ಹಿಂದೆ 2019ರ ತಿದ್ದುಪಡಿಯಲ್ಲಿ ರದ್ದುಗೊಳಿಸಲಾಗಿದ್ದ 30 ದಿನಗಳ ಕಾಲಾವಕಾಶವನ್ನು ಈಗ ಮತ್ತೆ ಜಾರಿಗೆ ತರಲಾಗಿದೆ. ಇದರಿಂದ ಡಿಎಲ್ ಅವಧಿ ಮುಗಿದ ಮೊದಲ 30 ದಿನಗಳಲ್ಲಿ ಅಪಘಾತ ಸಂಭವಿಸಿದರೂ ವಿಮೆ ಕ್ಲೇಮ್ ಮಾಡಲು ಅವಕಾಶ ಸಿಗಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಏ.1: ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಗೆ ಪ್ರಮುಖ ತಿದ್ದುಪಡಿ ತಂದಿದ್ದು, ಚಾಲನಾ ಪರವಾನಗಿ (Driving License – DL) ಅವಧಿ ಮುಗಿದ ನಂತರವೂ ಮುಂದಿನ 30 ದಿನಗಳವರೆಗೆ ಅದರ ಮಾನ್ಯತೆ ಮುಂದುವರಿಯಲಿದೆ. ಈ ಬದಲಾವಣೆಯು ವಿಮೆ ಕ್ಲೇಮ್ ಮಾಡುವ ಪ್ರಕ್ರಿಯೆಯನ್ನು ಸವಾರರಿಗೆ ಸುಲಭಗೊಳಿಸಲಿದೆ.

30 ದಿನಗಳ ಗ್ರೇಸ್ ಅವಧಿ: ಈ ಹಿಂದೆ 2019ರ ತಿದ್ದುಪಡಿಯಲ್ಲಿ ರದ್ದುಗೊಳಿಸಲಾಗಿದ್ದ 30 ದಿನಗಳ ಕಾಲಾವಕಾಶವನ್ನು ಈಗ ಮತ್ತೆ ಜಾರಿಗೆ ತರಲಾಗಿದೆ. ಇದರಿಂದ ಡಿಎಲ್ ಅವಧಿ ಮುಗಿದ ಮೊದಲ 30 ದಿನಗಳಲ್ಲಿ ಅಪಘಾತ ಸಂಭವಿಸಿದರೂ ವಿಮೆ ಕ್ಲೇಮ್ ಮಾಡಲು ಅವಕಾಶ ಸಿಗಲಿದೆ. ‌

ಅರ್ಜಿ ಸಲ್ಲಿಸಿದ ದಿನದಿಂದಲೇ ನವೀಕರಣ: ಡಿಎಲ್ ಎಕ್ಸ್‌ಪೈರಿ ದಿನಾಂಕದ ಬದಲಾಗಿ, ಅರ್ಜಿದಾರರು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಡಿಎಲ್ ಹೊಸ ಅವಧಿಗೆ ಚಾಲ್ತಿಗೆ ಬರಲಿದೆ.

ಆರ್‌ಟಿಒ ವ್ಯಾಪ್ತಿ ಸಡಿಲಿಕೆ: ಸವಾರರು ತಮ್ಮ ನಿರ್ದಿಷ್ಟ ಕಚೇರಿ ವ್ಯಾಪ್ತಿಯಲ್ಲಷ್ಟೇ ಅಲ್ಲದೆ, ರಾಜ್ಯದ ಯಾವುದೇ ಆರ್‌ಟಿಒ ಕಚೇರಿಯಲ್ಲಾದರೂ ವಾಹನ ನೋಂದಣಿ ಅಥವಾ ಪರವಾನಗಿ ಕೆಲಸಗಳನ್ನು ಮಾಡಿಸಿಕೊಳ್ಳಬಹುದು.

ಮಾಲೀಕತ್ವ ವರ್ಗಾವಣೆ: ವಾಹನ ಮಾಲೀಕತ್ವ ಬದಲಾವಣೆಯ ಸಂದರ್ಭದಲ್ಲಿ ವಿಮಾ ಸಂಸ್ಥೆಗೆ ಮಾಹಿತಿ ನೀಡುವ ಅವಧಿಯನ್ನು 14 ದಿನಗಳಿಂದ 30 ದಿನಗಳಿಗೆ ಹೆಚ್ಚಿಸಲಾಗಿದೆ.

Bengaluru Traffic Police: ವಾಹನ ಸವಾರರ ಗಮನಕ್ಕೆ; ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದ್ರೆ ಡಿಎಲ್‌ ಅಮಾನತು!

ದಂಡ ಮತ್ತು ಕಠಿಣ ನಿಯಮಗಳು:

ಹೊಸ ನಿಯಮಗಳು ಸೌಲಭ್ಯಗಳ ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಠಿಣ ದಂಡನೆಯನ್ನೂ ವಿಧಿಸಿವೆ:

ಗದ್ದಲಕ್ಕೆ ಭಾರಿ ದಂಡ: ವಾಹನಗಳಿಂದ ಕರ್ಕಶ ಶಬ್ದ ಉಂಟುಮಾಡಿದರೆ ಮೊದಲ ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿ ಅದೇ ತಪ್ಪು ಮರುಕಳಿಸಿದರೆ ₹10,000 ದಂಡ ವಿಧಿಸಲಾಗುತ್ತದೆ.

ರಸ್ತೆ ಸುರಕ್ಷತೆ ಮತ್ತು ಮಾಲಿನ್ಯ: ರಸ್ತೆ ಸುರಕ್ಷತೆಗೆ ಭಂಗ ತಂದರೆ ಅಥವಾ ವಾಯು ಮಾಲಿನ್ಯ ಉಂಟುಮಾಡಿದರೆ ಮೊದಲ ಉಲ್ಲಂಘನೆಗೆ ₹10,000 ದಂಡ ಮತ್ತು 3 ತಿಂಗಳ ಕಾಲ ಪರವಾನಗಿ ಅಮಾನತುಗೊಳಿಸಲಾಗುತ್ತದೆ. ಎರಡನೇ ಬಾರಿ ತಪ್ಪು ಮಾಡಿದರೆ 6 ತಿಂಗಳ ಜೈಲು ಶಿಕ್ಷೆ ಅಥವಾ ₹10,000 ದಂಡ ವಿಧಿಸಲು ಅವಕಾಶವಿದೆ.

ಅಪಘಾತ ಮತ್ತು ಹಾನಿ: ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ದೋಷವಿದ್ದು, ಅದರಿಂದ ಅಪಘಾತ ಸಂಭವಿಸಿ ದೈಹಿಕ ಗಾಯ ಅಥವಾ ಆಸ್ತಿ ಹಾನಿಯಾದರೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹5,000 ದಿಂದ ₹10,000 ವರೆಗೆ ದಂಡ ವಿಧಿಸಲಾಗುತ್ತದೆ.

ಗಮನಿಸಿ: 30 ದಿನಗಳ ಗ್ರೇಸ್ ಅವಧಿಯು ವಿಮೆಯ ಹಣ ಪಡೆಯಲು ಸಹಕಾರಿಯಾಗಿದ್ದರೂ, ನಿಗದಿತ ಅವಧಿಯೊಳಗೆ ವಿಮಾ ಪ್ರಮಾಣಪತ್ರ ನವೀಕರಿಸದಿದ್ದರೆ ವಾಹನವನ್ನು ಭೌತಿಕವಾಗಿ ಪರಿಶೀಲಿಸಿದ ನಂತರವಷ್ಟೇ ಹೊಸ ವಿಮೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹರೀಶ್‌ ಕೇರ

View all posts by this author