ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Drunk and Drive: ಕುಡಿದು ಬೆಂಗಳೂರಿನಿಂದ ಗೋವಾಗೆ ಬಸ್‌ ಚಲಾಯಿಸುತ್ತಿದ್ದ ಸೀಬರ್ಡ್‌ ಬಸ್‌ ಚಾಲಕ! ಪೊಲೀಸ್‌ ತಪಾಸಣೆ ವೇಳೆ ಪತ್ತೆ

Chitradurga Bus Accident: ಮದ್ಯಪಾನ ಮಾಡಿ ಬಸ್​ ಚಲಾಯಿಸುತ್ತಿದ್ದ ಸೀ ಬರ್ಡ್ ಚಾಲಕ ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಉಪ್ಪಾರಪೇಟೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ಚಾಲಕ ಸಿಕ್ಕಿಬಿದ್ದಿದ್ದು, ಆಲ್ಕೋಮೀಟರ್ ತಪಾಸಣೆ ವೇಳೆ ಕುಡಿದಿರೋದು ಬಯಲಾಗಿದೆ. ಕೂಡಲೇ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊನೆಗೆ ಬೇರೊಬ್ಬ ಡ್ರೈವರ್ ಕರೆಸಿ ಬಸ್​ ತೆಗೆದುಕೊಂಡು ಹೋಗುವಂತೆ ಪೊಲೀಸರು ತಿಳಿಸಿದರು. ಗೋವಾಗೆ ತೆರಳುತ್ತಿದ್ದ ಈ ಬಸ್​​ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು.

ಕುಡಿದು ಬಸ್‌ ಚಲಾಯಿಸುತ್ತಿದ್ದ ಚಾಲಕ

ಬೆಂಗಳೂರು, ಡಿ.27: ಚಿತ್ರದುರ್ಗದ ಹಿರಿಯೂರು ಬಳಿ ಸೀಬರ್ಡ್​​ ಸ್ಲೀಪರ್​​ ಬಸ್​ ಭೀಕರ ಅಪಘಾತ (Chitradurga Bus Accident) ಕಂಡು ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಈ ನಡುವೆ ಘಟನೆ ನಡೆದು 2 ದಿನಗಳು ಕಳೆಯುವ ಮುನ್ನವೇ ಅದೇ ಖಾಸಗಿ ಬಸ್​ ಸಂಸ್ಥೆಯ ಚಾಲಕನೊಬ್ಬ ಕುಡಿದು ಬೆಂಗಳೂರು- ಗೋವಾ (Bengaluru- Goa) ರಾತ್ರಿ ಬಸ್‌ ಚಲಾಯಿಸುತ್ತ (Drunk and Drive) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರ ತಪಾಸಣೆ (Police inspection) ವೇಳೆ ಸೀಬರ್ಡ್​ ಬಸ್​ ಚಾಲಕ ಸಿಕ್ಕಿಬಿದ್ದಿದ್ದು, ರಾತ್ರಿ ಬಸ್ ಪ್ರಯಾಣ ಮಾಡೋದು ಎಷ್ಟು ಸೇಫ್ ಎನ್ನುವ ಪ್ರಶ್ನೆ ಮೂಡಿದೆ.

ಮದ್ಯಪಾನ ಮಾಡಿ ಬಸ್​ ಚಲಾಯಿಸುತ್ತಿದ್ದ ಸೀ ಬರ್ಡ್ ಚಾಲಕ ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಪ್ರಯಾಣಿಕರಿದ್ದರೂ ಕುಡಿದು ಬಸ್ ಓಡಿಸ್ತಾ ಇದ್ದ ಚಾಲಕ ದಿವಾಕರ್ ಬೇಜವಾಬ್ದಾರಿ ವರ್ತನೆ ಕಂಡು ಪೊಲೀಸರು ಹಾಗೂ ಪ್ರಯಾಣಿಕರು ಕೂಡ ಸಿಟ್ಟಾಗಿದ್ದಾರೆ. ಬೆಂಗಳೂರಿನಿಂದ ಗೋವಾಗೆ ಹೋಗ್ತಾ ಇದ್ದ ಸೀ ಬರ್ಡ್ ಬಸ್​​ನಲ್ಲಿ ಚಾಲಕ ಕುಡಿದು ಬಸ್​​ ಚಲಾಯಿಸುತ್ತಿದ್ದ. ನಗರದಾದ್ಯಂತ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡ್ತಾ ಇದ್ದ ಪೊಲೀಸರು, ಬಸ್​ ನಿಲ್ಲಿಸಿ ಪರೀಕ್ಷೆ ನಡೆಸಿದ ವೇಳೆ ಚಾಲಕ ಕುಡಿದಿರೋದು ಪತ್ತೆಯಾಗಿದೆ.

ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಉಪ್ಪಾರಪೇಟೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ಚಾಲಕ ಸಿಕ್ಕಿಬಿದ್ದಿದ್ದು, ಆಲ್ಕೋಮೀಟರ್ ತಪಾಸಣೆ ವೇಳೆ ಕುಡಿದಿರೋದು ಬಯಲಾಗಿದೆ. ಕೂಡಲೇ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊನೆಗೆ ಬೇರೊಬ್ಬ ಡ್ರೈವರ್ ಕರೆಸಿ ಬಸ್​ ತೆಗೆದುಕೊಂಡು ಹೋಗುವಂತೆ ಪೊಲೀಸರು ತಿಳಿಸಿದರು. ಗೋವಾಗೆ ತೆರಳುತ್ತಿದ್ದ ಈ ಬಸ್​​ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು.

ಬಸ್‌ಗಳ ರಾತ್ರಿ ಪ್ರಯಾಣಕ್ಕೆ ವಿರಾಮ: ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಚಿಂತನೆ

ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಡ್ರಿಂಕ್ ಅಂಡ್ ಡ್ರೈವ್ ಚೆಕ್ಕಿಂಗ್ ಕಟ್ಟುನಿಟ್ಟಿನಿಂದ ಸಾಗಿದೆ. ನಗರದ 140 ಪಾಯಿಂಟ್‌ಗಳಲ್ಲಿ ಖಾಕಿ ತಪಾಸಣೆ ನಡೆಸುತ್ತಿದೆ. ತಪಾಸಣೆ ವೇಳೆ, ಕುಡಿದು ವಾಹನ ಓಡಿಸೋರಿಗೆ ಪೊಲೀಸರು ಶಾಕ್ ಕೊಟ್ಟಿದ್ದು, ತಡರಾತ್ರಿ ಸುಮಾರು 500ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ. ಕಳೆದ ಮೂರು ದಿನಗಳಲ್ಲಿ 1500ಕ್ಕೂ ಹೆಚ್ಚು ಕೇಸ್ ದಾಖಲು ಮಾಡಲಾಗಿದೆ. ಕುಡಿದು ವಾಹನ ಓಡಿಸುತ್ತಿದ್ದವರ ನೂರಾರು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಹರೀಶ್‌ ಕೇರ

View all posts by this author