ಗದಗ, ಮಾರ್ಚ್ 05: ತಡರಾತ್ರಿ ಭೀಕರ ಅಪಘಾತ (Road Accident) ಸಂಭವಿಸಿ ಇಬ್ಬರು ಸಾವನ್ನಪ್ಪಿರುವ (Death) ದುರಂತ ಘಟನೆ ನಡೆದಿದೆ. ಗದಗ (Gadag) ಜಿಲ್ಲೆಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಲವರಿಗೆ ಗಾಯಗಳಾಗಿವೆ. ಗದಗ ತಾಲೂಕಿನ ಹರ್ತಿ ಗ್ರಾಮದ ಬಳಿ ನಡೆದ ಈ ಅಪಘಾತದಲ್ಲಿ ಟಾಟಾ ಎಸಿ ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ಮೃತಪಟ್ಟವರು.
ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳಾದ ನಿಂಗಪ್ಪ ಯಳವತ್ತಿ (36) ಮತ್ತು ಮುತ್ತಪ್ಪ ಸತ್ತಿಗೇರಿ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಟಾಟಾ ಎಸಿ ವಾಹನದಲ್ಲಿ ಗ್ರಾಮದ ಮಂದಿಯೊಂದಿಗೆ ಪ್ರಯಾಣಿಸುತ್ತಿದ್ದರು. ಗ್ರಾಮದಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾ ನೋಡಲು ಎಲ್ಲರೂ ಒಟ್ಟಾಗಿ ತೆರಳಿದ್ದರು. ವಾಹನದಲ್ಲಿ ಒಟ್ಟು ಹತ್ತು ಮಂದಿ ಇದ್ದರು ಎಂದು ತಿಳಿದುಬಂದಿದೆ.
ನಿದ್ದೆ ಮಂಪರಿನಿಂದ ಅಪಘಾತ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಾತ್ರಿ ಸಮಯದಲ್ಲಿ ದೀರ್ಘ ಪ್ರಯಾಣ ಅಥವಾ ಕಾರ್ಯಕ್ರಮದ ನಂತರದ ಆಯಾಸದಿಂದ ಚಾಲಕನಿಗೆ ನಿದ್ದೆ ಬಂದಿರಬಹುದು. ವಾಹನವು ನಿಯಂತ್ರಣ ತಪ್ಪಿ ರಸ್ತೆಯಿಂದ ಹೊರಗೆ ಹೋಗಿ ಅಪಘಾತಕ್ಕೆ ತುತ್ತಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಿ; ಕೇಂದ್ರ ರೈಲ್ವೆ ಸಚಿವರಿಗೆ ಬೊಮ್ಮಾಯಿ ಮನವಿ
ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ನಂತರದ ದೃಶ್ಯಗಳು ಭಯಾನಕವಾಗಿದ್ದು, ವಾಹನದ ಭಾಗಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿದ್ದವು. ಈ ಘಟನೆಯು ರಾತ್ರಿ ಸಮಯದಲ್ಲಿ ವಾಹನ ಚಾಲನೆಯ ಅಪಾಯಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.