ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗದಗ ಜಿಲ್ಲೆಯ 56,787 ರೈತರಿಗೆ 14.19 ಕೋಟಿ ರೂ. ಬೆಳೆ ಹಾನಿ ಪರಿಹಾರ ಜಮೆ: ಡಿಸಿ ಸಿ.ಎನ್. ಶ್ರೀಧರ್

Gadag News: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಗದಗ ಜಿಲ್ಲೆಯಲ್ಲಿ ಬರಗಾಲದಿಂದ ಉಂಟಾದ ಬೆಳೆ ಹಾನಿಗೆ ಪ್ರಥಮ ಹಂತದಲ್ಲಿ 56,787 ರೈತರಿಗೆ 2,500 ಗಳಂತೆ ಒಟ್ಟು 14,19,67,500 ರೂ. ಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಆಗಿರುತ್ತದೆ ಎಂದು ಡಿಸಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.

ಗದಗ, ನ.26: 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಗದಗ ಜಿಲ್ಲೆಯಲ್ಲಿ‌ (Gadag News) ಬರಗಾಲದಿಂದ ಉಂಟಾದ ಬೆಳೆ ಹಾನಿಗೆ ಪ್ರಥಮ ಹಂತದಲ್ಲಿ 56,787 ರೈತರಿಗೆ 2,500 ರೂ. ಗಳಂತೆ ಒಟ್ಟು 14,19,67,500 ರೂ.ಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದ್ದಾರೆ.

ತಾಲೂಕುವಾರು ಬೆಳೆ ಪರಿಹಾರ ಜಮೆ ಮಾಡಲಾದ ರೈತರ ಸಂಖ್ಯೆ

ಗದಗ – 13859, ಗಜೇಂದ್ರಗಡ- 6514, ಲಕ್ಷ್ಮೇಶ್ವರ-5206, ಮುಂಡರಗಿ-5851, ನರಗುಂದ-7232, ರೋಣ-12222, ಶಿರಹಟ್ಟಿ-5903 ರೈತರ ಖಾತೆಗಳಿಗೆ 2,500 ಗಳಂತೆ ಜಮೆ ಮಾಡಲಾಗಿದೆ.

ಜಿಲ್ಲೆಯ 56787 ರೈತರಿಗೆ ಬೆಳೆ ಪರಿಹಾರ ಜಮೆ ಆಗಿದೆ ಹಾಗೂ ಇನ್ನುಳಿದ ರೈತರಿಗೆ ಬೆಳೆ ಪರಿಹಾರ ಜಮೆ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.