ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಟ್ಟೀಹಳ್ಳಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ; ಎಮ್ಮೆ, ಎರಡು ಎತ್ತು, ಮೂರು ಆಕಳು ಸಜೀವ ದಹನ

Haveri News: ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದಲ್ಲಿ ಅವಘಡ ನಡೆದಿದೆ. ಸಿದ್ಲಿಂಗಪ್ಪ ಶಿವಪ್ಪ ಭಾನುವಳ್ಳಿ ಎಂಬುವರ ದನದ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಈ ವೇಳೆ ಒಂದು ಎಮ್ಮೆ, ಎರಡು ಎತ್ತು, ಮೂರು ಆಕಳು ಮೃತಪಟ್ಟಿವೆ. ಶಾಸಕ ಯು.ಬಿ.ಬಣಕಾರ ಮತ್ತು ಮಾಜಿ ಸಚಿವ ಬಿ.ಸಿ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಟ್ಟೀಹಳ್ಳಿ ತಾಲೂಕಿನ ಕಣವಿಸಿದ್ಗೇರಿ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದಿರುವುದು.

ರಟ್ಟೀಹಳ್ಳಿ: ತಾಲೂಕಿನ ಕಣವಿಸಿದ್ಗೇರಿ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ (fire incident) ತಗುಲಿ, ಒಂದು ಎಮ್ಮೆ, ಎರಡು ಎತ್ತು, ಮೂರು ಆಕಳು ಮೃತಪಟ್ಟಿರುವ ಘಟನೆ ಶನಿವಾರ ತಡ ರಾತ್ರಿ ನಡೆದಿದೆ. ಸಿದ್ಲಿಂಗಪ್ಪ ಶಿವಪ್ಪ ಭಾನುವಳ್ಳಿ ಎಂಬುವರ ದನದ ಕೊಟ್ಟಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಂದಾಜು 5 ಲಕ್ಷ ರೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಶಾಸಕ ಯು.ಬಿ.ಬಣಕಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿ, ಅನುಗ್ರಹ ಯೋಜನೆಯಡಿ ಸರ್ಕಾರದಿಂದ ಬೇಗನೇ ಪರಿಹಾರ ಹಣ ಬಿಡುಗಡೆ ಮಾಡುವಂತೆ ಹೇಳಿದ್ದಾರೆ. ಅಲ್ಲದೇ ವೈಯುಕ್ತಿಕವಾಗಿ ಧನ ಸಹಾಯ ಮಾಡಿ, ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅದೇ ರೀತಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ‌ 25,000 ರೂ. ಧನ ಸಹಾಯ ಮಾಡಿದ್ದಾರೆ.

ನೆಲಮಂಗಲದ ವಿಪ್ರೋ ಎಂಟರ್‌ಪ್ರೈಸಸ್ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ

_Nelamangala fire accident

ನೆಲಮಂಗಲ: ನಗರದ ಮಾಕಳಿಯಲ್ಲಿನ ವಿಪ್ರೋ ಎಂಟರ್‌ಪ್ರೈಸಸ್ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಸೃಷ್ಟಿ ಲೋಕೇಶ್ ಎಂಬುವವರ ಗೋದಾಮು ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವಕನ ಮನೆಗೆ ಬೆಂಕಿ ಇಟ್ಟ ಮಾವ!

​ಮಾದನಾಯಕನಹಳ್ಳಿ ಪೊಲೀಸ್ ವ್ಯಾಪ್ತಿಯಲ್ಲಿ ಅಗ್ನಿ ಅವಘಡ ನಡೆದಿದೆ. ಬೆಂಕಿಗಾಹುತಿಯಾದ ಗೋದಾಮಿನಲ್ಲಿ ಸಾಬೂನು, ಸೋಪು ಪುಡಿ ಸೇರಿ ವಿವಿಧ ರೀತಿಯ ವಸ್ತುಗಳನ್ನಿಟ್ಟಿಡಲಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಪಕ್ಕದ ಫ್ರಿಡ್ಜ್ ಗೋದಾಮಿಗೂ ಬೆಂಕಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.