ಹಾವೇರಿ: ಹಾವೇರಿ ತಾಲೂಕಿನ ಹಾವನೂರು ಗ್ರಾಮದಲ್ಲಿ ಜನವರಿ 23 ರಿಂದ ಒಂದುವಾರ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರೆ (Dyamavva devi Jatra) ನಡೆಯಲಿದೆ. ಈ ಸಮಯದಲ್ಲಿ ದೇವಸ್ಥಾನದ ಆವರಣ ಹಾಗೂ ಗ್ರಾಮದ ವ್ಯಾಪ್ತಿಯಲ್ಲಿ ಪ್ರಾಣಿ - ಪಕ್ಷಿ ಬಲಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.
ಭಕ್ತಾಧಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ - ಪಕ್ಷಿ ಬಲಿ ನೀಡುವುದನ್ನು ನಿಷೇಧಸಲಾಗಿದೆ. ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ನಿಯಮಗಳು 1963 ರ ಪ್ರಕಾರ ಹಾಗೂ ಗ್ರಾಮದ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವುದು ಮತ್ತು ಮುಂಜಾಗೃತ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ಪ್ರಾಣಿ - ಪಕ್ಷಿ ಬಲಿಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಬಳಿ ಚಿರತೆ ದಾಳಿ; ಪಾದಯಾತ್ರೆ ತೆರಳುತ್ತಿದ್ದ ಭಕ್ತ ಸಾವು
ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಿಸುವ ಕುರಿತು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಹಾವೇರಿಯಲ್ಲಿ ಗಾಂಜಾ ಮಾಡುತ್ತಿದ್ದ ಮೂವರ ಬಂಧನ
ಹಾವೇರಿ: ಹಾವೇರಿ- ಗುತ್ತಲ ರಸ್ತೆ ಬದಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹಾವೇರಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. (Haveri News) ಹಾವೇರಿ ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ನಿರ್ದೇಶನದಂತೆ ಹಾವೇರಿ ಶಹರ ಠಾಣೆ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದೆ.
ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ದಂಧೆಕೋರರನ್ನು ರವಿವಾರ ಬಂಧಿಸಿದ್ದು, ಆರೋಪಿತರಿಂದ 7935 ಗ್ರಾಂ ಅಂದರೆ ಅಂದಾಜು 3,17,400 ರೂ. ಮೌಲ್ಯದ ಗಾಂಜಾ ಜತೆಗೆ 3,370 ರೂಪಾಯಿ ನಗದು ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಲೋಹಿತ ಕೃಷ್ಣಪ್ಪ ಮುನಿಯಪ್ಪನವರ (23), ಮಹೇಶ ಅಶೋಕ ಮೈಲಮ್ಮನವರ (23) ಹಾಗೂ ಮನೋಜ ಕರಿಯಪ್ಪ ಚಾರಿ (21) ಬಂಧಿತ ಆರೋಪಿಗಳು. ಈ ಮೂವರು ಸವಣೂರು ತಾಲೂಕಿನವರಾಗಿದ್ದು ಇಬ್ಬರು ಹೆಸರಿಗೆ ಪೇಟಿಂಗ್ ಕೆಲಸ, ಮತ್ತೊಬ್ಬ ಕೂಲಿ ಕೆಲಸ ಮಾಡಿಕೊಂಡಿದ್ದರೆಂದು ತನಿಖೆಯಿಂದ ತಿಳಿದು ಬಂದಿದೆ.