ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೀಟ್‌ ಪಾಸ್‌ ಆಗಿ ಎಂಬಿಬಿಎಸ್‌ ಸೀಟ್‌ ಪಡೆದ ಒಂದೇ ಗ್ರಾಮದ ಇಬ್ಬರು ವಿದ್ಯಾರ್ಥಿಗಳು; ಗ್ರಾಮಸ್ಥರಲ್ಲಿ ಹರ್ಷ

Haveri News: ಹಾವೇರಿ ತಾಲೂಕಿನ ಶಾಕಾರ ಗ್ರಾಮದ ವಿದ್ಯಾರ್ಥಿಗಳಾದ ಜಗದೀಶ ದೇವೇಂದ್ರಪ್ಪ ಬೆಂಡಿಗೇರಿ ಮತ್ತು ವರ್ಷಾ ರೇಣುಕಾ ಕಮ್ಮಾರ್ ಅವರು ಬಡತನವನ್ನು ಮೆಟ್ಟಿನಿಂತು, ಸತತ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಸರ್ಕಾರಿ ಎಂಬಿಬಿಎಸ್ ಸೀಟ್ ಪಡೆದುಕೊಂಡಿದ್ದಾರೆ.

ವರ್ಷಾ ರೇಣುಕಾ ಕಮ್ಮಾರ್ ಮತ್ತು ಜಗದೀಶ ದೇವೇಂದ್ರಪ್ಪ ಬೆಂಡಿಗೇರಿ

ಹಾವೇರಿ: ತಾಲೂಕಿನ ಶಾಕಾರ ಗ್ರಾಮದ ವಿದ್ಯಾರ್ಥಿಗಳಾದ ಜಗದೀಶ ದೇವೇಂದ್ರಪ್ಪ ಬೆಂಡಿಗೇರಿ ಮತ್ತು ವರ್ಷಾ ರೇಣುಕಾ ಕಮ್ಮಾರ್ ಅವರು ಬಡತನವನ್ನು ಮೆಟ್ಟಿನಿಂತು, ಸತತ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಸರ್ಕಾರಿ ಎಂಬಿಬಿಎಸ್ ಸೀಟ್ ಪಡೆದುಕೊಂಡಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

ವಿದ್ಯಾರ್ಥಿಗಳು ಮುಂದೆ ವೈದ್ಯರಾಗಿ ಜನಸೇವೆ ಮಾಡಬೇಕೆಂಬ ಆಶಯವನ್ನು ಹೊಂದಿದ್ದಾರೆ. ಆತ್ಮವಿಶ್ವಾಸದಿಂದ ನಿರಂತರ ಅಭ್ಯಾಸ ಮಾಡಿದ್ದರಿಂದ ಗುರಿ ಮುಟ್ಟಲು ಸಾಧ್ಯವಾಯಿತು ಎಂದು ವಿದ್ಯಾರ್ಥಿಗಳಾದ ಜಗದೀಶ ಬೆಂಡಿಗೇರಿ ಹಾಗೂ ವರ್ಷಾ ಕಮ್ಮಾರ್ ತಿಳಿಸಿದ್ದಾರೆ.

ಪ್ರಾಥಮಿಕ ತರಗತಿಯಿಂದಲೇ ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿಕೊಂಡು ಬಂದಿದ್ದರು. ಗುರಿ ಮುಟ್ಟವ ಛಲ ಹೊಂದಿದ್ದ ಇವರು ಅಂದುಕೊಂಡಂತೆ ಸಾಧಿಸಿ ತೋರಿಸಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಕಾರ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

ನಾನು ಪ್ರಾಥಮಿಕ ಶಿಕ್ಷಣವನ್ನು ಎಸ್.ಟಿ ಥೇಮ್ಸ್ ಶಾಲೆಯಲ್ಲಿ ಮುಗಿಸಿ, ನಂತರ 5ನೇ ತರಗತಿಯಲ್ಲಿದ್ದಾಗ ಮುರಾರ್ಜಿ ದೇಸಾಯಿ ವಸತಿ ಶಾಲೆ ಪರೀಕ್ಷೆ ಬರೆದು ಇಟ್ಟಿಗಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇಕಡಾ 99.09 ರಷ್ಟು ಅಂಕ ಗಳಿಸಿ ಉತ್ತೀರ್ಣನಾದೆ. ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಬೊಮ್ಮನಹಳಿ ಅಲ್ಲಿ ಪ್ರಥಮ ಪಿಯುಸಿ ಯನ್ನು ಉಚಿತವಾಗಿ ಓದಿದೆ, ನಂತರ ದ್ವಿತೀಯ ಪಿಯುಸಿಯಲ್ಲಿ ಶೇಕಡ 98 ರಷ್ಟು ಅಂಕ ಗಳಿಸಿ ಉತ್ತೀರ್ಣನಾದೆ. ನಂತರ ನನ್ನ ಆಸೆಯಂತೆ ನಮ್ಮ ಮನೆಯಲ್ಲಿ ಲಾಂಗ್ ಟರ್ಮ್‌ಗೆ ಸೇರ್ಪಡೆ ಮಾಡಿಸಿದ್ರು, ಈ ವರ್ಷ ನಾನು ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಪಡೆದುಕೊಂಡೆ. ನನ್ನ ಪ್ರತಿ ಹೆಜ್ಜೆಯಲ್ಲೂ ನನ್ನ ಕುಟುಂಬದವರು ಅವರ ಕಷ್ಟಗಳನ್ನೆಲ್ಲ ಬದಿಗಿಟ್ಟು ನನ್ನನ್ನು ಓದಿಸಿದರು. ನಾನು ಕೊಪ್ಪಳದ ಎಂಬಿಬಿಎಸ್ ಕಾಲೇಜ್‌ಗೆ ಆಯ್ಕೆ ಆಗಿದ್ದೇನೆ ಎಂದು ವಿದ್ಯಾರ್ಥಿನಿ ವರ್ಷಾ ರೇಣುಕಾ ಕಮ್ಮಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka Grameena Bank Recruitment 2025: ಪದವೀಧರರಿಗೆ ಗುಡ್‌ನ್ಯೂಸ್‌; ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1,425 ಹುದ್ದೆ

ನಾನು ಪ್ರಾಥಮಿಕ ಶಿಕ್ಷಣವನ್ನು ಎಸ್.ಟಿ ಥೇಮ್ಸ್ ಶಾಲೆಯಲ್ಲಿ ಮುಗಿಸಿ, ನಂತರ 5ನೇ ತರಗತಿಯಲ್ಲಿದ್ದಾಗ ಮುರಾರ್ಜಿ ದೇಸಾಯಿ ವಸತಿ ಶಾಲೆ ಪರೀಕ್ಷೆ ಬರೆದು ಇಟ್ಟಿಗಿ ಶಾಲೆಯಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇಕಡಾ 99.04 ರಷ್ಟು ಅಂಕ ಗಳಿಸಿ ಉತ್ತೀರ್ಣನಾದೆ. ನಂತರ ನಮ್ಮ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಇಂದು ಕಾಲೇಜ್‌ನಲ್ಲಿ ಪ್ರಥಮ ಪಿಯುಸಿ ಯನ್ನು ಉಚಿತವಾಗಿ ಓದಿದೆ, ನಂತರ ದ್ವಿತೀಯ ಪಿಯುಸಿಯಲ್ಲಿ ಶೇಕಡ 97 ರಷ್ಟು ಅಂಕ ಗಳಿಸಿ ಉತ್ತೀರ್ಣನಾದೆ, ನಂತರ ನನ್ನ ಆಸೆಯಂತೆ ನಮ್ಮ ಮನೆಯಲ್ಲಿ ನೀಟ್‌ ಲಾಂಗ್ ಟರ್ಮ್‌ ಕೋಚಿಂಗ್‌ಗೆ ಸೇರಿಸಿದರು. ಈ ವರ್ಷ ನಾನು ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟ್ ಪಡೆದುಕೊಂಡೆ. ನನ್ನ ಪ್ರತಿ ಹೆಜ್ಜೆಯಲ್ಲೂ ನನ್ನ ಕುಟುಂಬದವರು ಅವರ ಕಷ್ಟಗಳನ್ನೆಲ್ಲ ಬದಿಗಿಟ್ಟು ನನ್ನ ಓದಿಸಿದರು. ವೈದ್ಯನಾಗಿ ಹಳ್ಳಿಯಲ್ಲಿ ಸೇವೆ ಮಾಡಬೇಕೆಂಬ ಮುಂದಿನ ಕನಸನ್ನು ಹೊತ್ತುಕೊಂಡಿರುವೆ ಎಂದು ವಿದ್ಯಾರ್ಥಿ ಜಗದೀಶ್ ಬೆಂಡಿಗೇರಿ ತಿಳಿಸಿದ್ದಾರೆ.