ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 Final: ಐಪಿಎಲ್‌ ಫೈನಲ್‌ ವೀಕ್ಷಣೆಗೆ ಹಾವೇರಿಯಲ್ಲಿ ಬೃಹತ್‌ ಎಲ್‌ಇಡಿ ಪರದೆ; ಹರಿದುಬಂದ RCB ಅಭಿಮಾನಿಗಳು

RCB vs GT: ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್‌ ಮ್ಯಾಚ್‌ ವೀಕ್ಷಣೆಗೆ ಹಾವೇರಿ ಜಿಲ್ಲಾ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ವಿವಿಧೆಡೆಯಿಂದ ಸಾವಿರಾರು ಅಭಿಮಾನಿಗಳು ಪಂದ್ಯ ವೀಕ್ಷಿಸಲು ಆಗಮಿಸಿದ್ದರು.

ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯ ವೀಕ್ಷಿಸಲು ಸೇರಿರುವ ಅಭಿಮಾನಿಗಳು.

ಹಾವೇರಿ: ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯದ (IPL 2026 Final) ವೀಕ್ಷಣೆಗೆ‌ ಹಾವೇರಿ ಜಿಲ್ಲಾ ಹೊಸಮನಿ ಸಿದ್ದಪ್ಪ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಪಂದ್ಯ ವೀಕ್ಷಣೆಗೆ ವಿವಿಧೆಡೆಯಿಂದ ಆರ್‌ಸಿಬಿ ಅಭಿಮಾನಿಗಳ ದಂಡೇ ಹರಿದುಬಂದಿತ್ತು.

Haveri IPL  (1)

ಹಾವೇರಿ ಶಾಸಕ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಪುತ್ರ, ಜಿಲ್ಲಾ ಯೂತ್‌ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಕುಮಾರ್ ಲಮಾಣಿ ಅವರು, ಮ್ಯಾಚ್‌ ವೀಕ್ಷಣೆಗೆ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ, ಎಎಸ್‌ಪಿ ಲಕ್ಷ್ಮಣ ಶಿರಕೋಳ, ರಮೇಶ ಆನವಟ್ಟಿ, ಮಲ್ಲೇಶ ಬಣಕಾರ, ಸುಧೀರ್ ಲಮಾಣಿ ಸೇರಿ ಹಲವು ಪ್ರಮುಖರು ಹಾಜರಿದ್ದರು.

Haveri IPL  (2)

ಐಪಿಎಲ್‌ ಮ್ಯಾಚ್ ವೀಕ್ಷಣೆಗೆ ಬಂದ ಸಾವಿರಾರು ಅಭಿಮಾನಿಗಳು ಕುಣಿಯುತ್ತಾ, ಕೂಗಾಡುತ್ತಾ ಸಂಭ್ರಮಿಸಿದರು.