ಹಾವೇರಿ: ಕೇರಳದ ಕೊಚ್ಚಿಯಲ್ಲಿ ತರಬೇತಿ ವೇಳೆ ಬಂದೂಕು ಮಿಸ್ ಫೈರಿಂಗ್ ಆಗಿ ಹಾವೇರಿ ಮೂಲದ ಭಾರತೀಯ ನೌಕಾಪಡೆಯ ಯೋಧ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಉಪ್ಪಣಸಿ ಗ್ರಾಮದ ಯಶೋಧರ ವಡ್ಡರ (29) ಮೃತ ಯೋಧ ಎಂದು ತಿಳಿದುಬಂದಿದೆ.
2016ರಲ್ಲಿ ಭಾರತೀಯ ನೌಕಾಪಡೆಗೆ ಸೇರಿದ್ದ ಇವರು ಅಂಡಮಾನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಮೂರು ತಿಂಗಳಿಂದ ಕೊಚ್ಚಿಯಲ್ಲಿ ತರಬೇತಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಂದೂಕು ಮಿಸ್‌ಫೈರ್ ಆಗಿ ಮೃತಪಟ್ಟಿದ್ದಾರೆ. ಕೊಚ್ಚಿಯಲ್ಲಿನ ನೌಕಾಪಡೆಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಂಗಳೂರು ಮೂಲಕ ಹಾವೇರಿಗೆ ಪಾರ್ಥಿವ ಶರೀರದ ರವಾನೆ ಮಾಡಲಾಗಿದೆ.
Tragedy at stone quarry: ಕಲ್ಲು ಕ್ವಾರಿಯಲ್ಲಿ ದುರಂತ: 30 ಅಡಿ ಆಳಕ್ಕೆ ಬಿದ್ದು ಕಾರ್ಮಿಕ ಸಾವು
ಶನಿವಾರ ಉಪ್ಪಣಸಿ ಗ್ರಾಮಕ್ಕೆ ಪಾರ್ಥಿವ ಶರೀರ ತಲುಪಲಿದೆ. ಯೋಧನ ನಿಧನ ಸುದ್ದಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯೋಧನ ಸಾವಿಗೆ ಜಿಲ್ಲೆಯ ಗಣ್ಯರು ಸಂತಾಪ ಸೂಚಿಸಿದ್ದಾರೆ.