ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯವು ಕರ್ನಾಟಕದ ಪ್ರಮುಖ ವನ್ಯಜೀವಿ ತಾಣಗಳಲ್ಲಿ ಒಂದು. ʻಕೃಷ್ಣಮೃಗಗಳ ನಾಡುʼ ಎಂದೇ ಗುರುತಿಸಲ್ಪಟ್ಟಿದೆ. ಅಳಿವಿನಂಚಿನಲ್ಲಿರುವ ಕೃಷ್ಣಮೃಗ ಆಂಟಿಲೋಪ್ ಮತ್ತು ಈ ಪ್ರದೇಶದ ವಿಶಿಷ್ಟ ಹುಲ್ಲುಗಾವಲು ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಮುಖ್ಯ ಉದ್ದೇಶದಿಂದ 1974 ರಲ್ಲಿ ಈ ಅಭಯಾರಣ್ಯವನ್ನು ಸ್ಥಾಪಿಸಲಾಯಿತು. ರಾಣೇಬೆನ್ನೂರಿನ ಸಮೀಪವಿರುವ ವಿಶಾಲ ಪ್ರದೇಶದಲ್ಲಿ ಹರಡಿರುವ ಈ ಅಭಯಾರಣ್ಯವು ರಾಜ್ಯದಾದ್ಯಂತ ಇರುವ ವನ್ಯಜೀವಿ ಪ್ರೇಮಿಗಳು, ಛಾಯಾಗ್ರಾಹಕರು, ಪಕ್ಷಿವೀಕ್ಷಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಪ್ರವಾಸಿಗರು ತಮ್ಮ ನೈಸರ್ಗಿಕ ಪರಿಸರದಲ್ಲಿ ಮುಕ್ತವಾಗಿ ಸಂಚರಿಸುವ ಕೃಷ್ಣಮೃಗಗಳ ದೊಡ್ಡ ಹಿಂಡುಗಳನ್ನು ನೋಡಬಹುದು. ಕೃಷ್ಣಮೃಗಗಳ ಜತೆಗೆ ನವಿಲುಗಳು, ನರಿಗಳು, ತೋಳಗಳು, ಮೊಲಗಳು ಮತ್ತು ಹಲವಾರು ಜಾತಿಯ ವಲಸೆ ಹಾಗೂ ಸ್ಥಳೀಯ ಪಕ್ಷಿಗಳಿಗೆ ಅಭಯಾರಣ್ಯ ಆಶ್ರಯ ನೀಡಿದೆ. ಇಲ್ಲಿನ ವಿಶಾಲವಾದ ಹುಲ್ಲುಗಾವಲುಗಳು ಮತ್ತು ಸುಂದರವಾದ ಭೂದೃಶ್ಯ ಉತ್ತರ ಕರ್ನಾಟಕದ ಅತ್ಯುತ್ತಮ ವನ್ಯಜೀವಿ ವೀಕ್ಷಣಾ ತಾಣಗಳಲ್ಲಿ ಒಂದನ್ನಾಗಿ ಮಾಡಿವೆ.
ಸಾವಿರಾರು ಕೃಷ್ಣಮೃಗಗಳ ನೈಸರ್ಗಿಕ ವಾಸ ಸ್ಥಳವಾಗಿರುವ ಈ ಅಭಯಾರಣ್ಯವು 119 ಚದರ ಕಿಮೀ ವಿಶಾಲವಾಗಿದೆ. ಚಿರತೆ, ಗೋಲ್ಡನ್ ಜಾಕಲ್ನಂಥ ಮಾಂಸಾಹಾರಿ ಪ್ರಾಣಿಗಳು, ಟಿಟ್ಟಿಬ, ನವಿಲುಗಳು, ಕೊಳಕುಮಂಡಲ, ಹೆಬ್ಬಾವು, ನಾಗರ ಹಾವುಗಳಂಥ ಸರಿಸೃಪಗಳು, ನೆಲಗುಬ್ಬಿ, ಕೌಜುಗ, ಕಪ್ಪು ಕಾಜಾಣ, ಕಲ್ಲು ಗೊರವದಂಥ ಪಕ್ಷಿಗಳು ಸೇರಿ ಕುರುಚಲ ಕಾಡಿನ ಸಾಕಷ್ಟು ಪ್ರಾಣಿ ಪಕ್ಷಿ ಪ್ರಭೇದಗಳು ಇಲ್ಲಿವೆ. ವಿದೇಶಿ ಹಕ್ಕಿಗಳಿಗೂ ಈ ತಾಣ ಅಚ್ಚು ಮೆಚ್ಚಾಗುತ್ತಿದೆ. ಅದಕ್ಕೆ ಕಲ್ಲು ಗೊರವ ಎಂಬ ಪಕ್ಷಿ ಗುಂಪಿನ ಸಮೇತ ಇಲ್ಲಿ ಕಂಡು ಬರುತ್ತಿರುವುದು ಸಾಕ್ಷಿ. ಹತ್ತಾರು ಪಕ್ಷಿಗಳು ಒಂದೇ ಹಿಂಡಿನಲ್ಲಿ ಹಾರುತ್ತ ವಿದೇಶಿ ಪಕ್ಷಿಗಳ ಕಲರವ ಕರ್ನಾಟಕದಲ್ಲೂ ತರುತ್ತಿವೆ.

ಸಫಾರಿ ಸವಾರಿ
1974 ರಲ್ಲಿ ಈ ಅಭಯಾರಣ್ಯ ಕಾರ್ಯ ಆರಂಭಿಸಿತು. ಆದರೆ ಅರಣ್ಯ ಇಲಾಖೆಯ ಸಫಾರಿ ಜೀಪ್‌ನಲ್ಲಿ ಸಫಾರಿ ಆರಂಭವಾಗಿದ್ದು 2024ರ ಅಕ್ಟೋಬರ್‌ನಿಂದ. ಅಲ್ಲಿಯವರೆಗೂ ಖಾಸಗಿ ವಾಹನಗಳಿಗೆ ಪರವಾನಗಿ ನೀಡಿ ಸಫಾರಿ ಅವಕಾಶ ನೀಡಲಾಗುತ್ತಿತ್ತು. ಅಭಯಾರಣ್ಯದ ಹಿತದೃಷ್ಟಿಯಿಂದ ಈ ಕ್ರಮವನ್ನು ತಡೆಯಲಾಗಿದೆ. ರಾಣೇಬೆನ್ನೂರಿನ ಶಾಸಕರಾದ ಪ್ರಕಾಶ ಕೋಳಿವಾಡ ಅವರು ಮತ್ತು ಅರಣ್ಯ ಇಲಾಖೆ ಇತ್ತ ಹೆಚ್ಚು ಒತ್ತು ನೀಡಿದ್ದು, ಉತ್ತಮ ಸಫಾರಿ ಜೀಪ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಈ ಕಿಟಕಿಗಳು ಮುಕ್ತ ವಾಹನದಲ್ಲಿ ಸಫಾರಿಯನ್ನು ಅನುಭವಿಸುವುದೇ ಅದ್ಭುತ. 360 ವ್ಯೂನಲ್ಲೂ ಕಾಡಿನ ಅದ್ಭುತ ನೋಟ ಅನಾವರಣಗೊಳ್ಳುತ್ತದೆ. ಗಡಗಡ ಸದ್ದು ಇಲ್ಲ. ಆಫ್ ರೋಡ್ ರೈಡ್ ಜತೆಗೊಬ್ಬ ಅನುಭವಿ ಗೈಡ್ ಒಂದು ಸಫಾರಿಗೆ ಇದಕ್ಕಿಂತ ಹೆಚ್ಚೇನು ಬೇಕು. ವನ್ಯಜೀವಿಗಳನ್ನು ಹತ್ತಿರದಿಂದ ನೋಡಲು ಅವಕಾಶ ಮಾಡಿಕೊಡುವ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ. ಬೆಳಗ್ಗೆ 6:00-9:00 ಮತ್ತು ಸಂಜೆ 4:00-6:00 ಸಫಾರಿಗೆ ಉತ್ತಮ ಸಮಯ. ಈ ಸಮಯದಲ್ಲಿ ಸಫಾರಿ ಕೃಷ್ಣಮೃಗಗಳು, ಚಿರತೆ, ನವಿಲು ಮತ್ತಿತರ ಅಸಂಖ್ಯಾತ ಪಕ್ಷಿಗಳನ್ನು ನೋಡಲು ಉತ್ತಮ ಅವಕಾಶಗಳನ್ನು ಒದಗಿಸುತ್ತದೆ. ಕೃಷ್ಣಮೃಗ ಸಫಾರಿ, ವನ್ಯಜೀವಿ ಛಾಯಾಗ್ರಹಣ, ಪಕ್ಷಿ ವೀಕ್ಷಣೆ ಮತ್ತು ಪ್ರಕೃತಿ ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಈ ಅಭಯಾರಣ್ಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಪರಿಸರ ಪ್ರವಾಸೋದ್ಯಮ ತಾಣವಾಗಿ ಬೆಳೆಯುವ ಅಪಾರ ಸಾಮರ್ಥ್ಯ ಹೊಂದಿದೆ. ರಾಣೇಬೆನ್ನೂರು ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದಕ್ಕಾಗಿ ಶಾಸಕರಾದ ಪ್ರಕಾಶ ಕೋಳಿವಾಡ ಅವರು ನಿತ್ಯ ಶ್ರಮಿಸುತ್ತಿದ್ದಾರೆ. 119 ಚದರ ಕಿಮೀ ಅರಣ್ಯ ವ್ಯಾಪಿಸಿದ್ದರು ಕೇವಲ 22 ಕಿಮೀ ವ್ಯಾಪ್ತಿಯನ್ನು ಮಾತ್ರ ಸಫಾರಿಗಾಗಿ ಬಳಸಲಾಗುತ್ತಿದೆ. ಇಷ್ಟೇ ವ್ಯಾಪ್ತಿಯಲ್ಲಿ ನಾಲ್ಕೈದು ಕೃಷ್ಣ ಮೃಗಗಳ ಹಿಂಡು, ಚಿರತೆ, ಹತ್ತಾರು ಜಾತಿಯ ಹಕ್ಕಿಗಳು, ಸರಿಸೃಪಗಳನ್ನು ಕಾಣಬಹುದು.
ನೇಚರ್ ಕ್ಯಾಂಪ್‌ನ ಸ್ವಚ್ಛಂದ ಪರಿಸರ
ಈ ಕೃಷ್ಣಮೃಗ ಅಭಯಾರಣ್ಯ ಸಫಾರಿಗೆ ರಾಜ್ಯ ಹೊರ ರಾಜ್ಯಗಳಿಂದ ಪ್ರವಾಸಿಗರು ಬರುತ್ತಿದ್ದು, ವಾಸ್ತವ್ಯಕ್ಕಾಗಿ ಒಂದು ಸುಂದರ ನೇಚರ್ ಕ್ಯಾಂಪ್ ಇದೆ. ಈ ನೇಚರ್ ಕ್ಯಾಂಪ್ನ ಪರಿಸರವೇ ಅದ್ಭುತವಾಗಿದ್ದು ವಾಸ್ತವ್ಯದ ಅನುಭವ ಥೇಟ ಕಾಡಿನ ಅದ್ಭುತಗಳ ಮಧ್ಯ ಉಳಿದಂತಾಗುತ್ತದೆ. ಸುತ್ತಲೂ ಹತ್ತಾರು ಜಾತಿಯ ಕುರುಚಲು ಗಿಡ ಮರಗಳು, ಬೇಲ, ಸಿಹಿ ಹುಣಸೇ, ಕವಳಿ-ಕಂಟಿಯ ಹಣ್ಣಿನ ಸಸ್ಯಗಳು ಇವೆ. ವಾಸ್ತವ್ಯಕ್ಕಾಗಿ ಲಾಗ್ ಹಟ್, ಡಾರ್ಮೆಟರಿ ವ್ಯವಸ್ಥೆ ಇದೆ. ವೈಲ್ಡ್ ಲೈಫ್ ಫೋಟೋಗ್ರಾಫರ್ ಗಳಿಗೆ ಇದು ಅದ್ಭುತ ವಾಸ್ತವ್ಯದ ತಾಣ. ವಾಸ್ತವ್ಯದ ಆಯ್ಕೆಗಳು ಕಡಿಮೆ ಇದ್ದರೂ ಫೋಟೋ ಶೂಟ್ ಗಾಗಿ ಆಯ್ಕೆಗಳು ಅಸಂಖ್ಯಾತ ವಾಗಿರುತ್ತವೆ. ಕವಳಿಕಂಟಿಯ ಹಣ್ಣುಗಳನ್ನು ತಿನ್ನುತ್ತಿರುವ ಕೋಗಿಲೆ, ಕಾಜಾಣ ಟಿಟ್ಟಿಬ, ಕಪ್ಪು ಕೋತಿಗಳು, ಗಿಳಿ, ನವಿಲುಗಳು, ಅಪರೂಪದ ಕಲ್ಲು ಗೊರವ, ಮರಕುಟಿಕ ಮತ್ತಿತರ ಪಕ್ಷಿಗಳನ್ನು ಮನಸಿನ ಕಣ್ಣಿಗೆ ತುಂಬಿಸಿಕೊಂಡು ಕ್ಯಾಮೆರಾದ ಕಣ್ಣಿಗೂ ಇಳಿಸಬಹುದು.
ಶಾಂತಿ, ಅಹಿಂಸೆಯ ನೆಲೆವೀಡು ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ
ಬೆಟ್ಟದ ಮಲ್ಲಪ್ಪನ ಗುಡ್ಡ
ಬೆಟ್ಟದ ಮಲ್ಲಪ್ಪನ ಗುಡ್ಡವು ರಾಣೇಬೆನ್ನೂರು ಸಮೀಪವಿರುವ ಒಂದು ಸುಂದರವಾದ ಗುಡ್ಡಗಾಡು ಪ್ರವಾಸಿ ತಾಣ. ಇಲ್ಲಿನ ಶಾಂತಿಯುತ ವಾತಾವರಣ, ನೈಸರ್ಗಿಕ ಸೌಂದರ್ಯ, ಬೆಟ್ಟದ ಮೇಲಿನ ಸುಂದರ ನೋಟಗಳು ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ. ಬೆಟ್ಟದ ತುದಿಯಲ್ಲಿ ಮಲ್ಲಪ್ಪ ದೇವರಿಗೆ ಸಮರ್ಪಿತ ದೇವಾಲಯವಿದೆ. ಇದು ವರ್ಷವಿಡೀ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಮನಮೋಹಕ ದೃಶ್ಯಗಳು, ಚಾರಣ, ಛಾಯಾಗ್ರಹಣ ಮತ್ತು ಸಾಹಸ ಚಟುವಟಿಕೆಗಳಿಗೆ ಜನಪ್ರಿಯವಾಗಿದೆ. ಮಳೆಗಾಲದಲ್ಲಿ ಸುತ್ತಮುತ್ತಲಿನ ರಮಣೀಯ ಬೆಟ್ಟಗಳ ಭೂದೃಶ್ಯ ಮನೋಜ್ಞ ವಾತಾವರಣವನ್ನು ಸೃಷ್ಟಿಸುತ್ತದೆ. ಸೆಲ್ಫೀ ಪಾಯಿಂಟ್, ಆಫ್ ರೋಡ್ ಚಾರಣ ಮಾರ್ಗ ವ್ಯವಸ್ಥೆಯಿದೆ. ಕೃಷ್ಣಮೃಗಗಳ ಸೈಟಿಂಗ್, ಔಷಧೀಯ ಸಸ್ಯವರ್ಗ, ರಮಣೀಯ ನೋಟಗಳೂ ಉಚಿತ. ಈ ಮೂಲಕ ಮಲ್ಲಪ್ಪನ ಗುಡ್ಡ ಪರಿಸರ ಪ್ರವಾಸೋದ್ಯಮದಲ್ಲಿ ಉತ್ತಮವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ.

ಮುಕ್ತೇಶ್ವರ ದೇವಾಲಯ
ಮುಕ್ತೇಶ್ವರ ದೇವಾಲಯ ಚೌಡಯ್ಯದಾನಪುರದಲ್ಲಿದೆ. ಈ ಊರಿನ ಹೆಸರಿಗೂ ಒಂದು ಹಿನ್ನೆಲೆ ಇದೆ. ವಚನ ಶ್ರೇಷ್ಠ ಅಂಬಿಗರ ಚೌಡಯ್ಯನವರು ದಾನ ಶ್ರೇಷ್ಠರೂ ಹೌದು ಎನ್ನುವುದಕ್ಕೆ ಈ ಊರು ಸಾಕ್ಷಿ. ತಮಗೆ ಬಳುವಳಿಯಾಗಿ ಬಂದ ಹಳ್ಳಿಯನ್ನು ತಮ್ಮ ಗುರುಗಳಿಗೆ ಅಂಬಿಗರ ಚೌಡಯ್ಯನವರು ದಾನ ನೀಡಿದರು. ಹಾಗೆ ದಾನ ನೀಡಿದ ತಾಣವೇ ಇಂದಿನ ಚೌಡಯ್ಯ ದಾನಪುರ. ಇಲ್ಲಿ ತುಂಗಭದ್ರಾ ಹರಿಯುತ್ತದೆ. ಅದರ ದಡದಲ್ಲೇ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ, ಮಂಟಪದ ಪಕ್ಕದಲ್ಲೇ ಶಿವನಿಗೆ ಸಮರ್ಪಿತ ಮುಕ್ತೇಶ್ವರ ದೇವಾಲಯವಿದೆ. ಇದು ಪುಣ್ಯಭೂಮಿ. ಉತ್ತರ ಕರ್ನಾಟಕದ ಗುಪ್ತ ವಾಸ್ತುಶಿಲ್ಪದ ರತ್ನ.
ನಿರ್ಮಾಣ ಇತಿಹಾಸ
ಈ ದೇವಾಲಯದ ಆವರಣದ ಬಲ ಭಾಗದಲ್ಲಿ ಹಳೆಗನ್ನಡದ ಶಾಸನಗಳಿದ್ದು, ಅವುಗಳ ಪ್ರಕಾರ ಇದನ್ನು ಜಟಾಚೋಳವಂಶದ ಗುತ್ತರಸರ ಮಾಂಡಳಿಕ ಮಲ್ಲ ಕ್ರಿಶ 1115-1120 ಮಧ್ಯೆ ಕಟ್ಟಿಸಿದನೆಂದೂ, ನಂತರ ಕ್ರಿಶ ಸುಮಾರು 1225ರಲ್ಲಿ ಕಾಳಾಮುಖ ಸಂಪ್ರದಾಯಕ್ಕೆ ಸೇರಿದ ಶಿವದೇವರು ಜೀರ್ಣೋದ್ಧಾರ ಮಾಡಿದರೆಂದು ತಿಳಿದುಬಂದಿದೆ.
ಅದ್ಭುತ ವಾಸ್ತುಶಿಲ್ಪ
ಮುಕ್ತೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಸಾಕ್ಷಿ. ಸುಂದರ ವಿನ್ಯಾಸದ ಕಂಬಗಳು, ಕದಂಬ ನಾಗರ ಶೈಲಿಯ ಶಿಖರ, ಅದರಲ್ಲಿನ ಸರ್ಪಕನ್ಯ, ಗಣೇಶ, ಸೂರ್ಯ, ವೀರಭದ್ರ, ಯಕ್ಷ, ಕಾಮ, ಮುಂತಾದ ಶಿಲ್ಪಗಳು ಗಮನಾರ್ಹವಾಗಿವೆ. ಕಠಿಣ ಕಲ್ಲುಗಳನ್ನು ಅದ್ಭುತವಾಗಿ ಕೆತ್ತಿ ನಿರ್ಮಾಣವಾಗಿರುವ ಈ ದೇವಾಲಯ ಹಿನ್ನೆಲೆಯ ಸುಂದರ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಇತಿಹಾಸ, ವಾಸ್ತುಶಿಲ್ಪ, ಅಧ್ಯಾತ್ಮ, ಪ್ರಕೃತಿ ಸೌಂದರ್ಯ ಒಟ್ಟಾಗಿ ನೆಲೆನಿಂತಿರುವ ಮತ್ತು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಅಪೂರ್ವ ತಾಣವಿದು. ಹೆರಿಟೇಜ್ ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ಭೇಟಿಗಳಿಗೆ ಸೂಕ್ತ ತಾಣ. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆ ಇದನ್ನು ಸಂರಕ್ಷಿಸುತ್ತಿದೆ. ಹಿಂಬದಿಯಲ್ಲಿ ತುಂಗಭದ್ರೆ, ಮುಂಬದಿ ಸುಂದರ ಹಸಿರು ಹಾಸು, ದೇವಾಲಯದ ಸಂಕಿರ್ಣದಲ್ಲಿರುವ ಶಾಸನಗಳು, ವೀರಭದ್ರ ದೇವಾಲಯ ಮತ್ತಿತರ ದೇವಾಲಯಗಳು ವಾಸ್ತುಶಿಲ್ಪದ ಅದ್ಭುತ ಎನ್ನುವಂತಿರುವ ಮುಕ್ತೇಶ್ವರ ದೇವಾಲಯಕ್ಕೆ ಮನೋಜ್ಞ ಸೌಂದರ್ಯ ನೀಡಿವೆ.
ಹಿತವಾದ ಮನಸಿಗೆ ಹದವಾದ ಕಾಫಿ; ನೆನಪಲ್ಲುಳಿಯುವ ಮಾತಾಸ್ ಘಮ
ಐರಾಣಿ ಕೋಟೆ
ಇದು ರಾಣೇಬೆನ್ನೂರು ಸಮೀಪವಿರುವ ಐತಿಹಾಸಿಕ ಕೋಟೆ. ಈ ಕೋಟೆಯು ಈ ಪ್ರದೇಶದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಮಧ್ಯಕಾಲೀನ ವಾಸ್ತುಶಿಲ್ಪದ ಸಂಕೇತವಾಗಿ ನಿಂತಿದೆ. ಕೋಟೆಯ ಪ್ರದೇಶವು ಹಳೆಯ ಕಲ್ಲಿನ ರಚನೆಗಳು ಮತ್ತು ಪ್ರಾಚೀನ ರಕ್ಷಣಾತ್ಮಕ ವಾಸ್ತುಶಿಲ್ಪದ ಅವಶೇಷಗಳನ್ನು ಒಳಗೊಂಡಿದೆ. ಇದು ಪರಂಪರೆಯ ಸಂರಕ್ಷಣೆ ಮತ್ತು ಐತಿಹಾಸಿಕ ಪ್ರವಾಸೋದ್ಯಮಕ್ಕೆ ಪ್ರಮುಖ ತಾಣವಾಗಿದೆ. ಸದ್ಯ ಈ ತಾಣವು ದಾಳಿಯಿಂದ ವಿನಾಶದ ಹಂತ ತಲುಪಿದ್ದು, ಅಲ್ಲಿನ ಇತಿಹಾಸ ಮತ್ತು ಅಲ್ಲಿಂದ ಕಾಣಸಿಗುವ ಸುಂದರ ಪ್ರಕೃತಿ ಪ್ರವಾಸಿಗರನ್ನು ಬರಸೆಳೆಯುತ್ತಿದೆ.

ರಾಣೇಬೆನ್ನೂರಿನ ಅಭಿವೃದ್ಧಿಯ ಹರಿಕಾರ: ಶಾಸಕ ಪ್ರಕಾಶ್ ಕೋಳಿವಾಡ
ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರಕಾಶ್ ಕೋಳಿವಾಡ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತಿದ್ದಾರೆ. ಆಧುನಿಕ ದೃಷ್ಟಿಕೋನ ಮತ್ತು ಜನಪರ ಕಾಳಜಿಯೊಂದಿಗೆ ರಾಣೇಬೆನ್ನೂರನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯಕ್ಕೆ ಹೊಸ ಮೆರುಗು ನೀಡಲು ಅವರು ವಿಶೇಷ ಆಸಕ್ತಿ ವಹಿಸಿದ್ದಾರೆ. ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು 'ಸಫಾರಿ' ಸೌಲಭ್ಯವನ್ನು ಸುಗಮಗೊಳಿಸುವುದು ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಿಂದಾಗಿ ರಾಣೇಬೆನ್ನೂರು ಇಂದು ಕೇವಲ ಒಂದು ನಗರವಾಗಿ ಉಳಿಯದೆ, ವನ್ಯಜೀವಿ ಪ್ರೇಮಿಗಳ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ.

ನಗರದ ಹಸಿರೀಕರಣ ಮತ್ತು ಸೌಂದರ್ಯೀಕರಣಕ್ಕೆ ಒತ್ತು ನೀಡಿರುವ ಶಾಸಕರು, ಐತಿಹಾಸಿಕ ದೊಡ್ಡಕೆರೆಯ ಪುನಶ್ಚೇತನಕ್ಕೆ ಚಾಲನೆ ನೀಡಿದ್ದಾರೆ. ಈ ಕೆರೆಯನ್ನು ಪ್ರವಾಸಿ ತಾಣವಾಗಿ ಪರಿವರ್ತಿಸುವ ಮೂಲಕ ಅಲ್ಲಿ ಬೋಟಿಂಗ್, ಸೈನ್ಸ್ ಪಾರ್ಕ್ ಮತ್ತು ವಾಕಿಂಗ್ ಪಾತ್‌ಗಳಂಥ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ರೈತರ ಮಗನಾಗಿರುವ ಪ್ರಕಾಶ್ ಕೋಳಿವಾಡ ಅವರು ಕೃಷಿ ಕ್ಷೇತ್ರದ ಸುಧಾರಣೆಗೆ ರಾಣೇಬೆನ್ನೂರಿನ ಪ್ರವಾಸಿ ತಾಣಗಳಿಗೆ ಕನೆಕ್ಟಿಂಗ್ ರಸ್ತೆಗಳ ನಿರ್ಮಾಣ, ಮೂಲ ಸೌಕರ್ಯಗಳನ್ನು ನೀಡಿ ಪ್ರವಾಸಿಗರನ್ನು ಸೆಳೆಯುತ್ತಿದ್ದಾರೆ. ಅದರ ಜತೆಗೆ ವಿನೂತನ ಪ್ರಯೋಗಗಳ ಮೂಲಕ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಬರಗಾಲದ ಸಮಯದಲ್ಲಿ ರೈತರಿಗೆ ನೆರವಾಗಲು 'ಮೋಡ ಬಿತ್ತನೆ'ಯಂಥ ಸಾಹಸಕ್ಕೆ ಕೈಹಾಕಿದ್ದು, ಅವರ ರೈತಪರ ಕಾಳಜಿಗೆ ಸಾಕ್ಷಿ. ಇವೆಲ್ಲದರ ಜತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಪೂರಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಾಫ್ಟ್ ಸ್ಕಿಲ್ ತರಬೇತಿ ಕೇಂದ್ರಗಳಿಗೆ ಪ್ರೋತ್ಸಾಹ, ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ.
![]()
ರಾಣೇಬೆನ್ನೂರು ಇಂದು ಉತ್ತರ ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ‘Welcome to the Grassland of India – Ranebennur’ ಹಾಗೂ ‘Explore the Unexplored’ ಎಂಬ ಹೊಸ ಪ್ರವಾಸೋದ್ಯಮ ಪರಿಕಲ್ಪನೆಗಳ ಮೂಲಕ ರಾಣೇಬೆನ್ನೂರಿನ ವಿಶಿಷ್ಟ ಹುಲ್ಲುಗಾವಲು ಪರಿಸರ, ಜೀವ ವೈವಿಧ್ಯ ಮತ್ತು ಐತಿಹಾಸಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ‘Home of the Blackbuck’ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ರಾಜ್ಯದ ಮೊದಲ ಹುಲ್ಲುಗಾವಲು ಸಫಾರಿ ಆರಂಭಗೊಂಡಿರುವುದು ಈ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದೆ.ರಾಣೇಬೆನ್ನೂರಿನ ಪ್ರವಾಸೋದ್ಯಮವು ಕೇವಲ ಅಭಯಾರಣ್ಯಕ್ಕೆ ಸೀಮಿತವಾಗಿಲ್ಲ. ಐತಿಹಾಸಿಕ ಮಹತ್ವ ಹೊಂದಿರುವ ಐರಣಿ ಕೋಟೆ, ಶಿಲ್ಪಕಲೆ ಹಾಗೂ ಆಧ್ಯಾತ್ಮಿಕ ವೈಭವದ ಪ್ರತೀಕವಾದ ಚೌಡಯ್ಯದಾನಪುರದ ಶ್ರೀ ಮುಕ್ತೇಶ್ವರ ದೇವಸ್ಥಾನ ಹಾಗೂ ಪಕ್ಷಿಪ್ರಿಯರನ್ನು ಆಕರ್ಷಿಸುವ ವೆಂಕಟಾಪುರ ಪಕ್ಷಿಧಾಮ ಕೂಡ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಈ ಸ್ಥಳಗಳ ಅಭಿವೃದ್ಧಿ, ಮೂಲಸೌಕರ್ಯ ಸುಧಾರಣೆ ಮತ್ತು ವ್ಯಾಪಕ ಪ್ರಚಾರದ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೋಡಕೆರೆ ಅಭಿವೃದ್ಧಿ ಯೋಜನೆಯನ್ನು ‘Lungs of Ranebennur’ ಪರಿಕಲ್ಪನೆಯಡಿ ರೂಪಿಸಲಾಗಿದ್ದು, 50,000ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಹಾಗೂ ವಿಜ್ಞಾನ ಉದ್ಯಾನ, ವೀಕ್ಷಣಾ ಕೇಂದ್ರ, Island of Unity, Musical Fountain ಸೇರಿದಂತೆ ಆಕರ್ಷಕ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೂಪಿಸಲಾಗಿದೆ. ರಾಣೇಬೆನ್ನೂರನ್ನು ಕೇವಲ ಕೃಷಿ ಮತ್ತು ವ್ಯಾಪಾರ ಕೇಂದ್ರವಷ್ಟೇ ಅಲ್ಲದೆ, ಪರಿಸರ, ಇತಿಹಾಸ, ಧಾರ್ಮಿಕ ಪರಂಪರೆ ಹಾಗೂ ಪ್ರಕೃತಿ ಆಧಾರಿತ ಪ್ರವಾಸೋದ್ಯಮದ ಸಮಗ್ರ ತಾಣವಾಗಿ ರೂಪಿಸುವುದು ನಮ್ಮ ಸಂಕಲ್ಪವಾಗಿದೆ. ಪ್ರವಾಸೋದ್ಯಮದ ಮೂಲಕ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಿ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ದಿಸೆಯಲ್ಲಿ ನಿರಂತರ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ‘Welcome to the Grassland of India – Ranebennur’ ಎಂಬುದು ನಮ್ಮ ಗುರುತು, ‘Home of the Blackbuck’ ನಮ್ಮ ಹೆಮ್ಮೆ ಹಾಗೂ ‘Explore the Unexplored’ ರಾಣೇಬೆನ್ನೂರಿನ ಅಡಗಿರುವ ಪ್ರಕೃತಿ, ಇತಿಹಾಸ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ನಮ್ಮ ಆಹ್ವಾನವಾಗಿದೆ.
- ಪ್ರಕಾಶ್ ಕೆ. ಕೋಳಿವಾಡ್, ಶಾಸಕರು, ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರ
![]()
ಸಾಕಷ್ಟು ಪ್ರಭೇದದ ಪ್ರಾಣಿ ಪಕ್ಷಿಗಳೂ ಇವೆ. ವಲಸೇ ಪಕ್ಷಿಗಳಿಗೂ ಇದು ವಾಸ ಸ್ಥಳವಾಗುತ್ತಿದೆ. 1998ರ ಸಮಯದಲ್ಲಿ ಇಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯು ಕಂಡುಬಂದಿತ್ತು ಎಂದು ವರದಿಗಳಾಗಿವೆ. ಇಲ್ಲಿದ್ದ ನೀಲಗಿರಿ ಮತ್ತು ಲಂಟಾನ ತೆರವಿಗೆ ಕಾರ್ಯ ಕೈಗೊಳ್ಳಲಾಗಿದೆ. ಕೃಷ್ಣಮೃಗಗಳಿಗೆ ಬೇಕಾದ ವಾತಾವರಣ ಈಗಾಗಲೇ ಇಲ್ಲಿದೆ. ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗಳನ್ನು ಮತ್ತೆ ಈ ತಾಣಕ್ಕೆ ವಾಪಸ್ ತರುವ ನಿಟ್ಟಿನಲ್ಲಿ ಈ ಕೆಲಸಗಳಾಗುತ್ತಿವೆ. ಅರಣ್ಯ ಇಲಾಖೆ ಮತ್ತು ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಇವರು ಹೆಚ್ಚಿನ ಒತ್ತು ನೀಡಿದ್ದರಿಂದ ಎರಡು ವರ್ಷಗಳ ಹಿಂದಷ್ಟೇ ಸಫಾರಿ ವಾಹನವನ್ನು ತರಲಾಗಿದೆ. ಪಕ್ಷಿ-ಪ್ರಾಣಿ ವೀಕ್ಷಣೆಗೆ, ಮತ್ತು ಅವುಗಳ ರಕ್ಷಣೆಗೆ ಇದು ಸಹಾಯಕವಾಗುತ್ತಿದೆ.
-ಸತೀಶ್ ಎಚ್. ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ರಾಣೇಬೆನ್ನೂರು ವಿಭಾಗ
![]()
ರಾಣೇಬೆನ್ನೂರಿನಲ್ಲಿ ಚಾರಣಕ್ಕೆ ಮಲ್ಲಪ್ಪನ ಗುಡ್ಡ, ಐರಣಿ ಫೋರ್ಟ್, ಸಫಾರಿಗಾಗಿ ಕೃಷ್ಣಮೃಗ ಅಭಯಾರಣ್ಯ ಎಲ್ಲವೂ ಇವೆ. ಆದರೆ ಈ ಎಲ್ಲಾ ತಾಣಗಳಲ್ಲೂ ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾಗಿದ್ದು ನಮ್ಮ ನೆಚ್ಚಿನ ಶಾಸಕ ಪ್ರಕಾಶ್ ಕೋಳಿವಾಡ ಅವರ ಸಮಯದಲ್ಲಿ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುವ ಅವರ ಗುಣ ಹಾಗೂ ಅಭಿವೃದ್ಧಿ ಪರವಾಗಿರುವ ಅವರ ಚಿಂತನೆಗಳು ನಮಗೆ ಅಚ್ಚುಮೆಚ್ಚು. ಉದಾಹರಣೆಗೆ ನಮ್ಮ ತಾಂಡದಲ್ಲಿಯೇ ಈ ಮೊದಲು ಒಂದೇ ಒಂದು ಶಾಲೆಯೂ ಇರಲಿಲ್ಲ. ಮೊಟ್ಟಮೊದಲ ಶಾಲೆಯನ್ನು ನಮ್ಮ ತಾಂಡಕ್ಕೆ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಲ್ಲಿ ಶಿಕ್ಷಕರ ವ್ಯವಸ್ಥೆಯು ಅದ್ಭುತವಾಗಿದೆ. ನಮ್ಮಂಥ ಯುವಕರಿಗೆ ಉಪಯೋಗವಾಗಲೆಂದು ಸಾಕಷ್ಟು ಉದ್ಯೋಗ ಮೇಳಗಳನ್ನು ಮಾಡುತ್ತಿದ್ದಾರೆ.
- ಮಾರುತಿ ಆರ್. ಲಮಾಣಿ (ರಾಣೇಬೆನ್ನೂರು ತಾಲೂಕು, ಹುಲ್ಲತ್ತಿ ತಾಂಡ)
![]()
ರಾಣೇಬೆನ್ನೂರಿನ ಶಾಸಕ ಪ್ರಕಾಶ್ ಕೋಳಿವಾಡ ಇವರು ರಾಣೇಬೆನ್ನೂರಿನ ಪ್ರವಾಸಿ ತಾಣಗಳಿಗೆ ಬೆಳಕು ಚೆಲ್ಲಿದ್ದಾರೆ. ಇಲ್ಲಿನ ಕೃಷ್ಣಮೃಗ ಅಭಯಾರಣ್ಯದಲ್ಲಿ ಸಾವಿರಾರು ಕೃಷ್ಣಮೃಗಗಳಿವೆ, ವೈವಿಧ್ಯ ಪ್ರಭೇದಗಳ ಪ್ರಾಣಿ ಪಕ್ಷಿಗಳಿವೆ. ಅವುಗಳನ್ನು ನೋಡಲು ರಾಜ್ಯ-ಹೊರ ರಾಜ್ಯಗಳಿಂದಲೂ ಜನರು ಬರುತ್ತಾರೆ. ಅವರಿಗೂ ನಮಗೂ ಓಡಾಟಕ್ಕೆ ರಸ್ತೆಗಳು ಬೇಕು. ಪ್ರಕಾಶ್ ಕೋಳಿವಾಡ ಸರ್ ಅವರ ಕಾಲದಲ್ಲಿ ರಸ್ತೆ ಕಾಮಗಾರಿಗಳು ಆಗಿರುವುದು ವಿಶೇಷ. ಮುಖ್ಯವಾಗಿ ರಾಣೇಬೆನ್ನೂರಿನಿಂದ ಬೇಲೂರು ಮಾರ್ಗವಾಗಿ ಆಗಿರುವ ರಸ್ತೆ. ಶಾಸಕರು ಶಿಕ್ಷಣ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸಲು ಹೆಚ್ಚು ಶ್ರಮಿಸುತ್ತಿದ್ದಾರೆ. ಇದು ಅವರ ಜನಪ್ರಿಯತೆಗೆ ಕಾರಣವಾಗಿದೆ.
- ಹನುಮಂತಪ್ಪ (ಕೋಣನ ತಂಬಿಗಿ)