ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robbery Case: ಹಾವೇರಿ: ಶಾಸಕರ ಮನೆ ಎದುರೇ ಕಾರಿನ ಗ್ಲಾಸ್ ಒಡೆದು 33 ಲಕ್ಷ ರೂ. ಕಳವು

ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 33 ಲಕ್ಷ ರೂ. ದೋಚಿಕೊಂಡು ಹೋದ ಘಟನೆ ಗುರುವಾರ ಸಂಜೆ ಬಸವೇಶ್ವರ ನಗರದ ಎ ಬ್ಲಾಕ್‌ನ 9ನೇ ಕ್ರಾಸ್‌ನಲ್ಲಿ ನಡೆದಿದೆ. ಉದ್ದಿಮೆದಾರ ಸಂತೋಷ ಈರಯ್ಯ ಹೀರೆಮಠ ಅವರಿಗೆ ಸೇರಿದ ಕಾರಿನಿಂದ ಈ ಕಳವು ನಡೆದಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಶಾಸಕರ ಮನೆ ಎದುರೇ ಕಾರಿನ ಗ್ಲಾಸ್ ಒಡೆದು  33 ಲಕ್ಷ ರೂ. ಕಳವು

ಪೊಲೀಸರಿಂದ ಪರಿಶೀಲನೆ.

Profile Ramesh B Mar 6, 2025 10:44 PM

ಹಾವೇರಿ: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 33 ಲಕ್ಷ ರೂ. ದೋಚಿಕೊಂಡು ಹೋದ ಘಟನೆ ಗುರುವಾರ (ಮಾ. 6) ಸಂಜೆ ಬಸವೇಶ್ವರ ನಗರದ ಎ ಬ್ಲಾಕ್‌ನ 9ನೇ ಕ್ರಾಸ್‌ನಲ್ಲಿ ನಡೆದಿದೆ (Robbery Case). ಉದ್ದಿಮೆದಾರ ಸಂತೋಷ ಈರಯ್ಯ ಹೀರೆಮಠ ಅವರಿಗೆ ಸೇರಿದ ಕಾರಿನಿಂದ ಈ ಕಳವು ನಡೆದಿದೆ. ಬಸವೇಶ್ವರ ನಗರದ ಎ ಬ್ಲಾಕ್‌ನ 9ನೇ ಕ್ರಾಸ್‌ನಲ್ಲಿರುವ ತಮ್ಮ ಮನೆ ಮುಂದೆ ಅವರು ಕಾರು ನಿಲ್ಲಿಸಿದ್ದರು (Haveri News). ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ಬಂದ ಕಳ್ಳನೊಬ್ಬ ಏಕಾಏಕಿ ಕಾರಿನ ಸೈಡ್ ಗ್ಲಾಸ್ ಒಡೆದು ಅದರಲ್ಲಿದ್ದ 33 ಲಕ್ಷ ರೂ. ದೋಚಿಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣ ಅವರ ಮನೆ ಎದುರೇ ಈ ಘಟನೆ ನಡೆದಿರುವುದರಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ನಗರದಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಮಿತಿ ಮೀರುತ್ತಿದ್ದು, ದಿನಂಪ್ರತಿ ಕಳ್ಳತನ ಪ್ರಕರಣಗಳು ನಡೆಯುತ್ತಲೇ ಇವೆ. ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡು ಶೀಘ್ರದಲ್ಲೇ ಕಳ್ಳರನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Robbery Case: ಬೀದರ್ ಎಟಿಎಂ ದರೋಡೆಕೋರರ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ

ಸರ್ಕಾರಿ ವೈದ್ಯನಿಂದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪರಸಪ್ಪ ಚುರ್ಚಿಹಾಳ ವಸತಿ ಗೃಹದಲ್ಲಿ ನೆಲೆಸಿದ್ದು, ತಮ್ಮ ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಗೆ ಲೈಂಗಿಕ ಕರಿಕುಳ ನೀಡಲು ಯತ್ನಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ನೊಂದ ಮಹಿಳೆ ಹಾವೇರಿ ನಗರ ಠಾಣೆಯಲ್ಲಿ ದೂರು ದಾಖಲಿಸಿ ಅಣ್ಣನೊಂದಿಗೆ ಜಿಲ್ಲಾ ಆಸ್ಪತ್ರೆ ಆಗಮಿಸಿ ಪ್ರತಿಭಟನೆ ನಡೆಸಿ ನ್ಯಾಯ ನೀಡುವಂತೆ ಒತ್ತಾಯಿಸಿದ್ದಾರೆ.

ಫೆ. 13ರಂದು ವೈದ್ಯ ಪರಸಪ್ಪ ಚುರ್ಚಿಹಾಳ ಈ ಕೃತ್ಯ ಎಸಗಿದ್ದಾನೆ. ಠಾಣೆಯಲ್ಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಿಳೆ ದೂರು ದಾಖಲಿಸಿದ ಬಳಿಕ ವೈದ್ಯನ ಮೊಬೈಲ್ ಸ್ವಿಚ್ ಆಫ್‌ ಆಗಿದೆ ಎನ್ನಲಾಗಿದೆ.

ಪರಸಪ್ಪ ಚುರ್ಚಿಹಾಳ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಸೊಂಟಕ್ಕೆ ಕೈ ಹಾಕಿ, ಎಳೆದಾಡಿ, ಸೀರೆ ಬಿಚ್ಚಲು ಯತ್ನಿಸಿದ್ದು, ತಪ್ಪಿಸಿಕೊಂಡು ಬಂದಿರುವುದಾಗಿ ಮಹಿಳೆ ತಿಳಿಸಿದ್ದಾರೆ.