ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rudrappa Lamani: ಸರ್ಕಾರಿ ಬಸ್ಸಿಗೆ ಗುದ್ದಿದ ರುದ್ರಪ್ಪ ಲಮಾಣಿ ಎಸ್ಕಾರ್ಟ್‌ ವಾಹನ

ಎಸ್ಕಾರ್ಟ್ ವಾಹನದ (Escort Vehicle) ಚಾಲಕ ಚನ್ನಬಸಪ್ಪ ಅರ್ಚಕ್ ವಿರುದ್ಧ ದೂರು ದಾಖಲಾಗಿದೆ. ಅತೀವೇಗದ ಚಾಲನೆಯಿಂದ ಬಸ್‌ನ ಹಿಂಬದಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಎಸ್ಕಾರ್ಟ್ ವಾಹನದ ಮುಂದಿನ ಭಾಗ ಮತ್ತು ಬಸ್‌ನ ಹಿಂದಿನ ಭಾಗ ಸಂಪೂರ್ಣ ಹಾನಿಯಾಗಿದೆ.

ರುದ್ರಪ್ಪ ಲಮಾಣಿ ಎಸ್ಕಾರ್ಟ್‌ ವಾಹನ

ಹಾವೇರಿ, ಏ.04: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗೆ (KSRTC bus) ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ (Rudrappa Lamani) ಅವರ ಬೆಂಗಾವಲು ವಾಹ‌ನ ಗುದ್ದಿದ್ದು, ಎಸ್ಕಾರ್ಟ್ ವಾಹನದ ಮುಂಭಾಗ ನುಜ್ಜುನುಜ್ಜಾದ ಘಟನೆ ಹಾವೇರಿಯಲ್ಲಿ ನಡೆದಿದೆ. ನಗರದ ವಾಲ್ಮೀಕಿ ವೃತ್ತದಿಂದ ಹೊಸಮನಿ ಸಿದ್ದಪ್ಪ ವೃತ್ತದ ಕಡೆಗೆ ಹೊರಟಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಎಸ್ಕಾರ್ಟ್ ವಾಹನದ (Escort Vehicle) ಚಾಲಕ ಚನ್ನಬಸಪ್ಪ ಅರ್ಚಕ್ ವಿರುದ್ಧ ದೂರು ದಾಖಲಾಗಿದೆ. ಅತೀವೇಗದ ಚಾಲನೆಯಿಂದ ಬಸ್‌ನ ಹಿಂಬದಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಎಸ್ಕಾರ್ಟ್ ವಾಹನದ ಮುಂದಿನ ಭಾಗ ಮತ್ತು ಬಸ್‌ನ ಹಿಂದಿನ ಭಾಗ ಸಂಪೂರ್ಣ ಹಾನಿಯಾಗಿದೆ. ಬಸ್ ಹಾವೇರಿಯಿಂದ ಗದಗಕ್ಕೆ ಹೊರಟಿತ್ತು. KA-27 F0726 ಸಂಖ್ಯೆಯ ಬಸ್ಸಿಗೆ ಹಿಂದಿನಿಂದ ವೇಗವಾಗಿ ಬಂದು ಎಸ್ಕಾರ್ಟ್ ಡಿಕ್ಕಿ ಹೊಡೆಸಿದ್ದಾನೆ. ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕೇರಳದಲ್ಲಿ ಶಶಿ ತರೂರ್ ಗನ್‌ಮ್ಯಾನ್, ಚಾಲಕನ ಮೇಲೆ ಹಲ್ಲೆ

ಹರೀಶ್‌ ಕೇರ

View all posts by this author