ಹಾವೇರಿ: ಜಿಲ್ಲೆಯ ಹಾನಗಲ್‌ನ ಚಿಕ್ಕಾಂಶಿ ಹೊಸೂರು ಗ್ರಾಮದ ಶಾರದಾ ಜ್ಯುವೆಲ್ಲರಿ ಶಾಪ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಹಾವೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ನಡೆದು 48 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ಒಟ್ಟು 31 ತೊಲ ಬಂಗಾರ, 26 ಕೆಜಿ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾವೇರಿ ಹಾಗೂ ಧಾರವಾಡ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಶಿವರಾಜ ಮೋಡಿಕೇರ ಹಾಗೂ ರಮೇಶ್ ಕೊಂಜೆಕುರವರ್ ಬಂಧಿತ ಆರೋಪಿಗಳು. ಇವರು ಹಾವೇರಿ ಜಿಲ್ಲೆ ಮಾತ್ರವಲ್ಲದೆ ಧಾರವಾಡ, ಹುಬ್ಬಳ್ಳಿ ಸೇರಿ ಹಲವು ಕಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಂತರಾಜ್ಯ ಕಳ್ಳರಿಂದ ಸುಮಾರು 1.15 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 31 ತೊಲ (310 ಗ್ರಾಂ) ಚಿನ್ನ, 26 ಕೆ.ಜಿ ಬೆಳ್ಳಿ ಸೇರಿದೆ.
Dubare Elephant Camp: ಕೊಡಗಿನ ದುಬಾರೆಯಲ್ಲಿ ಘೋರ ಘಟನೆ; ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮಹಿಳೆ ಸಾವು!, Video
ಈ ಜಾಲದಲ್ಲಿದ್ದ ಇನ್ನುಳಿದ ನಾಲ್ವರು ಆರೋಪಿಗಳ ಪತ್ತೆಗಾಗಿ ಪೋಲಿಸರಿಂದ ಹುಡುಕಾಟ ಮುಂದುವರಿದಿದೆ. ಆರೋಪಿಗಳು ಶನಿವಾರ ಹಾನಗಲ್‌ನ ಚಿಕ್ಕಾಂಶಿ ಹೊಸೂರು ಶಾರದಾ ಜ್ಯುವೆಲ್ಲರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಾವೇರಿ ಹಾಗೂ ಧಾರವಾಡ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.