ಬೆಂಗಳೂರು: ಒಂಬತ್ತು ವರ್ಷಗಳ ಬಳಿಕ ಐಪಿಎಲ್ ಫೈನಲ್ ಪ್ರವೇಶಿಸಿರುವ ಆರ್‌ಸಿಬಿ, ಈ ಬಾರಿ ಗೆದ್ದು ಚಾಂಪಿಯನ್ ಆಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಹೀಗಾಗಿ ಮಂಗಳವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುವ ಫೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಲಿ ಎಂದು ರಾಜ್ಯದ ರಾಜಕೀಯ, ಸಿನಿಮಾ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಸೇರಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಐಪಿಎಲ್ ಫೈನಲ್ ತಲುಪಿರುವ ಆರ್‌ಸಿಬಿ ತಂಡದ ಗೆಲುವಿಗೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಸಂಗೀತ ನಿರ್ದೇಶಕ ಹಂಸಲೇಕ ಮತ್ತಿತರ ಗಣ್ಯರು ಆರ್‌ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ.
ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ: ಎಚ್‌ಡಿಕೆ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಹಲವಾರು ವರ್ಷಗಳ ನಂತರ ಹಲವು ವರ್ಷಗಳ ನಂತರ ಐಪಿಎಲ್ ಫೈನಲ್‌ಗೆ ತಲುಪಿದೆ. ಈ ಬಾರಿ ಎಲ್ಲರ ನಿರೀಕ್ಷೆಯಂತೆ ಆರ್‌ಸಿಬಿ ಯಶಸ್ವಿಯಾಗಿ ಕಪ್ ಗೆಲ್ಲಲಿ ಎಂದು ಶುಭ ಹಾರೈಸುವೆ ಎಂದು ತಿಳಿಸಿದ್ದಾರೆ.
ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲಲಿ.
— Janata Dal Secular (@JanataDal_S) June 2, 2025
ಐಪಿಎಲ್ ಫೈನಲ್ ತಲುಪಿರುವ ಆರ್‌ಸಿಬಿ ತಂಡದ ಗೆಲುವಿಗೆ ಶುಭಹಾರೈಸಿದ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ @hd_kumaraswamy ರವರು.#RCB #ಕರ್ನಾಟಕ #RCBvsPBKS pic.twitter.com/zdScUxrL5D
ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ‘ನಾನು ಸಂತೋಷವಾಗಿದ್ದೇನೆ. ಬೆಂಗಳೂರಿನ ಹುಡುಗರ ತಂಡ ಆರ್‌ಸಿಬಿ ಅಹಮದಾಬಾದ್‌ನಲ್ಲಿ ಗೆಲ್ಲುತ್ತದೆ. ಬಹಳ ಸಮಯದ ನಂತರ ತಂಡ ಫೈನಲ್ ತಲುಪಿದೆ. ಕರ್ನಾಟಕ ಸರ್ಕಾರ ಮತ್ತು ಜನರು ಅವರ ಗೆಲುವಿಗಾಗಿ ಕಾಯುತ್ತಿದೆʼ ಎಂದು ಹೇಳಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಹಲವಾರು ವರ್ಷಗಳ ನಂತರ ಆರ್‌ಸಿಬಿ ಫೈನಲ್‌ಗೆ ಬಂದಿದೆ. ಕಪ್ ಗೆಲ್ಲಲಿ ಎಂಬುದು ನಮ್ಮೆಲ್ಲರ ನಿರೀಕ್ಷೆಯಾಗಿದೆ. ಆರ್‌ಸಿಬಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿ, ಪಂಜಾಬ್ ವಿರುದ್ಧ ಗೆದ್ದ ನಮ್ಮ RCB ಹುಡುಗರು ಫೈನಲ್ ಪ್ರವೇಶಿಸಿದ್ದಾರೆ. IPL 2025ರ ಆವೃತ್ತಿಯ ಫೈನಲ್ ನಲ್ಲಿ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು! RCB ಅಭಿಮಾನಿಗಳ ಸುಮಾರು ಎರಡು ದಶಕಗಳ ದೀರ್ಘ ಕಾಲದ ಕನಸು ಈ ಬಾರಿ ನನಸಾಗಲಿ, ಕಪ್ ನಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ. ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಎಂದು ತಿಳಿಸಿದ್ದಾರೆ.
ಪಂಜಾಬ್ ವಿರುದ್ಧ ಗೆದ್ದ ನಮ್ಮ RCB ಹುಡುಗರು ಫೈನಲ್ ಪ್ರವೇಶಿಸಿದ್ದಾರೆ.
— M B Patil (@MBPatil) May 29, 2025
IPL 2025ರ ಆವೃತ್ತಿಯ ಫೈನಲ್ ನಲ್ಲಿ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು!#RCB ಅಭಿಮಾನಿಗಳ ಸುಮಾರು ಎರಡು ದಶಕಗಳ ದೀರ್ಘ ಕಾಲದ ಕನಸು ಈ ಬಾರಿ ನನಸಾಗಲಿ, ಕಪ್ ನಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ.
ನಮ್ಮ ಬೆಂಗಳೂರು… pic.twitter.com/qIFfoIBnTr
ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿ, ನಮ್ಮ ಕನ್ನಡದ ತಂಡ ಈ ಬಾರಿ ಕಪ್ ಗೆಲ್ಲುತ್ತೆ. ಈ ಸಲ್ ಕಪ್ ನಮ್ದೆ ಎಂದು ಜೋಶ್‌ನಿಂದ ಹೇಳಿಕೊಂಡಿದ್ದಾರೆ. ಇನ್ನೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಕಿಕೆಟ್‌ನ ದೊಡ್ಡ ಅಭಿಮಾನಿ, ಈ ಬಾರಿ ಫೈನಲ್‌ನಲ್ಲಿ ಆರ್‌ಸಿಬಿ ಆಟಗಾರರಿಗೆ ದೇವರು ಶಕ್ತಿ ಕೊಡಲಿ ಎಂದು ಪ್ರಾರ್ಥನೆ ಮಾಡ್ತೀನಿ. ಈ ಬಾರಿ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲರೂ ತುಂಬಾ ಚೆನ್ನಾಗಿ ಆಡಿದ್ದಾರೆ. ತಾಯಿ ಚಾಮುಂಡೇಶ್ವರಿಯಲ್ಲಿ ನಾನು ವಿಶೇಷ ಪ್ರಾರ್ಥನೆ ಮಾಡುತ್ತೇನೆ. ಈ ಸಲ ಕಪ್ ನಮ್ದೇ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | RCB vs PBKS Final: ಫೈನಲ್ ಕಂಟಕದಿಂದ ಪಾರಾಗಿ ಕಪ್ ಗೆಲ್ಲಲಿ ಆರ್‌ಸಿಬಿ
ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿ, ಆರ್‌ಸಿಬಿ ಈ ಬಾರಿ ಐಪಿಎಲ್ ಮ್ಯಾಚ್ ಗೆದ್ದೇ ಗೆಲ್ಲುತ್ತೆ. ಈ ಹಿಂದೆ ತಪ್ಪು ಮಾಡಿದ್ದೇವೆ. ಈಗ ತಪ್ಪು ಆಗೋದಿಲ್ಲ, ಈ ಸಲ ಕಪ್ ನಮ್ಮದೇ ಎಂದಿದ್ದಾರೆ.