ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hosatodaku: ಮಟನ್‌ ಬೆಲೆ 1500 ರೂ., ಆದರೂ ಹೊಸತೊಡಕಿಗಾಗಿ ಮಾಂಸದಂಗಡಿಗಳ ಮುಂದೆ ಕ್ಯೂ

ಹೊಸತೊಡಕು ಹಿನ್ನೆಲೆ ಇಂದು ಬೆಳಗಿನ ಜಾವ 4 ಗಂಟೆಗೇ ಮಟನ್ ಸ್ಟಾಲ್ ಓಪನ್ ಆಗಿದ್ದು, ಮಾಂಸಪ್ರಿಯರು ನಸುಕಿನ ಜಾವದಲ್ಲೇ ಎದ್ದು ಬಂದು ಮಟನ್‌ ಖರೀದಿಗೆ ಮುಗಿಬಿದ್ದಿದ್ದಾರೆ. ನೂಕುನುಗ್ಗಲು ತಪ್ಪಿಸಲು ಮಾಲೀಕರು ಬರೋಬ್ಬರಿ ನಾಲ್ಕೈದು ಕೌಂಟರ್‌ಗಳನ್ನು ತೆರೆದು ಮಟನ್ ವಿತರಣೆ ಮಾಡುತ್ತಿದ್ದಾರೆ.

ಮಾಂಸದಂಗಡಿ ಮುಂದೆ ಜನ

ಬೆಂಗಳೂರು, ಮಾ.20: ನಿನ್ನೆಯಷ್ಟೇ ಯುಗಾದಿ ಹಬ್ಬವನ್ನು (ugadi festival) ರಾಜ್ಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಇಂದು ಹೊಸತೊಡಕು (Hosatodaku) ಆಚರಣೆಗೆ ಜನರು ಭರ್ಜರಿ ಮಾಂಸ (meat) ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ದೇವನಹಳ್ಳಿ, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವು ನಗರಗಳಲ್ಲಿ ಮಾಂಸದಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿವೆ. ಹೊಸತೊಡಕಿನ ಹಿನ್ನೆಲೆಯಲ್ಲಿ, ಮಟನ್ (mutton) ಬೆಲೆ ಒಂದು ಕೆಜಿಗೆ 1000 ರೂ.ನಿಂದ 1500 ರೂ. ವರೆಗೆ ಏರಿಕೆ ಕಂಡಿದೆ. ಬೆಲೆ ಎಷ್ಟೇ ಹೆಚ್ಚಿದ್ದರೂ, ಜನರು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಪೂರೈಸಲು ಉತ್ಸಾಹದಿಂದ ಮಾಂಸ ಖರೀದಿಸುತ್ತಿದ್ದಾರೆ.

ಬೆಂಗಳೂರಿನ ಪಾಪಣ್ಣ ಮಟನ್ ಸ್ಟಾಲ್, ದೇವನಹಳ್ಳಿಯ ಎಲಿಯೂರು ಮತ್ತು ಮೈಸೂರಿನ ಕನ್ನೇಗೌಡನ ಕೊಪ್ಪಲ್ ಸೇರಿದಂತೆ ಪ್ರಮುಖ ಮಾಂಸದ ಮಳಿಗೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಮಟನ್ ಖರೀದಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರತಿ ವರ್ಷದಂತೆ, ಈ ವರ್ಷವೂ ಕೂಡ ಹೊಸತೊಡಕಿಗೆ ಮಾಂಸದ ಬೇಡಿಕೆ ಹೆಚ್ಚಿದ್ದು, ಜನರು ಸಂಭ್ರಮದಿಂದ ಖರೀದಿಯಲ್ಲಿ ನಿರತರಾಗಿದ್ದಾರೆ.

ಹೊಸ ತೊಡಕು ಮತ್ತು ರಂಜಾನ್ ಹಿನ್ನೆಲೆಯಲ್ಲಿಯೂ ಮಾಂಸಕ್ಕೆ ಭಾರಿ ಬೇಡಿಕೆ ಬಂದಿದೆ. ಇದರಂತೆ ಕುರಿ, ಮೇಕೆಗಳ ಬೆಲೆ ಹೆಚ್ಚಾಗಿದೆ. ಪ್ರಸಿದ್ಧ ಬನ್ನೂರು ಕುರಿ ಮಾಂಸಕ್ಕೂ ಭಾರೀ ಬೇಡಿಕೆ ಬಂದಿದೆ. ವಿಶೇಷವಾಗಿ ಇಂದು, ಗುಡ್ಡೆ ಮಾಂಸ ಸವಿಯುವುದು ವಾಡಿಕೆ. ಸಾಮಾನ್ಯವಾಗಿ, ಕುರಿ ಮತ್ತು ಮೇಕೆಗಳನ್ನು ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ತಂದು ಮಾರಾಟ ಮಾಡಲಾಗುತ್ತದೆ.

ಯುಗಾದಿ ವರ್ಷ ಭವಿಷ್ಯ: ಗೃಹಗಳ ಸಂಚಾರದಲ್ಲಿ ವೃಷಭ ರಾಶಿಗೆ ಈ ವರ್ಷ ಸಿಹಿಯೇ ತುಂಬಲಿದೆ

ಗುಡ್ಡೆ ಮಟನ್ ಮಾಂಸಕ್ಕೆ ಕೆಜಿಗೆ 1000-1200 ಆಗಿದ್ದು, ವರ್ಷಕ್ಕೊಮ್ಮೆ ಹಬ್ಬ ಬರುವುದರಿಂದ ಬೆಲೆ ಜಾಸ್ತಿ ಆದರೂ ಹಬ್ಬ ಮಾಡಲೇಬೇಕೆಂದು ಜನರು ಸಾಲಿನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ. ಹೊಸತೊಡಕು ಹಿನ್ನೆಲೆ ಇಂದು ಬೆಳಗಿನ ಜಾವ 4 ಗಂಟೆಗೇ ಮಟನ್ ಸ್ಟಾಲ್ ಓಪನ್ ಆಗಿದ್ದು, ಮಾಂಸಪ್ರಿಯರು ನಸುಕಿನ ಜಾವದಲ್ಲೇ ಎದ್ದು ಬಂದು ಮಟನ್‌ ಖರೀದಿಗೆ ಮುಗಿಬಿದ್ದಿದ್ದಾರೆ. ನೂಕುನುಗ್ಗಲು ತಪ್ಪಿಸಲು ಮಾಲೀಕರು ಬರೋಬ್ಬರಿ ನಾಲ್ಕೈದು ಕೌಂಟರ್‌ಗಳನ್ನು ತೆರೆದು ಮಟನ್ ವಿತರಣೆ ಮಾಡುತ್ತಿದ್ದಾರೆ.

ಹರೀಶ್‌ ಕೇರ

View all posts by this author