ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KN Rajanna: ಹನಿಟ್ರ್ಯಾಪ್‌; ಗೃಹ ಮಂತ್ರಿಗೆ ಲಿಖಿತ ದೂರು ಕೊಡ್ತೀನಿ ಎಂದ ಸಚಿವ ಕೆ. ಎನ್. ರಾಜಣ್ಣ

KN Rajanna: ಸತೀಶ್ ಜಾರಕಿಹೊಳಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಯಾರು ಮಾಡಿದ್ದಾರೆ ಅಂತ ನಾನು ಹೇಳಲಿಕ್ಕೆ ಸಾಧ್ಯವಿಲ್ಲ. ಒಂದೊಂದು ಉದ್ದೇಶ ಇಟ್ಟುಕೊಂಡು ಮಾಡಿರ್ತಾರೆ. ಇದರ ಬಗ್ಗೆ ತನಿಖೆಯಲ್ಲಿ ಗೊತ್ತಾಗಬೇಕು ಎಂದು ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದ್ದಾರೆ.

ಗೃಹ ಮಂತ್ರಿಗೆ ಲಿಖಿತ ದೂರು ಕೊಡ್ತೀನಿ ಎಂದ ಸಚಿವ ಕೆ. ಎನ್. ರಾಜಣ್ಣ

Profile Prabhakara R Mar 21, 2025 10:29 PM

ತುಮಕೂರು: ಹನಿಟ್ರ್ಯಾಪ್ ವಿಚಾರವಾಗಿ ಗೃಹ ಮಂತ್ರಿಗೆ ಲಿಖಿತವಾಗಿ ದೂರು ಕೊಡುತ್ತೇನೆ. ಹನಿಟ್ರ್ಯಾಪ್ ವಿಚಾರವಾಗಿ ಸಿಎಂ ಅನ್ನು ಭೇಟಿ ಮಾಡಿಲ್ಲ. ಮೂರು ತಿಂಗಳಿಂದ ಅಲ್ಲ, ಒಂದೂವರೆ ತಿಂಗಳಿಂದ ಪ್ರಯತ್ನ ನಡೆಯುತ್ತಿದೆ. ಏನೇನು ಕೃತ್ಯ ನಡೆದಿದೆ ಅಂತ ವಿವರವಾಗಿ ಹೇಳಿಕೆಯಲ್ಲಿ ಕೊಡ್ತೀನಿ. ಎಲ್ಲೋ ಆಗಿದೆ, ಆಗಿರೋದನ್ನೆಲ್ಲಾ ಹೇಳ್ತೀನಿ ಎಂದು ಸಹಕಾರ ಸಚಿವ ರಾಜಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನಾನೊಂದು ಹೇಳಿಕೆ ಮಾಡಿದ್ದೇನೆ. ಅದಕ್ಕೆ ಬದ್ಧವಾಗಿದ್ದೇವೆ. ಹನಿಟ್ರ್ಯಾಪ್ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ ಅದಕ್ಕೆ ಗೃಹ ಮಂತ್ರಿಗಳನ್ನ ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡ್ತೀನಿ ಎಂದರು.

ಸತೀಶ್ ಜಾರಕಿಹೊಳಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಯಾರು ಮಾಡಿದ್ದಾರೆ ಅಂತ ನಾನು ಹೇಳಲಿಕ್ಕೆ ಸಾಧ್ಯವಿಲ್ಲ. ಒಂದೊಂದು ಉದ್ದೇಶ ಇಟ್ಟುಕೊಂಡು ಮಾಡಿರ್ತಾರೆ. ನನ್ನ ಮೇಲಿನ ಉದ್ದೇಶ ಏನಂತ ಗೊತ್ತಿಲ್ಲ. ತನಿಖೆಯಲ್ಲಿ ಗೊತ್ತಾಗಬೇಕು. ತನಿಖೆಯ ಸ್ವರೂಪ ಸರ್ಕಾರಕ್ಕೆ ಬಿಟ್ಟ ವಿಚಾರ.ಗೃಹ ಸಚಿವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ತನಿಖೆ ಮಾಡಿದ್ರೆ ಸೂಕ್ತ ಎಂದರು.

ಡಿಕೆಶಿ ಹಲೋ ಅಂದಾಗ ಆ ಕಡೆಯಿಂದ ಹಲೋ ಅಂತಾರೆ ಅನ್ನೋ‌ ಹೇಳಿಕೆ ವಿಚಾರವಾಗಿ ಮಾತನಾಡಿ, ಹೌದಾ ಅದು ನನಗೆ ಗೊತ್ತಿಲ್ಲ, ಅವರವರ ಅನುಭವ ಅವರು ಹೇಳ್ತಾರೆ. ನಾನು ಯಾವತ್ತೂ ಯಾರಿಗೂ ಕೆಟ್ಟದು ಬಯಸಿಲ್ಲ. ಕೆಟ್ಟದು ಬಯಸುತ್ತಾರೋ ಅವರು ಉದ್ಧಾರ ಆಗಿಲ್ಲ, ನೂರಾರು ಉದಾಹರಣೆಗಳಿವೆ. ಬೇರೆಯವರಿಗೆ ಕೆಟ್ಟದು ಮಾಡಿ ನನಗೇನು ಲಾಭ ಆಗಬೇಕಿಲ್ಲ. ನಮಗಾದ ರೀತಿ ಬೇರೆಯವರಿಗೆ ಆಗಬಾರದು. ನಾನು ಹೋರಾಟ ಮಾಡಿಕೊಂಡು ಜನ ಮನ್ನಣೆ ಗಳಿಸಿಕೊಂಡು ಬೆಳೆದಿದ್ದು, ಬೆಳೆದ ಮೇಲೆ ಈ ರೀತಿ ತೇಜೋವಧೆ ಮಾಡೋದು ಯಾರಿಗೂ ಭೂಷಣ ಬರೋದಲ್ಲ. ನನಗೆ ಮಾಟ ಮಂತ್ರ ನಿಂಬೆಹಣ್ಣು, ಹೂ ಹಾಕೋದು, ಮೊಳೆ ಹಾಕೋದು ಅದೆಲ್ಲಾ ಮಾಡ್ತಾರೆ. ಯಾರು ಇದರಲ್ಲಿ ಭಾಗಿ ಆಗ್ತಾರೆ ಅನ್ನೋದನ್ನ ಪತ್ತೆ ಹಚ್ಚಬೇಕು. ಅವರಿಗೆ ಶಿಕ್ಷೆ ‌ಕೊಡಿ ಅಂತ ಒತ್ತಾಯವಲ್ಲ, ಮುಂದೆ ಈ ರೀತಿ ಆಗಬಾರದು ಅನ್ನೋದು ನನ್ನ ಆಗ್ರಹ ಎಂದರು.

ವಿಧಾನಸಭೆಯಲ್ಲಿ ಬಜೆಟ್ ಅಧಿವೇಶನ ಮುಕ್ತಾಯವಾಗಿದೆ. ಆದರೆ ಇದು ಅಂತ್ಯಗೊಂಡ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕಿಯಾಗಿದೆ. ರಾಜ್ಯದ ಜನರಿಗೆ ಒಳ್ಳೆದಾಗ್ಲಿ ಎಂಬ ಆಶಯದಿಂದ ನಾವು ಹೊರಗೆ ಬಂದಿದ್ದೇವೆ. ಈ ಅಧಿವೇಶನ ಯಾರಿಗೂ ಗೌರವ ತರದ ರೀತಿಯಲ್ಲಿ ನಡೆದಿದೆ ಎಂದರು.

ಈ ಸುದ್ದಿಯನ್ನೂ ಓದಿ | Pralhad Joshi: ಹನಿ ಟ್ರ್ಯಾಪ್ ಪ್ರಕರಣ ಸಿಬಿಐಗೆ ವಹಿಸಲಿ: ಪ್ರಲ್ಹಾದ್‌ ಜೋಶಿ ಆಗ್ರಹ

ಬಿಜೆಪಿ ಶಿಸ್ತಿನ ಪಕ್ಷ ಅಂತಾರೆ. ಆದ್ರೆ ಸಿದ್ದರಾಮಯ್ಯಗೆ ಹಾಗೂ ಸ್ಪೀಕರಿಗೆ ಅಗೌರವ ತರೋದು ಒಳ್ಳೆಯದಲ್ಲ. ನಮ್ಮದು ಸಿದ್ದಾಂತದ ಪಕ್ಷ ಅಂತ ಭಾಷಣ ಮಾಡ್ತಾರೆ. ಆದರೆ ಗೂಂಡಾ ವರ್ತನೆ ನೋಡಿದರೆ, ಅವರ ಹೈಕಮಾಂಡ್ ಬುದ್ಧಿವಾದ ಹೇಳಬೇಕು. ಇಂದಿನ ಸದನದಲ್ಲಿ ಅಹಿತಕರ ನಡವಳಿಕೆ ಯಾರಿಗೂ ಗೌರವ ತರುವ ಕೃತ್ಯವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.