ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Iran Israel War: ಇದುವರೆಗೂ 5 ವಿಮಾನಗಳಲ್ಲಿ 1500 ಮಂದಿ ಗಲ್ಫ್‌ನಿಂದ ಬೆಂಗಳೂರಿಗೆ

ಕಳೆದ ಸೋಮವಾರ 2ನೇ ತಾರೀಕು ರಾತ್ರಿ 9.40ಕ್ಕೆ ಬಂದ ಮೊದಲ ಫ್ಲೈಟ್‌ನಲ್ಲಿ 213 ಜನ ವಾಪಸ್ ಆಗಿದ್ದರೆ, 3ನೇ ತಾರೀಕು ಮುಂಜಾನೆ 3 ಗಂಟೆಗೆ ಬಂದ 2ನೇ ಫ್ಲೈಟ್‌ನಲ್ಲಿ 490 ಜನ, ಹಾಗೇ ಅದೇ ದಿನ ಸಂಜೆ 7 ಗಂಟೆಗೆ ಬಂದ 3ನೇ ಫ್ಲೈಟ್‌ನಲ್ಲಿ 350 ಮಂದಿ, ನಾಲ್ಕನೇ ತಾರೀಕು ಮಧ್ಯರಾತ್ರಿ 1 ಗಂಟೆಗೆ ಬಂದ ಫ್ಲೈಟ್‌ನಲ್ಲಿ 200 ಜನ, ಉಳಿದಂತೆ ಬುಧವಾರ ಸಂಜೆ 7 ಗಂಟೆಗೆ ಬಂದ ವಿಮಾನದಲ್ಲಿ 246 ಪ್ರಯಾಣಿಕರು ವಾಪಸಾಗಿದ್ದು ಈವರೆಗೆ 1500 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು, ಮಾರ್ಚ್ 5: ಮಂಗಳವಾರ ರಾತ್ರಿ 5ನೇ ವಿಮಾನದಲ್ಲಿ 246 ಮಂದಿ ಗಲ್ಫ್‌ನಿಂದ (gulf) ತಾಯ್ನಾಡಿಗೆ ಬಂದಿಳಿದಿದ್ದಾರೆ. ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿಯಿಂದ (Iran Israel War) ದುಬೈ, ಅಬುಧಾಬಿ, ಜೆದ್ದಾ, ದೋಹಾ ಸೇರಿ ಹಲವೆಡೆ ವಿಮಾನ ನಿಲ್ದಾಣಗಳು (Airports) ಬಂದ್ ಆಗಿವೆ. ಅಲ್ಲಿನ ಏರ್‌ಪೋರ್ಟ್‌ಗಳಲ್ಲೇ ಸಿಕ್ಕಿಹಾಕಿರುವ ಆಗಿರುವ ಸಾವಿರಾರು ಜನ ಪ್ರಯಾಣಿಕರನ್ನು ಕಳೆದ ಸೋಮವಾರ ರಾತ್ರಿಯಿಂದ ಎಮಿರೇಟ್ಸ್, ಎತಿಹಾದ್ ಮತ್ತು ಇಂಡಿಗೋ ಏರ್ಲೈನ್ಸ್‌ಗಳ ಮೂಲಕ ಬೆಂಗಳೂರಿಗೆ (Bangalore) ಕರೆತರಲಾಗುತ್ತಿದೆ.

ದಿನಕ್ಕೆ ಒಂದು ಅಥವಾ ಎರಡು ವಿಮಾನಗಳು ದುಬೈ ಮತ್ತು ಅಬುಧಾಬಿಯಿಂದ ಬೆಂಗಳೂರಿಗೆ ಟೇಕ್ ಆಫ್ ಆಗುತ್ತಿವೆ. ತವರಿಗೆ ಬರಲು ನಾ ಮುಂದು ತಾ ಮುಂದು ಎಂದು ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಅಮೆರಿಕಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಫ್ಲೈಟ್‌ ಕ್ಯಾನ್ಸಲ್‌ ಆಗಿದ್ದರಿಂದ ದುಬೈನಲ್ಲೇ ಸಿಲುಕಿಕೊಂಡಿದ್ದರು. ಇದೀಗ ಯುಎಸ್‌ಗೆ ತೆರಳದೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಮತ್ತೊಂದೆಡೆ ಯುಎಸ್‌ನಿಂದ ಬಂದು ದುಬೈನಲ್ಲಿ 2 ದಿನ ಪ್ರವಾಸ ಮುಗಿಸಿ ಬರುವ ಪ್ಲ್ಯಾನ್‌ನಲ್ಲಿದ್ದವರು ವಿಧಿಯಿಲ್ಲದೆ ಬೆಂಗಳೂರಿಗೆ ಮರಳಿದ್ದಾರೆ.

ಕಳೆದ ಸೋಮವಾರ 2ನೇ ತಾರೀಕು ರಾತ್ರಿ 9.40ಕ್ಕೆ ಬಂದ ಮೊದಲ ಫ್ಲೈಟ್‌ನಲ್ಲಿ 213 ಜನ ವಾಪಸ್ ಆಗಿದ್ದರೆ, 3ನೇ ತಾರೀಕು ಮುಂಜಾನೆ 3 ಗಂಟೆಗೆಬಂದ 2ನೇ ಫ್ಲೈಟ್‌ನಲ್ಲಿ 490 ಜನ, ಹಾಗೇ ಅದೇ ದಿನ ಸಂಜೆ 7 ಗಂಟೆಗೆ ಬಂದ 3ನೇ ಫ್ಲೈಟ್‌ನಲ್ಲಿ 350 ಮಂದಿ, ನಾಲ್ಕನೇ ತಾರೀಕು ಮಧ್ಯರಾತ್ರಿ 1 ಗಂಟೆಗೆ ಬಂದ ಫ್ಲೈಟ್‌ನಲ್ಲಿ 200 ಜನ, ಉಳಿದಂತೆ ಬುಧವಾರ ಸಂಜೆ 7 ಗಂಟೆಗೆ ಬಂದ ವಿಮಾನದಲ್ಲಿ 246 ಪ್ರಯಾಣಿಕರು ವಾಪಸಾಗಿದ್ದು ಈವರೆಗೆ 1500 ಮಂದಿ ಸುರಕ್ಷಿತವಾಗಿ ಮರಳಿದ್ದಾರೆ.

ಸೀಮಿತ ವಿಮಾನಗಳು ದುಬೈನಿಂದ ಬರುತ್ತಿರುವುದರಿಂದ ಇನ್ನೂ ಸಾಕಷ್ಟು ಕನ್ನಡಿಗರು ಅಲ್ಲಿನ ಏರ್‌ಪೋರ್ಟ್‌ಗಳಲ್ಲೇ ಸಿಲುಕಿದ್ದಾರೆ.

ಭಯದ ವಾತಾವರಣ, ಇಂಟರ್‌ನೆಟ್ ಇಲ್ಲ; ಅಶಾಂತಿಯ ನಡುವೆ ಇರಾನ್‌ನಿಂದ ತಾಯ್ನಾಡಿಗೆ ಮರಳಿದ ಭಾರತೀಯರು ಹೇಳಿದ್ದೇನು?

ಹರೀಶ್‌ ಕೇರ

View all posts by this author