ಬೆಂಗಳೂರು, ಜು. 15: ರಾಜ್ಯದಲ್ಲಿ ಮತರಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ –2026 (SIR 2026) ಪ್ರಕ್ರಿಯೆ ಆರಂಭವಾಗಿದೆ. ಪ್ರಕ್ರಿಯೆ ವೇಳೆ ಸಲ್ಲಿಸಬೇಕಾದ ಮಾಹಿತಿ ಬಗ್ಗೆ ಒಂದಷ್ಟು ಗೊಂದಲ ಮೂಡಿದ್ದು, ಚುನಾವಣಾ ಆಯೋಗ ಇದನ್ನು ನಿವಾರಿಸಲು ಮುಂದಾಗಿದೆ. ಎಸ್‌ಐಆರ್ ಪ್ರಕ್ರಿಯೆ ವೇಳೆ 2002ರ ವಿವರ/ಮಾಹಿತಿ ನಮೂದಿಸುವುದು ಕಡ್ಡಾಯವಲ್ಲ ಎಂದು ಮತದಾರರ ನೋಂದಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ʼʼಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಗಣತಿ ನಮೂನೆ ವಿತರಿಸಿ ಹಿಂಪಡೆಯುವಾಗ 2002ರ ಮಾಹಿತಿ ನಮೂದಿಸುವುದು ಕಡ್ಡಾಯವಲ್ಲʼʼ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ʼʼಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಾಮಾಣಿತ ಕಾರ್ಯಾಚರಣಾ ವಿಧಾನ (SOP) ಅನುಸಾರ ಮತಗಟ್ಟೆ ಮಟ್ಟದ ಅಧಿಕಾರಿಗಳು ಗಣತಿ ಅಮೂನೆಗಳನ್ನು ವಿತರಿಸಿ, ಹಿಂಪಡೆಯುವಾಗ 2002ರ ವಿವರ ನಮೂದಿಸುವುದು ಕಡ್ಡಾಯವಲ್ಲ. ಆದ್ದರಿಂದ ಸಂಬಂಧಪಟ್ಟ ಮತದಾರರು 3ನೇ ಕಾಲಂನ ಹಾಲಿ ಮಾಹಿತಿಗಳನ್ನು ಭರ್ತಿ ಮಾಡಿ, ಸಹಿ ಸ್ವೀಕರಿಸಬೇಕುʼʼ ಎಂದು ಸೂಚಿಸಲಾಗಿದೆ.
ʼʼಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸಹ ಮಾಧ್ಯಮಗಳಲ್ಲಿ ತಿಳಿಸಿದ್ದಾರೆ. ಆದ್ದರಿಂದ ಮತದಾರರು ಯಾವುದೇ ಕಾರಣಕ್ಕೂ 2002ರ ಮಾಹಿತಿ ತುಂಬುದು ಕಡ್ಡಾಯವಲ್ಲʼʼ ಎಂದು ಮತದಾರರ ನೋಂದಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬಿಎಲ್‌ಒಗಳು ಎಸ್‌ಐಆರ್ ಅಕ್ರಮದಲ್ಲಿ ಸಿಲುಕಿಕೊಳ್ಳಬೇಡಿ: ಪ್ರಲ್ಹಾದ್ ಜೋಶಿ
ಹೆಸರು ಸೇರ್ಪಡೆಗೆ ಅವಕಾಶ
2002ರ ಜನವರಿ 1ರೊಳಗೆ ಜನಿಸಿದ ಅರ್ಹ ನಾಗರಿಕ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಸ್ಥಳಾಂತರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ನಮೂನೆಗಳಲ್ಲಿ ಸಲ್ಲಿಸಬಹುದಾಗಿದೆ. ಈ ಕಾರ್ಯವು ಆಗಸ್ಟ್ 5ರವರೆಗೆ ನಡೆಯಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆ ನೀಡಬೇಕಾಗುತ್ತದೆ. ಮತದಾರರ ಪಟ್ಟಿಯನ್ನು ನಿಖರ ಹಾಗೂ ಪಾರದರ್ಶಕವಾಗಿ ಸಿದ್ಧಪಡಿಸುವ ಉದ್ದೇಶದಿಂದ ಸಾರ್ವಜನಿಕರು ಸರಿಯಾದ ಮಾಹಿತಿಯನ್ನು ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊಸ ಮತದಾರರ ನೋಂದಣಿಗೆ ಪೋಷಕರ ಎಸ್‌ಐಆರ್ ಮಾಹಿತಿ ಕಡ್ಡಾಯ
ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಬೇಕಾದರೆ ಪೋಷಕರ ಎಸ್‌ಐಆರ್ ವಿವರಗಳನ್ನು ಸಲ್ಲಿಸುವುದು ಇನ್ನುಮುಂದೆ ಕಡ್ಡಾಯವಾಗಿದೆ. ಕರ್ನಾಟಕದಲ್ಲಿ ಈ ಹೊಸ ನಿಯಮ ಜಾರಿಗೆ ತರಲಾಗಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಬಯಸುವ ಎಲ್ಲ ಹೊಸ ಅರ್ಜಿದಾರರಿಗೆ ಇದು ಕಡ್ಡಾಯ ಎನಿಸಿಕೊಂಡಿದೆ. ಹೊಸ ಮತದಾರರ ನೋಂದಣಿಗೆ ಪೋಷಕರ ಎಸ್‌ಐಆರ್ ಮಾಹಿತಿ ಕಡ್ಡಾಯ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದೆ.
ಎಸ್‌ಐಆರ್ ಅಕ್ರಮ; ತನಿಖೆಗೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ರಾಜ್ಯ ಬಿಜೆಪಿ ದೂರು
ಫಾರಂ 6 ಅರ್ಜಿ
ಮೊದಲ ಬಾರಿಗೆ ಮತದಾನ ಮಾಡುವವರು ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಬಯಸುವವರು ಪರಿಷ್ಕೃತ ಫಾರಂ 6 ಅರ್ಜಿಯಲ್ಲಿ ಇನ್ನು ಮುಂದೆ ಪೋಷಕರ ಎಸ್‌ಐಆರ್ ವಿವರಗಳನ್ನು ನೀಡಬೇಕಾಗುತ್ತದೆ. ಹೊಸ ಅರ್ಜಿದಾರರು ಹಾಗೂ ಪಟ್ಟಿಯಿಂದ ಹೆಸರು ಡಿಲೀಟ್ ಆಗಿ ಹೊಸದಾಗಿ ನೋಂದಾಯಿಸಿಕೊಳ್ಳುವವರು ಫಾರಂ 6 ಭರ್ತಿ ಮಾಡುವುದು ಕಡ್ಡಾಯ. ವಿಳಾಸ/ಕ್ಷೇತ್ರ ಬದಲಾಯಿಸುವ ಮತದಾರರಿಗೂ ಇದು ಅನ್ವಯವಾಗಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೂ ಈ ಘೋಷಣಾ ಪತ್ರ ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.