ಬೆಂಗಳೂರು, ಸೆ.29: ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿದೆ. ಬೈಕ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಾದ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್‌ಗಳು (Jawa, Yezdi and BSA Bikes) ಹಬ್ಬದ ಸಂಭ್ರಮಕ್ಕಾಗಿ ತಮ್ಮ ಬೈಕ್‌ಗಳಲ್ಲಿ ಭರ್ಜರಿ ಅಪ್‌ಡೇಟ್, ಹೊಸ ಬಣ್ಣಗಳು ಮತ್ತು ಆಕರ್ಷಕ ಲುಕ್ ಅನ್ನು ಪರಿಚಯಿಸಿವೆ.
'ಕ್ಲಾಸಿಕ್ ಲೆಜೆಂಡ್ಸ್' ಕಂಪನಿಯ ಅಡಿಯಲಿರುವ ಈ ಮೂರೂ ಬ್ರ್ಯಾಂಡ್‌ಗಳು, ತಮ್ಮ ಹಳೆಯ ಕ್ಲಾಸಿಕ್ ಪರಂಪರೆಯನ್ನು ಉಳಿಸಿಕೊಂಡೇ, ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ. 2026ನೇ ವರ್ಷವು ಈ ಮೂರೂ ಬ್ರ್ಯಾಂಡ್‌ಗಳಿಗೆ ಅತ್ಯಂತ ಯಶಸ್ವಿ ವರ್ಷವಾಗಿದ್ದು, ಬೈಕ್‌ಗಳ ಹೊಸ ಫೀಚರ್‌ಗಳೇನು ಎಂಬ ಡಿಟೇಲ್ಸ್ ಇಲ್ಲಿದೆ.
ಯೆಜ್ಡಿ - ಸಾಹಸಿಗರಿಗಾಗಿ ಹೊಸ ಬಣ್ಣಗಳು!
ಯೆಜ್ಡಿ ಬ್ರ್ಯಾಂಡ್ ತನ್ನ 'ಅನ್‌ಟೇಮ್ಡ್ ಟ್ರಿನಿಟಿ' ಸರಣಿಯನ್ನು ಹೊಸದಾಗಿ ರಿಫ್ರೆಶ್ ಮಾಡಿದೆ. ಈ ವರ್ಷ ಏಪ್ರಿಲ್‌ನಲ್ಲಿ ಯೆಜ್ಡಿ ಸ್ಕ್ರ್ಯಾಂಬ್ಲರ್ ಲಾಂಚ್ ಆಗಿದ್ದರೆ, ಜುಲೈನಲ್ಲಿ ಸಂಪೂರ್ಣ ಸರಣಿಯನ್ನು ಮೇಲ್ದರ್ಜೆಗೇರಿಸಲಾಗಿದೆ. ಹೊಸ ಆಕರ್ಷಣೆಯಾಗಿ ಇದೀಗ ಯೆಜ್ಡಿ ಅಡ್ವೆಂಚರ್ ಬೈಕ್ 'ಟ್ಯೂಬ್‌ಲೆಸ್ ಕ್ರಾಸ್-ಸ್ಪೋಕ್ ವೀಲ್'ಗಳೊಂದಿಗೆ ಬಂದಿದ್ದು, ಗಮನ ಸೆಳೆಯುವ 'ಯೆಲ್ಲೋ ಫಾಲ್ಕನ್' (ಹಳದಿ) ಬಣ್ಣದಲ್ಲಿ ಲಭ್ಯವಿದೆ.
ಇದರ ಜತೆಗೆ ರೋಡ್‌ಸ್ಟರ್ ಬೈಕ್ 'ಗ್ರೀನ್ ಮಾಂಬಾ' (ಹಸಿರು) ಮತ್ತು ಸ್ಕ್ರ್ಯಾಂಬ್ಲರ್ ಬೈಕ್ 'ಗ್ರೇ ಪ್ಯಾಂಥರ್' (ಬೂದು) ಬಣ್ಣಗಳಲ್ಲಿ ರಸ್ತೆಗಿಳಿದಿವೆ. ಇದು ಯುವಜನತೆಯ ಸಾಹಸಮಯ ರೈಡಿಂಗ್‌ಗೆ ಹೇಳಿಮಾಡಿಸಿದಂತಿದೆ.
ಬಿಎಸ್‌ಎ - ಬ್ರಿಟಿಷ್ ಲುಕ್‌ನ 'ಸ್ಕ್ರ್ಯಾಂಬ್ಲರ್ 650'
ಬಿಎಸ್‌ಎ ಸಂಸ್ಥೆ ಇದೇ ವರ್ಷದ ಜುಲೈ 23ರಂದು ತನ್ನ ಬಹುನಿರೀಕ್ಷಿತ 'ಸ್ಕ್ರ್ಯಾಂಬ್ಲರ್ 650' ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಹಳೆಯ ಬ್ರಿಟಿಷ್ ಮೋಟಾರ್‌ಸೈಕಲ್ ಪರಂಪರೆ ಹಾಗೂ ಇಂದಿನ ಪವರ್‌ಫುಲ್ ಪರ್ಫಾರ್ಮೆನ್ಸ್ ಎರಡನ್ನೂ ಈ ಬೈಕ್ ಒಳಗೊಂಡಿದೆ. ಹಬ್ಬದ ಸೀಸನ್‌ನಲ್ಲಿ ಬಿಎಸ್‌ಎ ಕೂಡ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದ್ದು, ಕ್ಲಾಸಿಕ್ ಲುಕ್ ಬಯಸುವ ಗ್ರಾಹಕರ ಫೇವರಿಟ್ ಆಗಿದೆ.
ಜಾವಾ - ಇದು 'ಆಲ್ ಸ್ಟಾರ್ಸ್' ವರ್ಷ!
ಜಾವಾ ಬ್ರ್ಯಾಂಡ್‌ಗೆ 2026 ಅತ್ಯಂತ ಪ್ರಮುಖ ವರ್ಷವಾಗಿದೆ. 'ಆಲ್ ಸ್ಟಾರ್ಸ್' ಸರಣಿಯ ಮೂಲಕ ಜಾವಾ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ.
ಆಗಸ್ಟ್ 26ರಂದು 'ಆಲ್ ಸ್ಟಾರ್ಸ್ 42 ಎಫ್‌ಜೆ' ಬಿಡುಗಡೆಯಾಗಿದ್ದರೆ, ಸೆಪ್ಟೆಂಬರ್ 4ರಂದು ಗ್ಲೋಬಲ್ ಚೆಸ್ ಲೀಗ್‌ನಲ್ಲಿ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ 'ಆಲ್ ಸ್ಟಾರ್ಸ್ 42 ಬೊಬ್ಬರ್' ಅನಾವರಣಗೊಳಿಸಿದ್ದರು. ಸೆಪ್ಟೆಂಬರ್ 9ರಂದು ಮುಂಬೈನ ಐತಿಹಾಸಿಕ ಬಲ್ಲಾರ್ಡ್ ಪಿಯರ್‌ನಲ್ಲಿ 'ಆಲ್ ಸ್ಟಾರ್ಸ್ ಜಾವಾ 42 ಒಜಿ'ಯ ಬೃಹತ್ ಅನಾವರಣ ನಡೆದಿತ್ತು. ವಿಶೇಷವೆಂದರೆ, ದಶಕಗಳ ಹಿಂದೆ ಭಾರತಕ್ಕೆ ಮೊದಲ ಜಾವಾ ಬೈಕ್ ಇದೇ ಬಲ್ಲಾರ್ಡ್ ಪಿಯರ್‌ನಲ್ಲಿ ಬಂದಿಳಿದಿತ್ತು.
ಈ ಬಗ್ಗೆ ವಿವರ ಹಂಚಿಕೊಂಡಿರುವ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸ್ಥಾಪಕ ಅನುಪಮ್ ಥರೇಜಾ, "ನಮ್ಮ ಕಂಪನಿಗೆ ಈ ವರ್ಷ ಅತ್ಯಂತ ಖುಷಿ ತಂದಿದೆ. ಹಬ್ಬದ ಸೀಸನ್‌ನಲ್ಲಿ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್‌ಗಳಿಗೆ ಹೊಸ ಅಪ್‌ಡೇಟ್ ನೀಡುತ್ತಿದ್ದೇವೆ. ಬೈಕ್‌ನ ವಿನ್ಯಾಸ ಹೊಸದಾಗಿದ್ದರೂ, ಈ ಮೂರೂ ಬ್ರ್ಯಾಂಡ್‌ಗಳ ಮೂಲ ಪರಂಪರೆ ಮತ್ತು ಕ್ಲಾಸಿಕ್ ಫೀಲ್ ಅನ್ನು ನಾವು ಹಾಗೆಯೇ ಉಳಿಸಿಕೊಂಡಿದ್ದೇವೆ" ಎಂದಿದ್ದಾರೆ.
Season Fashion 2026: ಜೆನ್ ಜಿ ಯುವಕರನ್ನು ಸೆಳೆದ ನೀಲ್ ನಿತಿನ್ ಧರಿಸಿದ ವೈಬ್ರೆಂಟ್ ಕಲರ್ ಕುರ್ತಾ
ಒಟ್ಟಾರೆ ಈ ಹಬ್ಬದ ಸೀಸನ್‌ನಲ್ಲಿ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಬೈಕ್‌ಗಳ ಹೊಸ ಅವತಾರಗಳು ಬೈಕ್ ಪ್ರಿಯರಿಗೆ ಮತ್ತು ಲಾಂಗ್ ಡ್ರೈವ್ ಇಷ್ಟಪಡುವ ಯುವಜನತೆಗೆ ಸಖತ್ ಥ್ರಿಲ್ ನೀಡಲಿವೆ.