ಕಲಬುರಗಿ: ರಸ್ತೆ ಮಧ್ಯೆ ನಿಲ್ಲಿಸಿದ್ದ ಆಟೋವನ್ನು ಪಕ್ಕಕ್ಕೆ ಹಾಕುವಂತೆ ಹೇಳಿದ್ದಕ್ಕೆ ಇಬ್ಬರು ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ (assault case) ನಡೆಸಿದ ಘಟನೆ ಕಲಬುರಗಿ (Kalaburagi) ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ನಿವಾಸಿಗಳಾದ ತೋಟೆಂದ್ರ ಮತ್ತು ಸುನೀಲ್ ಹಲ್ಲೆಗೊಳಗಾದವರು. ಆರೋಪಿಗಳು ದೊಣ್ಣೆಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೋಟೆಂದ್ರ ಅವರು ತಮ್ಮ ಸಹೋದರಿಯ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿ ವಾಪಸ್ ಬರುವಾಗ ರಸ್ತೆ ಮಧ್ಯೆ ಆಟೋ ನಿಲ್ಲಿಸಿದ್ದನ್ನು ಗಮನಿಸಿ, ಪಕ್ಕಕ್ಕೆ ಹಾಕುವಂತೆ ಹೇಳಿದ್ದಾರೆ. ಇದರಿಂದ ಮಾತಿನ ಚಕಮಕಿ ಉಂಟಾಗಿ, ಬಳಿಕ ಗಲಾಟೆ ತೀವ್ರಗೊಂಡಿದೆ. ಈ ವೇಳೆ ಕಿಡಿಗೇಡಿಗಳು ದೊಣ್ಣೆಗಳಿಂದ ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆನ್‌ಲೈನ್ ಮೂಲಕ ಸಾಲ ಕೊಡಿಸುವುದಾಗಿ ಜನರಿಗೆ ವಂಚನೆ; ಮೂವರ ಬಂಧನ
ರಾಯಚೂರು: ಆನ್‌ಲೈನ್ ಮೂಲಕ ಸಾಲ ಕೊಡಿಸುವುದಾಗಿ ಹೇಳಿ ಜನರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ರಾಯಚೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ. ಮಹೇಶ ಚಿಲ್ಲಾಳ (27), ವೀರೇಶ (24), ಪ್ರಭು (34) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಿಂದ 8 ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಒಂದು ಕಾರು ಹಾಗೂ ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಲಾಗಿದೆ.
Janivara Row: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣದ ವಿಚಾರಣೆಗೆ ತನಿಖಾ ತಂಡ ರಚನೆ
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದ ಲಕ್ಷ್ಮಣ ಲೇಔಟ್‌ನಲ್ಲಿ ವಾಸವಾಗಿದ್ದ ಮೂವರು, ಆನ್‌ಲೈನ್ ಸಾಲ ನೀಡುವುದಾಗಿ ಜನರನ್ನು ನಂಬಿಸಿ ಅವರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿ ಇತರೆ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು. ಬಳಿಕ ವಿವಿಧ ಕಂಪನಿಗಳ ಸಿಮ್ ಕಾರ್ಡ್‌ಗಳನ್ನು ಬಳಸಿ ಕ್ಯೂಆರ್ ಕೋಡ್ ಸೃಷ್ಟಿಸಿ, ಜನರಿಂದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿಕೊಂಡು ವಂಚಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಠಾಣೆಯ ಪ್ರಭಾರಿ ಡಿವೈಎಸ್‌ಪಿ ಶಾಂತವೀರ ಇ. ಅವರ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.