ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kalaburagi news: ಘೋರ ದುರಂತ, ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಛ ಮಾಡಲು ಇಳಿದ ಇಬ್ಬರು ಸಾವು

ಶಿವಕುಮಾ‌ರ್ ಅವರು ತಮ್ಮ ಮನೆಯಲ್ಲಿನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ರತನ್ ಎಂಬವರಿಗೆ ಹೇಳಿದ್ದು ಆತ ಟ್ಯಾಂಕ್ ಒಳಗಡೆ ಇಳಿದಿದ್ದರು. ರತನ್ ಒಳಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ರತನ್ ಮೇಲೆ ಬರದಿದ್ದಾಗ ಆತನ ರಕ್ಷಣೆಗೆ ತೆರಳಿದ ಮನೆಯ ಮಾಲೀಕ ಶಿವಕುಮಾರ್‌ ಅವರೂ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಪ್ರಾತಿನಿಧಿಕ ಚಿತ್ರ

ಕಲಬುರಗಿ, ಫೆ.19 : ಕಲಬುರಗಿಯಲ್ಲಿ (Kalaburagi news)‌ ಘೋರ ದುರಂತವೊಂದು ಸಂಭವಿಸಿದ್ದು, ಮನೆಯ ಸೆಪ್ಟಿಕ್ ಟ್ಯಾಂಕ್ (septic tank) ಸ್ವಚ್ಛ ಮಾಡಲು ಇಳಿದಿದ್ದ ಕಾರ್ಮಿಕ (labourer) ಹಾಗೂ ಮನೆಯ ಮಾಲೀಕ ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿರುವ (death) ಘಟನೆ ನಡೆದಿದೆ. ಕಾರ್ಮಿಕ ರತನ್ ಹಾಗೂ ಮನೆಯ ಮಾಲೀಕ ಶಿವಕುಮಾರ್ ನಂದೂರ್ ಮೃತರು.

ಶಿವಕುಮಾ‌ರ್ ಅವರು ತಮ್ಮ ಮನೆಯಲ್ಲಿನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ರತನ್ ಎಂಬವರಿಗೆ ಹೇಳಿದ್ದು ಆತ ಟ್ಯಾಂಕ್ ಒಳಗಡೆ ಇಳಿದಿದ್ದರು. ರತನ್ ಒಳಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ರತನ್ ಮೇಲೆ ಬರದಿದ್ದಾಗ ಆತನ ರಕ್ಷಣೆಗೆ ತೆರಳಿದ ಮನೆಯ ಮಾಲೀಕ ಶಿವಕುಮಾರ್‌ ಅವರೂ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಅಶೋಕನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓವರ್ ಟೆಕ್ ಮಾಡುವಾಗ ಲಾರಿ ಚಕ್ರಕ್ಕೆ ಬೈಕ್‌ ಸಿಲುಕಿ ಇಬ್ಬರು ಸಾವು

ಕೊಪ್ಪಳ: ಓವರ್ ಟೆಕ್ ಮಾಡುವ ವೇಳೆ ಲಾರಿ ಚಕ್ರಕ್ಕೆ ಬೈಕ್‌ ಸಿಲುಕಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಪಲದಿನ್ನಿ ಎಂಬ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ನಿವಾಸಿಗಳಾದ ಶ್ರೀನಿವಾಸ್ (26) ಹಾಗೂ ಸಿದ್ದನಗೌಡ (25) ಮೃತ ಸವಾರರು ಎಂದು ತಿಳಿದುಬಂದಿದೆ. ಸಂಬಂಧಿಕರೊಬ್ಬರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶ್ರೀನಿವಾಸ್ ಸ್ನೇಹಿತನ ಜತೆಗೆ ತೆರಳುತ್ತಿದ್ದರು. ಮುಸಲಾಪುರದಿಂದ ಬೈಕ್‌ನಲ್ಲಿ ಹಿರೇ ಅರಳಹಳ್ಳಿಗೆ ಇಬ್ಬರು ತೆರಳುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಲಾರಿ ಕೆಳಗಡೆ ಸಿಲುಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳಮುಖಿ ಜತೆ ಪ್ರೀತಿಯಲ್ಲಿದ್ದ ಯುವಕ; ಬಾಡಿಗೆ ಮನೆಯಲ್ಲಿ ಇಬ್ಬರೂ ಅನುಮಾನಾಸ್ಪದ ಸಾವು

ಹರೀಶ್‌ ಕೇರ

View all posts by this author